ಬ್ರೇಕಿಂಗ್
ಸಾಮರಸ್ಯ ಕೆಡಿಸುವ ಎಂಇಎಸ್‌, ಶಿವಸೇನೆ ನಿಷೇಧಕ್ಕೆ ಕರವೇ ಆಗ್ರಹ ಸುವರ್ಣ ಸೌಧದ ಎದುರು ಅಂತರಾಷ್ಟ್ರೀಯ ಯೋಗ‌ ದಿನಾಚರಣೆ ಸೈಬರ್ ವಂಚನೆಯಿಂದ ಹಣ ಕಳೆದುಹೋಗದಂತೆ ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನದ ಬಿಗಿಕ್ರಮ - ಪ್ರಿಯಾಂಕ ಖರ್ಗೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಲು ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬಿಳಿಮಲೆ ಆಗ್ರಹ ರಕ್ಷಣಾ ಭದ್ರತಾ ದಳಕ್ಕೆ (ಡಿಎಸ್‌ಸಿ) ಮಾಜಿ ಸೈನಿಕರ ನೇಮಕಾತಿ ಮಂಗಾವತಿ :   ಸೇವಾ ನಿವೃತ್ತ ಹಾಗೂ ಪ್ರತಿಭಾ ಸಾಧಕರಿಗೆ ಗೌರವ ಸನ್ಮಾನ 232 ಗ್ರೇಡ್-2 ತಹಶೀಲ್ದಾರ್‌ಗಳಿಗೆ ಗ್ರೇಡ್-1 ತಹಶೀಲ್ದಾರ್ ಹುದ್ದೆಗೆ ಬಡ್ತಿ ಮಹಾದಾಯಿ, ಕೃಷ್ಣೆ, ಕಾವೇರಿ ಜಲ ವಿವಾದ ನಿವಾರಣೆಗೆ ರಾಜ್ಯ ಸರ್ಕಾರದ ಹೆಚ್ಚಿನ ಮುತವರ್ಜಿ ಅಗತ್ಯ : ನ್ಯಾಯವಾದಿ ಮೋಹನ ಕಾತರಕಿ ಸಂವಿಧಾನ ಹಾಗೂ ಬಾಬಾಸಾಹೇಬರ ಸಿದ್ಧಂತಕ್ಕೆ ಅನುಸಾರ ರಾಜಕೀಯ ಮಾಡುತ್ತ ಬಂದಿದ್ದೇನೆ - ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಸ್ಪಷ್ಟನೆ ಅಭಿವೃದ್ಧಿಯ ಸ್ಪಷ್ಟವಾದ ಗುರಿಯೊಂದಿಗೆ ನರೇಂದ್ರ ಮೋದಿ ಸರ್ಕಾರ ಸಾಧನೆ : ಕೇಂದ್ರ ಸಚಿವ ಭೂಪತಿರಾಜ್ ಶ್ರೀನಿವಾಸ ವರ್ಮಾ ಸಾಮರಸ್ಯ ಕೆಡಿಸುವ ಎಂಇಎಸ್‌, ಶಿವಸೇನೆ ನಿಷೇಧಕ್ಕೆ ಕರವೇ ಆಗ್ರಹ ಸುವರ್ಣ ಸೌಧದ ಎದುರು ಅಂತರಾಷ್ಟ್ರೀಯ ಯೋಗ‌ ದಿನಾಚರಣೆ ಸೈಬರ್ ವಂಚನೆಯಿಂದ ಹಣ ಕಳೆದುಹೋಗದಂತೆ ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನದ ಬಿಗಿಕ್ರಮ - ಪ್ರಿಯಾಂಕ ಖರ್ಗೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಲು ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬಿಳಿಮಲೆ ಆಗ್ರಹ ರಕ್ಷಣಾ ಭದ್ರತಾ ದಳಕ್ಕೆ (ಡಿಎಸ್‌ಸಿ) ಮಾಜಿ ಸೈನಿಕರ ನೇಮಕಾತಿ ಮಂಗಾವತಿ :   ಸೇವಾ ನಿವೃತ್ತ ಹಾಗೂ ಪ್ರತಿಭಾ ಸಾಧಕರಿಗೆ ಗೌರವ ಸನ್ಮಾನ 232 ಗ್ರೇಡ್-2 ತಹಶೀಲ್ದಾರ್‌ಗಳಿಗೆ ಗ್ರೇಡ್-1 ತಹಶೀಲ್ದಾರ್ ಹುದ್ದೆಗೆ ಬಡ್ತಿ ಮಹಾದಾಯಿ, ಕೃಷ್ಣೆ, ಕಾವೇರಿ ಜಲ ವಿವಾದ ನಿವಾರಣೆಗೆ ರಾಜ್ಯ ಸರ್ಕಾರದ ಹೆಚ್ಚಿನ ಮುತವರ್ಜಿ ಅಗತ್ಯ : ನ್ಯಾಯವಾದಿ ಮೋಹನ ಕಾತರಕಿ ಸಂವಿಧಾನ ಹಾಗೂ ಬಾಬಾಸಾಹೇಬರ ಸಿದ್ಧಂತಕ್ಕೆ ಅನುಸಾರ ರಾಜಕೀಯ ಮಾಡುತ್ತ ಬಂದಿದ್ದೇನೆ - ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಸ್ಪಷ್ಟನೆ ಅಭಿವೃದ್ಧಿಯ ಸ್ಪಷ್ಟವಾದ ಗುರಿಯೊಂದಿಗೆ ನರೇಂದ್ರ ಮೋದಿ ಸರ್ಕಾರ ಸಾಧನೆ : ಕೇಂದ್ರ ಸಚಿವ ಭೂಪತಿರಾಜ್ ಶ್ರೀನಿವಾಸ ವರ್ಮಾ
21 ಜೂನ್ 2026
ವಾಯುಪಡೆ ಅಗ್ನಿವೀರ  ನಿರ್ಗಮನ ಪಥ ಸಂಚಲನ; ಆಕರ್ಷಕ ವೈಮಾನಿಕ ಪ್ರದರ್ಶನ
📄 ರಾಷ್ಟ್ರೀಯ ಸುದ್ದಿ
Dr. K N Doddmani · · 153 ವೀಕ್ಷಣೆಗಳು

