ಬ್ರೇಕಿಂಗ್
ಗೊತ್ತುವಳಿ ಅಂಗೀಕರಿಸದಿದ್ದರೆ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಯೊಂದಿಗೆ ಚರ್ಚೆ - ಸಚಿವ ಯತೀಂದ್ರ ಸಿದ್ಧರಾಮಯ್ಯ ಎಚ್ಚರಿಕೆ ಸಕಾಲಕ್ಕೆ ಮಾಹಿತಿ‌ ಒದಗಿಸದ ತಹಶೀಲ್ದಾರ ಸೇರಿ ಮೂವರಿಗೆ ತಲಾ 10 ಸಾವಿರ ದಂಡ “ಪ್ರಾಚೀನ ಬೌದ್ಧ ತಾಣ ಸಾರನಾಥ” ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರ್ಪಡೆ ಕಾರ್ಗಿಲ್ ವಿಜಯೋತ್ಸವ : ಮರಾಠಾ ಲಘು ಪದಾತಿದಳದ ಸೈನಿಕರ ಸಾಹಸ ಸುವರ್ಣಾಕ್ಷರ ಕಾರ್ಗಿಲ್‌ ವಿಜಯೋತ್ಸವ ನಿಮಿತ್ತ ಬೈಕ್‌ ರ್ಯಾಲಿ ವಿಶ್ವದ TEDx ಭಾಷಣಗಾರ್ತಿ ಗಿನ್ನೆಸ್ ದಾಖಲೆ ಅರ್ನಾ ಜೇವನಗೌಡರಿಗೆ ಜಿಲ್ಲಾ ಆಡಳಿತ ಸನ್ಮಾನ ಮೌಂಟ್ ಎವರೆಸ್ಟ್ ಏರಿದ ಸಂತೋಷ್ ಹಾಗೂ ಚಿನ್ಮಯಿಗೆ ಗೌರವ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳನ್ನು ಕಡ್ಡಾಯವಾಗಿ ದತ್ತು ತೆಗೆದುಕೊಳ್ಳಲೇಬೇಕು, ಇಲ್ಲಂದ್ರೆ ಶುಲ್ಕ ಕಡಿತ : ಮುಖ್ಯಮಂತ್ರಿ ಎಚ್ಚರಿಕೆ ಸರ್ಕಾರಿ ಶಾಲೆಗಳನ್ನು ಉದ್ಯಮಿಗಳು ದತ್ತಕ ತೆಗೆದುಕೊಳ್ಳಬಹುದು : ಸಿಇಓ ಬೆಳಗಾವಿ ಜಿಲ್ಲೆಯ 175 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ  ಅಭಿವೃದ್ಧಿ ಪಡಿಸಲು ಸರ್ಕಾರ ನಿರ್ಧಾರ ಗೊತ್ತುವಳಿ ಅಂಗೀಕರಿಸದಿದ್ದರೆ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಯೊಂದಿಗೆ ಚರ್ಚೆ - ಸಚಿವ ಯತೀಂದ್ರ ಸಿದ್ಧರಾಮಯ್ಯ ಎಚ್ಚರಿಕೆ ಸಕಾಲಕ್ಕೆ ಮಾಹಿತಿ‌ ಒದಗಿಸದ ತಹಶೀಲ್ದಾರ ಸೇರಿ ಮೂವರಿಗೆ ತಲಾ 10 ಸಾವಿರ ದಂಡ “ಪ್ರಾಚೀನ ಬೌದ್ಧ ತಾಣ ಸಾರನಾಥ” ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರ್ಪಡೆ ಕಾರ್ಗಿಲ್ ವಿಜಯೋತ್ಸವ : ಮರಾಠಾ ಲಘು ಪದಾತಿದಳದ ಸೈನಿಕರ ಸಾಹಸ ಸುವರ್ಣಾಕ್ಷರ ಕಾರ್ಗಿಲ್‌ ವಿಜಯೋತ್ಸವ ನಿಮಿತ್ತ ಬೈಕ್‌ ರ್ಯಾಲಿ ವಿಶ್ವದ TEDx ಭಾಷಣಗಾರ್ತಿ ಗಿನ್ನೆಸ್ ದಾಖಲೆ ಅರ್ನಾ ಜೇವನಗೌಡರಿಗೆ ಜಿಲ್ಲಾ ಆಡಳಿತ ಸನ್ಮಾನ ಮೌಂಟ್ ಎವರೆಸ್ಟ್ ಏರಿದ ಸಂತೋಷ್ ಹಾಗೂ ಚಿನ್ಮಯಿಗೆ ಗೌರವ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳನ್ನು ಕಡ್ಡಾಯವಾಗಿ ದತ್ತು ತೆಗೆದುಕೊಳ್ಳಲೇಬೇಕು, ಇಲ್ಲಂದ್ರೆ ಶುಲ್ಕ ಕಡಿತ : ಮುಖ್ಯಮಂತ್ರಿ ಎಚ್ಚರಿಕೆ ಸರ್ಕಾರಿ ಶಾಲೆಗಳನ್ನು ಉದ್ಯಮಿಗಳು ದತ್ತಕ ತೆಗೆದುಕೊಳ್ಳಬಹುದು : ಸಿಇಓ ಬೆಳಗಾವಿ ಜಿಲ್ಲೆಯ 175 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ  ಅಭಿವೃದ್ಧಿ ಪಡಿಸಲು ಸರ್ಕಾರ ನಿರ್ಧಾರ
29 ಜುಲೈ 2026
ನಾಡಗೀತೆಯಲ್ಲಿ  "ಬುದ್ಧ ನಿಲ್ಲದ ಶಾಂತಿಯ ತೋಟ"
🎭 ಸಾಂಸ್ಕೃತಿಕ
Dr. K N Doddmani · · 259 ವೀಕ್ಷಣೆಗಳು

