ಬೆಳಗಾವಿ ಜಿಲ್ಲೆಯ ಸುದ್ದಿ
ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ : 397 ಕಾಳಜಿ ಕೇಂದ್ರಗಳ ಸೌಲಭ್ಯ ಪರಿಶೀಲನೆಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ
ಜಿಲ್ಲೆಯಲ್ಲಿ ಸಂಭವನೀಯ ಪ್ರವಾಹ ಪರಿಸ್ಥಿತಿಯಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಎಸ್.ಡಿ.ಆರ್.ಎಫ್.ನ 5, ಅಗ್ನಿಶಾಮಕ ಇಲಾಖೆಯ 9, ತಾಲೂಕಿನಲ್ಲಿ 27 ಸೇರಿದಂತರ ಒಟ್ಟು 41 ಬೋಟುಗಳು ಲಭ್ಯವಿರುತ್ತವೆ. ಸಂಭವನೀಯ ಪ್ರವಾಹ ಸಂದರ್ಭದಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಜಿಲ್ಲೆಯಲ್ಲಿ 397 ಪರಿಹಾರ ಕೇಂದ್ರ ಹಾಗೂ 129 ಗೋಶಿಬಿರಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.