ವಾಯುಪಡೆ ಅಗ್ನಿವೀರ ನಿರ್ಗಮನ ಪಥ ಸಂಚಲನ; ಆಕರ್ಷಕ ವೈಮಾನಿಕ ಪ್ರದರ್ಶನ

ವಾಯುಪಡೆ ಅಗ್ನಿವೀರ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚನ ನಿಮಿತ್ತ ಈ ಸಲ ಭಾರತೀಯ ವಾಯುಸೇನೆಯ ವಿಶ್ವವಿಖ್ಯಾತ ಕುಶಾಲಾಗ್ರ ಸಾರಂಗ ಪೈಲಟ್ ತಂಡದಿಂದ ರೋಮಾಂಚಕಾರಿ ಹೆಲಿಕಾಪ್ಟರ್ ಪ್ರದರ್ಶನ ವಾಯುಪಡೆ ತರಬೇತಿ ಶಾಲೆಯ ಆವರಣದಲ್ಲಿ ಪ್ರದೇಶದಲ್ಲಿ ನಡೆಯಿತು. ಐದು ಹೆಲಿಕಾಪ್ಟರ್ ಗಳು ಸುಮಾರು 15 ನಿಮಿಷದ ವರೆಗೆ ನೀಡಿದ ಪ್ರದರ್ಶನ ರೋಮಾಂಚಕಾರಿಯಾಗಿತ್ತು.

ವಾಯುಪಡೆ ಅಗ್ನಿವೀರ ಏಳನೇ ತಂಡದ ನಿರ್ಗಮನ ಪಥ ಸಂಚಲನ ಹಾಗೂ ಸಾರಂಗ ತಂಡದಿಂದ ಆಕರ್ಷಕ ವೈಮಾನಿಕ ಪ್ರದರ್ಶನ

ಬೆಳಗಾವಿ ಸಾಂಬ್ರಾದ ಭಾರತೀಯ ವಾಯುಪಡೆಯ ತರಬೇತಿ ಶಾಲೆಯಲ್ಲಿ ಸತತ 22 ವಾರಗಳ ವರೆಗೆ ಅತ್ಯಂತ ಕಠಿಣ ಹಾಗೂ ಪರಿಣಾಮಾತ್ಮ ತರಬೇತಿ ಪಡೆದ 7ನೇ ತಂಡದ 1 ಸಾವಿರದ 250 ಪ್ರಶಿಕ್ಷಣಾರ್ಥಿಗಳ ನಿರ್ಗಮನ ಆಕರ್ಷಕ ಪಥ ಸಂಚಲನ ಇಂದು ಸಾಂಬ್ರಾ ತರಬೇತಿ ಶಾಲಾ ಆವರಣದಲ್ಲಿ ಜರುಗಿತು.