ನಾಡಗೀತೆಯಲ್ಲಿ "ಬುದ್ಧ ನಿಲ್ಲದ ಶಾಂತಿಯ ತೋಟ"

ಜಗತ್ತಿನಲ್ಲಿ ಇಷ್ಟೋಂದು ವೇಗವಾಗಿ ವ್ಯಾಪಿಸುತ್ತಿರುವ ಬೌದ್ಧ ಧರ್ಮ ವನ್ನು, ಕುವೆಂಪುರವರು ಏಕೆ ಕಡೆಗಣಿಸಿದರು, ಎಂಬ ಪ್ರಶ್ನೆಯನ್ನು ನಮ್ಮ ನಾಳಿನ ಪೀಳಿಗೆಯಲ್ಲಿ ನಾವೆ ಹುಟ್ಟು ಹಾಕಬಾರದು. ಬುದ್ಧನನ್ನು ಮತ್ತು ಆತನ ಧರ್ಮವನ್ನು ಅಪರಿಮಿತವಾಗಿ ಪ್ರೇಮಿಸಿದ ಕುವೆಂಪುರವರನ್ನು ಬುದ್ಧರಿಂದ ಬೇರ್ಪಡಿಸಬಾರದು.

"ಬೌದ್ಧರುಧ್ಯಾನ" ಪದವನ್ನು ನಾಡಗೀತೆಯಲ್ಲಿ ಸೇರ್ಪಡೆ ಹಿನ್ನೆಲೆಯಲ್ಲಿ ಚಿಂತಕರಾದ ಮಲ್ಕುಂಡಿ ಮಹಾದೇವಸ್ವಾಮಿ ಅವರು ಬರೆದ ಅರ್ಥಪೂರ್ಣ ಲೇಖನವನ್ನು ಅಸ್ಮಿತೆ ಪ್ರಕಟಿಸುತ್ತಿದೆ

**

ರಕ್ತಸಿಕ್ತವಾದ ಈ ನೆಲದ ಚರಿತ್ರೆಯಲ್ಲಿ ಬೌದ್ಧರ ಧ್ವಜದ ಮೇಲೆ ನೀವು ಒಂದೇ ಒಂದು ಹನಿ ರಕ್ತದ ಕಲೆಯನ್ನು ಹುಡುಕಲಾರಿರಿ.

