ಬ್ರೇಕಿಂಗ್
ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ
19 ಸೆಪ್ಟೆಂ 2026
ಸಂವಿಧಾನ ಹಾಗೂ ಬಾಬಾಸಾಹೇಬರ ಸಿದ್ಧಂತಕ್ಕೆ ಅನುಸಾರ ರಾಜಕೀಯ ಮಾಡುತ್ತ ಬಂದಿದ್ದೇನೆ - ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಸ್ಪಷ್ಟನೆ
🏛️ ರಾಜಕೀಯ - ಆಡಳಿತ
Dr. K N Doddmani · · 78 ವೀಕ್ಷಣೆಗಳು

ಸಂವಿಧಾನ ಹಾಗೂ ಬಾಬಾಸಾಹೇಬರ ಸಿದ್ಧಂತಕ್ಕೆ ಅನುಸಾರ ರಾಜಕೀಯ ಮಾಡುತ್ತ ಬಂದಿದ್ದೇನೆ - ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಸ್ಪಷ್ಟನೆ

ಸಾರ್ವಜನಿಕ ಜೀವನದಲ್ಲಿ ಇರುವವರು ಯಾರೂ ಸಹ ಪ್ರಶ್ನಾತೀತರಲ್ಲ ಎಂಬ ಅರಿವು ನನಗೂ ಇದೆ.‌ ಆದರೆ ದುರುದ್ದೇಶಪೂರಿತವಾದ ಅಪಪ್ರಚಾರ, ಸುಳ್ಳು ಆಪಾದನೆ, ಅಸಹನೆ ಮತ್ತು ಕುತಂತ್ರಗಳಿಗೆ ಜಾಗ ಇರಬಾರದು.

40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಸಂವಿಧಾನ ಮತ್ತು ಬಾಬಾ ಸಾಹೇಬರ ಸಿದ್ಧಾಂತಕ್ಕೆ ಅನುಗುಣವಾಗಿ ರಾಜಕೀಯ ಮಾಡುತ್ತಾ ಬಂದಿರುವ ನನಗೆ ಈಗ ನನ್ನ ಮೇಲೆ ಬರುತ್ತಿರುವ ಆಧಾರ ರಹಿತವಾದ ಆರೋಪಗಳನ್ನು ಕೇಳಿ ನಗು ಬರುತ್ತಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಎಚ್. ಸಿ. ಮಹಾದೇವಪ್ಪ ಸ್ಪಷ್ಟಪಡಿಸಿದ್ದಾರೆ.

ಪರಿಶಿಷ್ಟ ಸಮುದಾಯಕ್ಕೆ ಹೇಳಿಕೊಳ್ಳುವ ಕಾರ್ಯ ಸಾಧನೆಗಳೇನೂ ಮಾಡಿಲ್ಲ, ಈ ಸಮುದಾಯದ ಕಲ್ಯಾಣಕ್ಕೆ ಮೀಸಲಾದ ಹಣ ಸರ್ಕಾರದ ಅನ್ಯ ಯೋಜನೆಗಳಿಗೆ ಬಳಸಲಾಗಿರುವುದನ್ನು ಇವರು ಪ್ರಶ್ನಿಸಿಲ್ಲ ಎಂಬ ಅನೇಕ ಆರೋಪಗಳು ಇವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದಕ್ಕೆ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅವರು ಉತ್ತರಿಸಿದ್ದಾರೆ.

ವಾಸ್ತವವಾಗಿ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲೇ ಮಾಡಲಾಗುತ್ತಿರುವ ಈ ಆರೋಪಗಳ ಹಿಂದಿನ ಮರ್ಮವು ಸಣ್ಣ‌ಮಕ್ಕಳಿಗೂ ಅರ್ಥ ಆಗುವ ಕಾರಣದಿಂದ ಈ ಆರೋಪಗಳ ಸ್ವರೂಪ ಎಂಥದ್ದು ಅದರ ಹಿಂದಿನ ಕಾರಣ ಏನಾಗಿರುತ್ತದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸಾರ್ವಜನಿಕ ಜೀವನದಲ್ಲಿ ಇರುವವರು ಯಾರೂ ಸಹ ಪ್ರಶ್ನಾತೀತರಲ್ಲ ಎಂಬ ಅರಿವು ನನಗೂ ಇದೆ.‌ ಆದರೆ ದುರುದ್ದೇಶಪೂರಿತವಾದ ಅಪಪ್ರಚಾರ, ಸುಳ್ಳು ಆಪಾದನೆ, ಅಸಹನೆ ಮತ್ತು ಕುತಂತ್ರಗಳಿಗೆ ಜಾಗ ಇರಬಾರದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಬದುಕಲ್ಲಿ ಅಷ್ಟೆಲ್ಲಾ ಅವಮಾನಗಳಾದರೂ ಅವರು ಅದನ್ನು ನುಂಗಿಕೊಂಡು ದೇಶದ ಜನರ ಹಿತಕ್ಕಾಗಿ ಶ್ರಮಿಸಿದ್ದಾರೆ. ಹೀಗಾಗಿ ಬಾಬಾ ಸಾಹೇಬರನ್ನು ಅನುಸರಿಸುವ ನನಗೂ ಕೂಡಾ ಅವರ ತತ್ವಗಳೇ ಮಾದರಿ ಆಗಿದ್ದು ಯಾರನ್ನೂ ಸಹ ದ್ವೇಷ ಮಾಡುವುದು ನನ್ನಿಂದ ಸಾಧ್ಯವಿಲ್ಲ.

