ಬ್ರೇಕಿಂಗ್
ಗೊತ್ತುವಳಿ ಅಂಗೀಕರಿಸದಿದ್ದರೆ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಯೊಂದಿಗೆ ಚರ್ಚೆ - ಸಚಿವ ಯತೀಂದ್ರ ಸಿದ್ಧರಾಮಯ್ಯ ಎಚ್ಚರಿಕೆ ಸಕಾಲಕ್ಕೆ ಮಾಹಿತಿ‌ ಒದಗಿಸದ ತಹಶೀಲ್ದಾರ ಸೇರಿ ಮೂವರಿಗೆ ತಲಾ 10 ಸಾವಿರ ದಂಡ “ಪ್ರಾಚೀನ ಬೌದ್ಧ ತಾಣ ಸಾರನಾಥ” ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರ್ಪಡೆ ಕಾರ್ಗಿಲ್ ವಿಜಯೋತ್ಸವ : ಮರಾಠಾ ಲಘು ಪದಾತಿದಳದ ಸೈನಿಕರ ಸಾಹಸ ಸುವರ್ಣಾಕ್ಷರ ಕಾರ್ಗಿಲ್‌ ವಿಜಯೋತ್ಸವ ನಿಮಿತ್ತ ಬೈಕ್‌ ರ್ಯಾಲಿ ವಿಶ್ವದ TEDx ಭಾಷಣಗಾರ್ತಿ ಗಿನ್ನೆಸ್ ದಾಖಲೆ ಅರ್ನಾ ಜೇವನಗೌಡರಿಗೆ ಜಿಲ್ಲಾ ಆಡಳಿತ ಸನ್ಮಾನ ಮೌಂಟ್ ಎವರೆಸ್ಟ್ ಏರಿದ ಸಂತೋಷ್ ಹಾಗೂ ಚಿನ್ಮಯಿಗೆ ಗೌರವ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳನ್ನು ಕಡ್ಡಾಯವಾಗಿ ದತ್ತು ತೆಗೆದುಕೊಳ್ಳಲೇಬೇಕು, ಇಲ್ಲಂದ್ರೆ ಶುಲ್ಕ ಕಡಿತ : ಮುಖ್ಯಮಂತ್ರಿ ಎಚ್ಚರಿಕೆ ಸರ್ಕಾರಿ ಶಾಲೆಗಳನ್ನು ಉದ್ಯಮಿಗಳು ದತ್ತಕ ತೆಗೆದುಕೊಳ್ಳಬಹುದು : ಸಿಇಓ ಬೆಳಗಾವಿ ಜಿಲ್ಲೆಯ 175 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ  ಅಭಿವೃದ್ಧಿ ಪಡಿಸಲು ಸರ್ಕಾರ ನಿರ್ಧಾರ ಗೊತ್ತುವಳಿ ಅಂಗೀಕರಿಸದಿದ್ದರೆ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಯೊಂದಿಗೆ ಚರ್ಚೆ - ಸಚಿವ ಯತೀಂದ್ರ ಸಿದ್ಧರಾಮಯ್ಯ ಎಚ್ಚರಿಕೆ ಸಕಾಲಕ್ಕೆ ಮಾಹಿತಿ‌ ಒದಗಿಸದ ತಹಶೀಲ್ದಾರ ಸೇರಿ ಮೂವರಿಗೆ ತಲಾ 10 ಸಾವಿರ ದಂಡ “ಪ್ರಾಚೀನ ಬೌದ್ಧ ತಾಣ ಸಾರನಾಥ” ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರ್ಪಡೆ ಕಾರ್ಗಿಲ್ ವಿಜಯೋತ್ಸವ : ಮರಾಠಾ ಲಘು ಪದಾತಿದಳದ ಸೈನಿಕರ ಸಾಹಸ ಸುವರ್ಣಾಕ್ಷರ ಕಾರ್ಗಿಲ್‌ ವಿಜಯೋತ್ಸವ ನಿಮಿತ್ತ ಬೈಕ್‌ ರ್ಯಾಲಿ ವಿಶ್ವದ TEDx ಭಾಷಣಗಾರ್ತಿ ಗಿನ್ನೆಸ್ ದಾಖಲೆ ಅರ್ನಾ ಜೇವನಗೌಡರಿಗೆ ಜಿಲ್ಲಾ ಆಡಳಿತ ಸನ್ಮಾನ ಮೌಂಟ್ ಎವರೆಸ್ಟ್ ಏರಿದ ಸಂತೋಷ್ ಹಾಗೂ ಚಿನ್ಮಯಿಗೆ ಗೌರವ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳನ್ನು ಕಡ್ಡಾಯವಾಗಿ ದತ್ತು ತೆಗೆದುಕೊಳ್ಳಲೇಬೇಕು, ಇಲ್ಲಂದ್ರೆ ಶುಲ್ಕ ಕಡಿತ : ಮುಖ್ಯಮಂತ್ರಿ ಎಚ್ಚರಿಕೆ ಸರ್ಕಾರಿ ಶಾಲೆಗಳನ್ನು ಉದ್ಯಮಿಗಳು ದತ್ತಕ ತೆಗೆದುಕೊಳ್ಳಬಹುದು : ಸಿಇಓ ಬೆಳಗಾವಿ ಜಿಲ್ಲೆಯ 175 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ  ಅಭಿವೃದ್ಧಿ ಪಡಿಸಲು ಸರ್ಕಾರ ನಿರ್ಧಾರ
29 ಜುಲೈ 2026
ಪ್ರೊ.  ರಮೇಶ್‌ ಮಂಗಳೇಕರ್‌  ಅಭಿನಂದನಾ ಗ್ರಂಥ ʼಇನಸ್ಪಿರಿಂಗ್‌ ಜನರೇಷನ್‌ ʼ ಲೋಕಾರ್ಪಣೆ   
📚 ಸಾಹಿತ್ಯ
Dr. K N Doddmani · · 356 ವೀಕ್ಷಣೆಗಳು