"I came from land of buddha" ಎಂದು ಅಮೇರಿಕಾದ ನೆಲದಲ್ಲಿ ವಿವೇಕಾನಂದರು ಕೂಗಿ ಹೇಳಿದಾಗ, ಅಮೆರಿಕಾದ ಪ್ರಜೆಯೊಬ್ಬ ಕೇಳಿದ, ಇಡೀ ಜಗತ್ತಿಗೆ ಶಾಂತಿ ಹೇಳಿ ಹೊರಟ ನಿಮ್ಮ ಬುದ್ಧ, ನನ್ನ ದೇಶ ಅಮೆರಿಕಾಕ್ಕೆ ಯಾಕೆ ಬರಲಿಲ್ಲ? ಎಂದು. ವಿವೇಕಾನಂದರು ಉತ್ತರಿಸಿ, ನನ್ನ ಬುದ್ಧ ಜಗತ್ತಿನಾದ್ಯಂತ ನಡೆದಾಡುವಾಗ ಇನ್ನೂ ನಿನ್ನ ದೇಶ ಹುಟ್ಟೆ ಇರಲಿಲ್ಲ ಎಂದರು. ಬುದ್ದನ ಹಿರಿತನ ಮತ್ತು ಆತನ ಶಾಂತಿಯನ್ನು ಹೀಗೆ ವಿಶ್ವಮಾನ್ಯಗೊಳಿಸಿದರು. ನೀವು peace ಎಂಬ ಪದವನ್ನು ಆಲಿಸಬಹುದಷ್ಟೇ. ಆದರೆ ನಿಮ್ಮೊಳಗೆ ಶಾಂತಿ ಉದಯಿಸಬೇಕಾದರೆ, ತೆರೆಯದ ಕಣ್ಣುಗಳೊಟ್ಟಿಗೆ ನೀವು ಬುದ್ಧನ ಹಾಗೆ ಕೂರಲೇಬೇಕು. ಈ ಪ್ರಶಾಂತವಾದ ಬಂಗಿಯನ್ನು ಪರಿಚಯಿಸಿದ ಮೊದಲ ಜ್ಞಾನಿ ಬುದ್ಧ. ಮೌನವಾಗಿ ತನ್ನೊಳಗಿನ ಕಲ್ಮಶ ಸಂಕಟಗಳನ್ನು ಹೊರ ಚೆಲ್ಲಿ, ತನ್ನ ಉಸಿರನ್ನು ನಿರ್ಮಲಗೊಳಿಸುವ ಮಾರ್ಗವನ್ನು ತೋರಿದವ ಬುದ್ಧ. ಇಡೀ ಮಾನವ ಕೋಟಿ ಹೀಗೆ ಮಾಡಿದರೆ ಅಲ್ಲಿ sailance ಮತ್ತು peace ನಿರ್ಮಾಣವಾಗುತ್ತದೆ. ಅಹಿಂಸೆ ಜನಿಸುತ್ತದೆ. ಇದನ್ನೇ ಸರ್ವಜನಾಂಗದ ಶಾಂತಿಯ ತೋಟ ಎಂದು ಕುವೆಂಪುರವರು ಕರೆದರು.

ಪೂರ್ಣಚಂದ್ರ ತೇಜಸ್ವಿಯವರು ಬುದ್ಧನ ಧರ್ಮವನ್ನು ಬಿಟ್ಟರೆ ಇನ್ನೆಲ್ಲ ಧರ್ಮಗಳು ತಮ್ಮ ಇತಿಹಾಸವನ್ನು ರಕ್ತದಲ್ಲಿ ಬರೆದುಕೊಂಡುವೆ ಎಂಬ ಗ್ರಹಿಕೆಗೆ ಇದು ಹತ್ತಿರ.

ಸರ್ವನಾಂಗದ ಶಾಂತಿಯ ತೋಟದಲ್ಲಿ, ಶಾಂತಿಯನ್ನು ಬಿತ್ತಿದ ಬುದ್ಧನನ್ನೇ ನೀವು ನಾಶ ಮಾಡಿದರೆ, ಈ ತೋಟದಲ್ಲಿ ಮಾನವ ಪ್ರೇಮವನ್ನು ಬೆಳೆ ಬೆಳೆಯಲು ಸಾಧ್ಯವೆ? ಮುಸ್ಲಿಂ, ಕ್ರೈಸ್ತ, ಪಾರ್ಸಿ ಯಂತಹ ಧರ್ಮಗಳನ್ನು ಒಪ್ಪುವವರು, ಏಕೆ ಈ ನೆಲಮೂಲದ ಬೌದ್ಧ ಧರ್ಮದ ಮೇಲೆ ಇಷ್ಟೊಂದು ವೈಷಮ್ಯ ಬಿಂಬಿತವಾಗುತ್ತಿದೆ. ಭಾರತೀಯ ಸಂಸ್ಕೃತಿ ಎಂದರೆ ಬೌದ್ಧರ ಸಂಸ್ಕೃಯೂ ಕೂಡ ಅಲ್ಲವೆ?