ಏರ್‌ಮೆನ್ ತರಬೇತಿ ಶಾಲೆಯ ಕಮಾಂಡಿಂಗ್ ಏರ್ ಆಫೀಸರ್ ಸೂರಜ್ ಶಂಕರ್, ವಾಯುಪಡೆ ಅಗ್ನಿವೀರರ ನಿರ್ಗಮನ ಪಥ ಸಂಚಲನ ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿದರು.

ಏರ್ ವೈಸ್ ಮಾರ್ಷಲ್ ಮುಖೇಶ್ ಕುಮಾರ್ ಯಾದವ್, ಕಮಾಂಡಿಂಗ್ ಅಧಿಕಾರಿ ಕ್ಯಾಪ್ಟನ್ ಅಭಿಜೀತ್ ಕುಮಾರ, ಬೆಳಗಾವಿ ಪೊಲೀಸ್ ಆಯುಕ್ತ ಬೋರಸ್ ಭೂಷಣ ಸೇರಿದಂತೆ ಅನೇಕ ಅಣ್ಯರು ಹಾಗೂ ಅಗ್ನಿವೀರ ಕುಟುಂಬ ಸಂಬಂಧಿಗಳು ಉಪಸ್ಥಿತರಿದ್ದರು.

ತರಬೇತಿ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ನೀಡಿ ರ್ಯಾಂಕ್ ಗಳಿಸಿದ ಐದು ಜನ ಪ್ರಶಿಕ್ಷಣಾರ್ಥಿಗಳಿಗೆ ಕಮಾಂಡಿಂಗ್ ಏರ್ ಆಫೀಸರ್ ಸೂರಜ್ ಶಂಕರ್ ಅವರು ಪ್ರಶಸ್ತಿ ‌ಫಲಕ ನೀಡಿ‌ ಗೌರವಿಸಿದರು.

ಪ್ರಶಿಕ್ಷಣಾರ್ಥಿಗಳ ಡ್ರಿಲ್ ಪ್ರದರ್ಶನ ಹಾಗೂ ಕೌಶಲ್ಯತೆಯ ಪ್ರದರ್ಶನ ಆಕರ್ಷಕವಾಗಿತ್ತು.

ರೋಮಾಂಚನಗೊಳಿಸಿದ ಹೆಲಿಕಾಪ್ಟರ್ ವೈಮಾನಿಕ ಪ್ರದರ್ಶನ:

ವಾಯುಪಡೆ ಅಗ್ನಿವೀರ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚನ ನಿಮಿತ್ತ ಈ ಸಲ ಭಾರತೀಯ ವಾಯುಸೇನೆಯ ವಿಶ್ವವಿಖ್ಯಾತ ಕುಶಾಲಾಗ್ರ ಸಾರಂಗ ಪೈಲಟ್ ತಂಡದಿಂದ ರೋಮಾಂಚಕಾರಿ ಹೆಲಿಕಾಪ್ಟರ್ ಪ್ರದರ್ಶನ ವಾಯುಪಡೆ ತರಬೇತಿ ಶಾಲೆಯ ಆವರಣದಲ್ಲಿ ಪ್ರದೇಶದಲ್ಲಿ ನಡೆಯಿತು. ಐದು ಹೆಲಿಕಾಪ್ಟರ್ ಗಳು ಸುಮಾರು 15 ನಿಮಿಷದ ವರೆಗೆ ನೀಡಿದ ಪ್ರದರ್ಶನ ರೋಮಾಂಚಕಾರಿಯಾಗಿತ್ತು. ಆಕಾಶದಲ್ಲಿ ಮೂಡಿಸಿದ ವಿಭಿನ್ನ ಚಿತ್ತಾರ ವೀಕ್ಷಕರ ವಿಶೇಷ ಗಮನ ಸೆಳೆಯಿತು.