ಪ್ರೊ.  ರಮೇಶ್‌ ಮಂಗಳೇಕರ್‌  ಅಭಿನಂದನಾ ಗ್ರಂಥ ʼಇನಸ್ಪಿರಿಂಗ್‌ ಜನರೇಷನ್‌ ʼ ಲೋಕಾರ್ಪಣೆ  

ಅಸ್ಮಿತೆ ವರದಿ, ಜು.೧೯ :  ಹಿರಿಯ ಪ್ರಾಧ್ಯಾಪಕ, ಸರ್ದಾರ್‌ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ರಮೇಶ್‌ ಮಂಗಳೇಕರ್‌ ಅವರ ಅಭಿನಂದನಾ ಗ್ರಂಥ ಇನಸ್ಪಿರಿಂಗ್‌ ಜನರೇಷನ್‌ʼ (ಸ್ಪೂರ್ತಿದಾಯಕ ಪೀಳಿಗೆಗಳು) ರವಿವಾರ ಬೆಳಗಾವಿ ಹೊರವಲಯದ ಗಣೇಶಪುರದಲ್ಲಿನ ಹೋಟೆಲ್‌ ಎಂಪೋರಿಯಾ ಟವರ್‌ ದಲ್ಲಿ ಜರುಗಿದ ಸಮಾರಂಭದಲ್ಲಿ  ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಪ್ರೊ. ಶೋಭಾ ಜಿ ಲೋಕಾರ್ಪಣೆಗೊಳಿಸಿದರು.

ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾಲಯ ಸಮಾಜ ಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ಪ್ರೊ.ಎಸ್.ಎಸ್.‌ ಪವಾರ್‌ ಅಧ್ಯಕ್ಷತೆ ವಹಿಸಿದ ಸಮಾರಂಭದಲ್ಲಿ ಬೆಂಗಳುರಿನ ಡಿಸಿಇ ಮಾಜಿ ಹೆಚ್ಚುವರಿ ನಿರ್ದೇಶಕ ಪ್ರೊ. ವಿ.ವಿ. ಘೋರ್ಪಡೆ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯ ಸಮಾಜಶಾಸ್ತ್ರ ವಿಭಾದ ಮಾಜಿ ಮುಖ್ಯಸ್ಥ ಪ್ರೊ. ರಾಜೇಂದ್ರ ಪಾಟೀಲ, ಗೋವಾ ಜುವಾರಿನಗರ ಎಂಇಎಸ್‌ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಆರ್.ಬಿ. ಪಾಟೀಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ನಂತರ ಮಾತನಾಡಿದ ಪ್ರೊ. ಶೋಭಾ “ ಗುರುವಿನ ಸಾರ್ಥಕತೆಯನ್ನು ಮೆರೆದ ರಮೇಶ ಮಾಂಗಳೇಕರ್‌ ಅವರಿಗೆ ಇಂಗ್ಲೀಷ್‌, ಕನ್ನಡ ಮತ್ತು ಮರಾಠಿ ಈ ಮೂರು ಭಾಷೆಗಳಲ್ಲಿ ಅರ್ಥಪೂರ್ಣ ಲೇಖನಗಳನ್ನು ಒಳಗೊಂಡ ಸ್ಪೂರ್ಥಿದಾಯ ಗ್ರಂಥ ಸಮರ್ಪಣೆಯಾಗಿರುವುದು ಶ್ಲಾಘನೀಯ. ಪದವಿ, ಹುದ್ದೆಗಳನ್ನು ಪಡೆಯಬಹುದು ಆದರೆ, ಜನರ ಹೃದಯ ಗೆದ್ದು ಅಕ್ಷರ ರೂಪದಲ್ಲಿ ಮೂಡಿ ಬರುವ ಮಾನ್ಯತೆ ಶ್ರೇಷ್ಠವಾದುದು. ಹೊಸ ಪೀಳಿಗೆಯನ್ನು ಉತ್ತಮ ಮಾರ್ಗದಲ್ಲಿ ಸಾಗುವಂತೆ ಮಾಡಿ ಸಾರ್ಥಕತೆ ಕಂಡ ಗುರುವಿಗೆ ಸಮರ್ಪಿತವಾದ ಗ್ರಂಥ ಒಂದು ಮಾದರಿಯಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರೊ. ವಿ.ವಿ. ಘೋರ್ಪಡೆ ಅವರು,” ಪ್ರೊ. ರಮೇಶ ಮಾಂಗಳೇಕರ್‌ ಒಬ್ಬ ಉತ್ತಮ ಪ್ರಾಧ್ಯಾಪಕರು. ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಯಾವತ್ತೂ ನಿರಂತರವಾಗಿರಲಿ” ಎಂದು ಹಾರೈಯಿಸಿದರು.