ನಮ್ಮ ಸಂಗೀತ ಸ್ವರ, ಲಯ, ತಾಳ, ಗಳ ನೆಪ ನೀಡಿ, ಧರ್ಮ ಸಂಸ್ಕೃತಿ, ಪರಂಪರೆಗಳನ್ನು ಕೈ ಬಿಡುವ ಮನಸ್ಥಿತಿ ಒಂದು ಧಮನಕಾರಿ ಸಂಸ್ಕೃತಿ ಎನಿಸುತ್ತದೆ. ನಾವು ಈಗ ಪ್ರಜಾ ಪ್ರಭುತ್ವದ ಮೌಲ್ಯಗಳೊಂದಿಗೆ ಜೀವಿಸುತ್ತಿರುವಾಗ, ಪ್ರಾತಿನಿಧ್ಯ ಎಂಬುದು ಕೇವಲ ರಾಜಕೀಯ ಕ್ಷೇತ್ರದಲ್ಲಿ ಮಾತ್ರವಲ್ಲ. ನಮ್ಮ ಸಂಸ್ಕೃತಿ ಆಚಾರ ವಿಚಾರ ಸಂಪ್ರದಾಯಗಳ ಪ್ರಾತಿನಿಧ್ಯವನ್ನು, ಪರಂಪರೆಗಳ ಪ್ರಾತಿನಿಧ್ಯವನ್ನು ಪ್ರತಿಫಲಿಸಬೇಕಾಗುತ್ತದೆ. ಧರ್ಮ ಸಂಸ್ಕೃತಿ ಪರಂಪರೆಗಳಲ್ಲಿ ತಾರತಮ್ಯ ಒಳಿತಲ್ಲ. ಆಗ ಮಾತ್ರ ನಾವು ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಜೀವಿಸಲು ಸಾಧ್ಯವಾಗುತ್ತದೆ.

ಕುವೆಂಪುರವರ ರಚಿತ ನಾಡಗೀತೆಯಲ್ಲಿ ಯಾವುದೇ ಭಿನ್ನತೆಗಳಿಲ್ಲ. ಆದರೆ ಅದನ್ನು ಯಥಾವತ್ ಜಾರಿ ಮಾಡುವುದರಲ್ಲಿ ಭಿನ್ನತೆಗಳು ಕಾಣಿಸಿಕೊಂಡಿವೆ . ಅವು ಎರಡು ರೀತಿಯಲ್ಲಿವೆ. ಒಂದು ಮೂಲ ಪದ್ಯಕ್ಕೆ ಹಾಕಿದ ಕತ್ತರಿ ಮತ್ತು ಹೊಸ ಪದಗಳ ಜೋಡಣೆ. ಮತ್ತೊಂದು ಹಾಡಬೇಕಾದ ಸಂಗೀತ ಮತ್ತು ಸಮಯ. ಈ ಎರಡು ವಿವಾದಗಳ ಘರ್ಷಣೆಯಲ್ಲಿ ಘೋರ ಅನ್ಯಾಯಕ್ಕೆ ಒಳಗಾಗಿದ್ದು "ಬೌದ್ಧರು ಧ್ಯಾನ" ಪದ ಮಾತ್ರ.

ನಮ್ಮ ನಾಡಗೀತೆಯಲ್ಲಿ ನಿರ್ಧಾಕ್ಷಣ್ಯವಾಗಿ ಬುದ್ಧನನ್ನು ಅಮಾನ್ಯ ಮಾಡಲಾಗಿದೆ. ಇದನ್ನು ಸೂಕ್ಷ್ಮವಾಗಿ ಪರಿಗಣಿಸಿ ನೋಡಿದರೆ, ಇದೊಂದು ಶತಮಾನಗಳ ವೈಶಮ್ಯದಂತೆ ಕಾಣಿಸುತ್ತದೆ. ಬುದ್ಧನ ಪ್ರಾತಿನಿಧ್ಯವನ್ನು ಕಡಿಮೆಗೊಳಿಸಲು ಎಷ್ಟು ಪ್ರಯತ್ನಿಸಬೇಕು ಅಷ್ಟು ಪ್ರಯತ್ನಿಸಲಾಗಿದೆ. ಅಂತಹ ಪ್ರಯತ್ನಗಳು ಎಲ್ಲಾ ಕಾಲಘಟ್ಟಗಳಲ್ಲೂ ನಡೆಯುತ್ತಿರುವುದು ಗೋಚರಿಸುತ್ತಿದೆ.