ಈ ಎರಡೂ ಅವದಿಯ ಕಾಂಗ್ರೆಸ್ ಅಧಿಕಾರದಲ್ಲಿ ಸಚಿವನಾಗಿ ಪಕ್ಷಕ್ಕೆ ಹೆಸರು ತರುವ ಜನರಿಗೆ ಅನುಕೂಲ ಉಂಟು ಮಾಡುವ ಕೆಲಸವನ್ನು ಮಾಡಿದ್ದೇನೆ.

ಲೋಕೋಪಯೋಗಿ ಸಚಿವನಾಗಿದ್ದಾಗ ಈ ರಾಜ್ಯದಲ್ಲಿ 30 ಸಾವಿರ ಕಿಲೋಮೀಟರ್ ರಸ್ತೆಗಳು, ಸೇತುವೆ, ಬೃಹತ್ ಕಟ್ಟಡಗಳು ಮತ್ತು ಮೂಲ ಸೌಕರ್ಯವನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡಿದ್ದೇನೆಯೇ ಹೊರತು, ಹಣದ ಹಿಂದೆ ಬಿದ್ದಿರಲಿಲ್ಲ.

ಇದರ ಜೊತೆಗೆ ಪರಿಶಿಷ್ಟರ ಪರವಾದ ಕಾನೂನು ಕಾಯ್ದೆಗಳನ್ನು ರೂಪಿಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ.

ಇನ್ನು ಸಮಾಜ ಕಲ್ಯಾಣ ಸಚಿವನಾಗಿ, ರಾಜ್ಯದ ಆರ್ಥಿಕ ಪರಿಸ್ಥಿಯನ್ನು ಗಮನದಲ್ಲಿಟ್ಟುಕೊಂಡೇ ಜನರ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ ಮತ್ತು ಸಂವಿಧಾನಾತ್ಮಕ ವಾತಾವರಣ ಸೃಷ್ಟಿ ಮಾಡುವ ದಿಕ್ಕಿನೆಡೆ ನನ್ನ ಬದ್ಧತೆಯನ್ನು ಜಾರಿಗೊಳಿಸಿದ್ದೇನೆ.

ಮುಖ್ಯವಾಗಿ ಕಾನೂನಿನ ಪರಿಮಿತಿಯನ್ನು ಬಿಟ್ಟು ನಾನು ಎಂದಿಗೂ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ. ಇದು ನನಗೆ ಸಚಿವ ಸ್ಥಾನದ ಜವಾಬ್ದಾರಿ ನೀಡಿದವರಿಗೂ ಮತ್ತು ಸಮುದಾಯದ ಎಲ್ಲ ಜನರಿಗೂ ಮತ್ತು ನನ್ನ ತಿಳುವಳಿಕೆಯನ್ನು ಬೆಳೆಸಿದ ದಲಿತ ಸಂಘಟನೆಗಳಿಗೂ ಚೆನ್ನಾಗಿ ತಿಳಿದಿದೆ

ಹೀಗಿರುವಾಗ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಯಾರೋ ಕೆಲವರು ಮಾಡುತ್ತಿರುವ ತಳ ಬುಡವಿಲ್ಲದ ಆರೋಪಗಳು ಮತ್ತು ಅದಕ್ಕೆ ಹಿಂದಿರುವ ಕಾರಣಗಳು ಏನು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಈ ವೇಳೆ ವಿನಂತಿಸುತ್ತೇನೆ

ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಹೀಗಾಗಿ ಈ ಸಂದರ್ಭದಲ್ಲಿ ನಾನು ಇಷ್ಟು ಮಾತ್ರ ಹೇಳಲು ಬಯಸುತ್ತೇನೆ ಎಂದು ಎಚ್.ಸಿ. ಮಹಾದೇವಪ್ಪ ವಿವರಣೆ ನೀಡಿದ್ದಾರೆ.

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

 ಅನ್ಯರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದು ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿದೆ : ಬಿಜೆಪಿ ರಾಜಕೀಯ - ಆಡಳಿತ

ಅನ್ಯರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದು ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿದೆ : ಬಿಜೆಪಿ

ವಿವಿಧ ರಾಜ್ಯ ಪ್ರಯೋಜನಗಳು, ಸರ್ಕಾರಿ ದಾಖಲೆಗಳು, ಶೈಕ್ಷಣಿಕ ಪ್ರವೇಶಗಳು, ಉದ್ಯೋಗಾವಕಾಶಗಳು ಮತ್ತು ಇತರ ಅರ್ಹತೆಗಳನ್ನು ಪಡೆಯಲು ಇದನ್ನು ಅವಲಂಬಿಸುವ ಅಪಾಯವಿದೆ -ಎ ಕಳವಳ

Admin