ಪ್ರೊ. ಆರ್.‌ ಬಿ. ಪಾಟೀಲ ಮಾತನಾಡಿ, “ಪ್ರೊ. ರಮೇಶ್‌ ಮಾಂಗಳೇಕರ್‌  ನನ್ನ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಸಂಶೋಧನೆ ಕೈಗೊಂಡ ಉತ್ತಮ ಸಂಶೋಧಕರು. ಸಂಶೋಧನೆಯ ಸಂದರ್ಭದಲ್ಲಿ ಎದುರಾದ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಜವಾಬ್ದಾರಿ ನಿರ್ವವಹಿಸಿದ ಕ್ರಿಯಾಶೀಲ ವ್ಯಕ್ತಿ ಎಂದು ಬಣ್ಣಿಸಿದರು.

ವಿಡಿಯೋ

ಅಭಿನಂದನೆ ಸ್ವೀಕರಿಸಿ ಮಾತನಾಡಿದ  ರಮೇಶ್‌ ಮಾಂಗಳೇಕರ್‌ “ ಎಲ್ಲರೂ ಸೇರಿ ಹೃದಯ ಸ್ಪರ್ಶಿ ಸಮಾರಂಭ ಆಯೋಜಿಸಿರುವುದು ಹೃದಯ ತುಂಬಿ ಬಂದಿದೆ. ನಿಮ್ಮೆಲ್ಲರ ಪ್ರೀತಿಗೆ ಪಾತ್ರವಾಗಿರುವುದು ಜೀವನದ ಸಾರ್ಥಕತೆ ಕಂಡಿದ್ದೇನೆ ಎನಿಸುತ್ತದೆ. ಗಡಿ ಭಾಗದ ಸಣ್ಣ ಹಳ್ಳಿಯಿಂದ ಶಿಕ್ಷಣ ಆರಂಭವಾಗಿ ಇದನ್ನೇ ಓದಬೇಕೆಂಬ ನಿರ್ದಷ್ಟತೆ ಇರಲಿಲ್ಲವಾದರೂ ಸಮಾಜಶಾಸ್ತ್ರದ ಅಧ್ಯಯ ವೈಯಕ್ತಿವಾಗಿ ತುಂಬಾ ಸಂತಸ ನೀಡಿದೆ. ಪ್ರಾಧ್ಯಾಪಕನಾಗಿ ಕಾರವಾರ, ಬೆಳಗಾವಿ ಸೇರಿದಂತೆ ಇತರೆಡೆ ಸಲ್ಲಿಸಿದ ಸೇವೆ ನನಗೆ ಹೊಸ ಹುಮ್ಮಸು ತಂದುಕೊಟ್ಟಿದೆ “ ಎಂದು ತಮ್ಮ ಜೀವನದ ಪ್ರಮುಖ ಘಟ್ಟಗಳನ್ನು ಪರಿಚಯಿಸಿದರು.

ಪ್ರೊ. ರಮೇಶ್‌ ಎಸ್.‌ ಮಾಂಗಳೇಕರ್‌ ಅಭಿನಂದನಾ ಸಮಿತಿಯ ಅಧ್ಯಕ್ಷೆ ಡಾ. ಪೂಜಾ ಹಲ್ಯಾಳ  ಪ್ರಾಸ್ತಾವಿಕ ಮಾತಗಳನ್ನಾಡಿದರು. ಇದೇ ಸಂದರ್ಭದಲ್ಲಿ  ಕೃತಿಯ ತ್ರಿಭಾಷೆಯಲ್ಲಿ ಸಹಾಯಕ ಸಂಪಾದಕರನ್ನು, ಮಾಂಗಳೇಕರ ಅವರ ಸಹದ್ಯೋಗಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

****

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