ಅಂತಹ ಪ್ರಯತ್ನಗಳಲ್ಲಿ ಕುವೆಂಪುರವರ ವಿರಚಿತ ಮೂಲ ಗೀತೆಯಲ್ಲಿರುವ ಬೌದ್ಧರು ಧ್ಯಾನ ಪದವನ್ನು ನಾಡಗೀತೆಯಿಂದ ಕಣ್ಮರೆಯಾಗಿ ಸಿದ್ದುಮಾತ್ರ ಒಂದು ಮಹಾ ಪ್ರಮಾದವೆಯಾಗಿದೆ.

ಮೂಲ ರಚನೆಯಲ್ಲಿ ಇಲ್ಲದ ಪದಗಳನ್ನು ತಮ್ಮ ಜಾತಿ, ಶ್ರೇಷ್ಠತೆ ಪ್ರಾಬಲ್ಯದ ಮೇಲೆ ಜೋಡಿಸಿದ ಮನಸ್ಥಿತಿ ಹಾಗೂ ಮೂಲ ರಚನೆಯಲ್ಲಿರುವ ಪದವನ್ನು ನಿರ್ದಾಕ್ಷಣವಾಗಿ ಕೈ ಬಿಡುವ ಮನಸ್ಥಿತಿ ಈ ಎರಡನ್ನು ನಾವು ನಾಡಗೀತೆಯ ವಿಚಾರದಲ್ಲಿ ಕಾಣಬಹುದು. ಒಮ್ಮೊಮ್ಮೆ ಕೇಳುವವರಿಲ್ಲದಾಗ ಈ ತರಹದ ಧಮನಕಾರಿ ನೀತಿ ತಲೆ ಎತ್ತುತ್ತದೆ.

1977 ರಿಂದ 2018ರವರೆಗೆ ಉಂಟಾದ ನಾಡಗೀತೆಯ ವಿವಾದಗಳು ಇನ್ನೂ ಪೂರ್ಣಗೊಂಡಂತಿಲ್ಲ 150 ಸೆಕೆಂಡ್ ಗಳಿಗೆ ಕಡಿತಗೊಳಿಸಿರುವ ಗೀತೆಯಲ್ಲಿ ಬೌದ್ಧರುದ್ಯಾನದಿಂದ 150 ಸೆಕೆಂಡ್ಗಳು ದಾಟುವುದಿಲ್ಲ. ಸಂಗೀತ ಲಯಗಳನ್ನು ಹೊಂದಿಸವುದು ನಮ್ಮ ಸಂಗೀತಜ್ಞರಿಗೆ ಅಸಾಧ್ಯವೇನಲ್ಲ.

ನಾಡಗೀತೆಗೆ ಬೌದ್ಧರುಧ್ಯಾನ ಪದ ಹೊಸ ಸೇರ್ಪಡೆಯೇನಲ್ಲ. ಅದು ಕುವೆಂಪುರವರ ಮೂಲ ರಚನೆಯ ಯಥಾವತ್ ಜಾರಿಯಷ್ಟೆ. ಈಗಾಗಲೇ ನಾಡಗೀತೆಯಲ್ಲಿರುವ ಯಾವುದೇ ಒಂದು ಪದವನ್ನು ಕೈ ಬಿಡುವ ಮಾತೇ ಇಲ್ಲ. ಆದರೆ ಜಗತ್ತಿಗೆ ಶಾಂತಿಯನ್ನು ಮಾನ್ಯ ಮಾಡಿದ ಬುದ್ದನನ್ನು ಸರ್ವ ಜನಾಂಗದ ಶಾಂತಿಯ ತೋಟದಿಂದ ಏಕೆ ಕೈ ಬಿಡಲಾಯಿತು. ಎಂಬುದು ಪ್ರಶ್ನೆ.

