🎓 ಶಿಕ್ಷಣ
Dr. K N Doddmani
·
·
141 ವೀಕ್ಷಣೆಗಳು
ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್
ಅಸ್ಮಿತೆ ವರದಿ, ಸೆ.೦೭: ಬೆಳಗಾವಿಯ ಚಿಂತಮನ್‌ರಾವ್ ಪದವಿ ಪೂರ್ವ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಷಯ ಉಪನ್ಯಾಸಕ ವಿನೋದ್ ಜಾಧವ ಅವರು "ಅಯಾನಿಕ್ ದ್ರವಗಳನ್ನು ಬಳಸಿಕೊಂಡು ಜೈವಿಕವಾಗಿ ಸಕ್ರಿಯವಾಗಿರುವ ಆರೊಮ್ಯಾಟಿಕ್ ಮತ್ತು ಹೆಟೆರೊಸೈಕ್ಲಿಕ್ ಸಂಯುಕ್ತಗಳ ಸಂಶ್ಲೇಷಿತ ಅಧ್ಯಯನಗಳು" ವಿಷಯ ಕುರಿತು ಕೈಗೊಂಡ ಪಿಎಚ್. ಡಿ ಸಂಶೋಧನಾ ಮಹಾಪ್ರಬಂಧವನ್ನು ಮನ್ನಿಸಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.
ವಿನೋದ್ ಜಾದವ ಅವರ ಸಂಶೋಧನೆಗೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ರಾಜೇಶ್ ಕಲ್ಖಾಂಬ್ಕರ್ ಅವರು ಮಾರ್ಗದರ್ಶನ ನೀಡಿದರು.
ವಿನೋದ ಜಾಧವ ಅವರ ಸಾಧನೆಗೆ ಚಿಂತಾಮನ್ ರಾವ್ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
***
ಈ ಲೇಖನ ಹಂಚಿಕೊಳ್ಳಿ