ಏರ್ ಶೋನಲ್ಲಿ ವಿಶ್ವದಲ್ಲೇ ಏಕೈಕ 5 ಹೆಲಿಕಾಪ್ಟರ್ ಡಿಸ್ಪ್ಲೇ ತಂಡವಾದ 'ಸಾರಂಗ್', ಸ್ವದೇಶಿ ನಿರ್ಮಿತ ಎಎಲ್ಎಚ್ ಧ್ರುವ (ALH Dhruv) ಹೆಲಿಕಾಪ್ಟರ್ಗಳನ್ನು ಬಳಸಿ ಆಕಾಶದಲ್ಲಿ ನಾನಾ ರೀತಿಯ ಕಸರತ್ತುಗಳನ್ನು ನಡೆಸಿ ವಿಭಿನ್ನ ಚಿತ್ತರ ಮೂಡಿಸಿ ನೋಡುಗರನ್ನು ಬೆರಗುಗೊಳಿಸಲಾಯಿತು.

ಪ್ರಶಿಕ್ಷಣಾರ್ಥಿಗಳ ಗೌರವ ವಂದನೆ ಸ್ವೀಕರಿಸಿ, ಶುಭ ಕೋರಿ ಮಾತನಾಡಿದ ಏರ್ ಕಮಾಂಡರ್ ಸೂರಜ್ ಶಂಕರ, ಅತ್ಯಂತ ಕಡಿಮೆ ಅವಧಿಯಲ್ಲಿ ಉತ್ತಮ ತರಬೇತಿ ಪಡೆದದ್ದು ಶ್ಲಾಘನೀಯ. ವಾಯುಪಡೆಯಲ್ಲಿ ಮಹಿಳೆಯರಿಗೂ ಪ್ರಧಾನ ಆದ್ಯತೆ‌ ನೀಡಿರುವುದು ಹೆಮ್ಮೆಯ ವಿಷಯ. ಪುರುಷರೊಂದಿಗೆ ಮಹಿಳೆಯರು ವಾಯುಪಡೆಯಲ್ಲಿ ಸಾಮರ್ಥ್ಯ ಪ್ರದರ್ಶಿಸುತ್ತಿರುವುದು ಅವರ ಆತ್ಮವಿಶ್ವಾಸದ ನಿದರ್ಶನವಾಗಿದೆ.ದೇಶದ ಭದ್ರತೆ ಹಾಗೂ ಯುದ್ಧ ಸಂದರ್ಭದಲ್ಲಿ ವಾಯುಪಡೆ ಜವಾಬ್ದಾರಿಯುತ ವಿಶೇಷ ಪಾತ್ರ ವಹಿಸುತ್ತ ಬಂದಿದೆ. ಪ್ರಸ್ತುತ ತರಬೇತಿ ಪಡೆದ ಅಗ್ನಿವೀರರು ದೇಶದ ಸಾರ್ವಭೌಮತೆಗೆ ಅತ್ಯಂತ ಶ್ರದ್ಧೆಯಿಂದ‌ ಶ್ರಮಿಸುವಿರಿ ಎಂಬ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು.

**

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

6 ರಂದು ಸಾಂಬ್ರಾದಲ್ಲಿ ಸಾರಂಗ ಹೆಲಿಕಾಪ್ಟರ್ ತಂಡದಿಂದ ಆಕಾಶದಲ್ಲಿ ಆಕರ್ಷಕ ಚಿತ್ತಾರ ರಾಷ್ಟ್ರೀಯ ಸುದ್ದಿ

6 ರಂದು ಸಾಂಬ್ರಾದಲ್ಲಿ ಸಾರಂಗ ಹೆಲಿಕಾಪ್ಟರ್ ತಂಡದಿಂದ ಆಕಾಶದಲ್ಲಿ ಆಕರ್ಷಕ ಚಿತ್ತಾರ

ವಾಯುಪಡೆಯ ಶಾಲೆಯಲ್ಲಿ ತರಬೇತಿ ಪಡೆದ 7ನೇ ತಂಡದ 1 ಸಾವಿರದ 250 ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚನ ನಿಮಿತ್ತ ಸಾರಂಗ ತಂಡದಿಂದ ಅತ್ಯಾಕರ್ಷಕ ಹೆಲಿಕಾಪ್ಟರ್ ಪ್ರದರ್ಶನ ಜರುಗಲಿದೆ

Admin