ಇದು ಹೀಗೆ ಮುಂದುವರೆಸಿದರೆ, ಜಗತ್ತಿನಲ್ಲಿ ಇಷ್ಟೋಂದು ವೇಗವಾಗಿ ವ್ಯಾಪಿಸುತ್ತಿರುವ ಬೌದ್ಧ ಧರ್ಮ ವನ್ನು, ಕುವೆಂಪುರವರು ಏಕೆ ಕಡೆಗಣಿಸಿದರು, ಎಂಬ ಪ್ರಶ್ನೆಯನ್ನು ನಮ್ಮ ನಾಳಿನ ಪೀಳಿಗೆಯಲ್ಲಿ ನಾವೆ ಹುಟ್ಟು ಹಾಕಬಾರದು. ಬುದ್ಧನನ್ನು ಮತ್ತು ಆತನ ಧರ್ಮವನ್ನು ಅಪರಿಮಿತವಾಗಿ ಪ್ರೇಮಿಸಿದ ಕುವೆಂಪುರವರನ್ನು ಬುದ್ಧರಿಂದ ಬೇರ್ಪಡಿಸಬಾರದು.

ತೇಜಸ್ವಿಯವರ ಅಕ್ಷೇಪಣೆಗಳಿದ್ದಿದ್ದು ನಾಡಗೀತೆಯಲ್ಲಿ ಹೊಸ ಪದಗಳನ್ನು ಸೇರಿಸುವುದಕ್ಕಾಗಿಯೇ ಹೊರತು ಮೂಲ ಪದಗಳನ್ನು ಕೈಬಿಡಿ ಎಂದಲ್ಲ. ಇದನ್ನು ಪ್ರಜ್ಞಾಪೂರ್ವಕವಾಗಿ ನಾವು ಆಲೋಚಿಸಬೇಕು.

ನವ ಪೀಳಿಗೆಗೆ ತಪ್ಪು ಸಂದೇಶಗಳನ್ನು ನೀಡುವುದರ ಮುಖಾಂತರ, ದ್ವೇಷ ವೈಷಮ್ಯ ಗಳನ್ನು ಹಿರಿಯ ತಲೆಮಾರು ಯಾವತ್ತೂ ತುಂಬಬಾರದು.

ಮುಸ್ಲಿಂ ಕ್ರೈಸ್ತ ಪಾರಸಿಗಿಂತಲೂ ಕನ್ನಡದ ಮಣ್ಣಿನಲ್ಲಿ ಬೆರೆತ ಬೌದ್ಧರ ನೆಲೆಗಳು, ಅವರ ಸಂಸ್ಕೃತಿ, ವಿದ್ವತ್ತು ಅತ್ಯಂತ ಪುರಾತನವಾಗಿದೆ. ಬಾದಾಮಿ ಐಹೊಳೆ ಸನ್ನತಿ ಮಸ್ಕಿ ಕನಗನಹಳ್ಳಿ ಯಂತಹ ಐತಿಹಾಸಿಕ ಬೌದ್ಧ ನೆಲೆಗಳನ್ನು ನಾವು ಹೊಂದಿದ್ದೇವೆ. ನಾಗಾರ್ಜುನನಂತಹ ಪ್ರಖಾಂಡ ಪಂಡಿತನನ್ನು ಈ ನಾಡು ಬೌದ್ಧ ಸಾಹಿತ್ಯ ಲೋಕಕ್ಕೆ ನೀಡಿದೆ. ಮನುಕುಲಕ್ಕೆ ಶಾಂತಿಯ ಸಂದೇಶವನ್ನು ನೀಡಿದ, ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆಯ ಮೇಲೆ ಈ ಜಗತ್ತಿನಲ್ಲಿ ಮೊಟ್ಟಮೊದಲು ಉಸಿರಾಡಿದ ಗೌತಮ ಬುದ್ಧನ ಮಾರ್ಗಕ್ಕೆ, ಕುವೆಂಪುರವರು ತಮ್ಮ ಕಾದಂಬರಿಗಳ ನಾಯಕರನ್ನು ತಂದು ನಿಲ್ಲಿಸಿರುವ ಪ್ರಸಂಗಗಳನ್ನು ನಾವು ಮರೆಯಬಾರದು.

ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಬೌದ್ಧರನ್ನು ಕೈಬಿಡುವುದು ಹಾಗೂ ಈ ಪದವನ್ನು ಸೇರಿಸಿದರೆ ನ್ಯಾಯಾಲಯದ ಮೆಟ್ಟಿಲೇರುತ್ತೇವೆ ಎಂಬುದು ವೈಶಮ್ಯದ ಮನೋವೃತ್ತಿಯಾಗಿದೆ.

ನಿಮ್ಮ

ಮಲ್ಕುಂಡಿ ಮಹದೇವಸ್ವಾಮಿ

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