ಬ್ರೇಕಿಂಗ್
ಶರಣರ ಅನುಭವ ಮಂಟಪಕ್ಕೆ ಭೆಟ್ಟಿ ನೀಡಿದ AI ರೇಖಾ ಚಿತ್ರಗಳನ್ನು ಹಂಚಿಕೊಂಡ ಮುಖ್ಯಮಂತ್ರಿ ಅಂಗನವಾಡಿಯಿಂದ ಪಿಯುಸಿ ವರೆಗೂ ನಾಳೆ ರಜೆ ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ : 397  ಕಾಳಜಿ ಕೇಂದ್ರಗಳ ಸೌಲಭ್ಯ ಪರಿಶೀಲನೆಗೆ ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಸೂಚನೆ ತುಂಬಿದ ಜೀವಜಲ : ಹಸಿರಾದ ಇಳೆ, ಖುಷಿಗೊಂಡ ರೈತ ಸರ್ಕಾರದ ಸೂಚನೆ ಬೆಳಗಾವಿ ಪಾಲಿಕೆ ಪಾಲಿಸದಿದ್ದರೆ ಸೂಪರ್ ಸೀಡ್ ಮಾಡಬಹುದು - ಸಚಿವರಿಗೆ ಕನ್ನಡ ಸಂಘಟನೆಗಳ ಮನವರಿಕೆ ವಿಟಿಯು ಜಾಗತಿಕ ಮಟ್ಟದ ಖ್ಯಾತಿಗೆ ಗುಣಮಟ್ಟದ ಶಿಕ್ಷಣ ಅಳವಡಿಕೆ ಅಗತ್ಯ : ಕುಲಪತಿ ವಿದ್ಯಾಶಂಕರ್ ಸಲಹೆ ಮಳೆಯಾಗುತ್ತಿದ್ದು ಸದ್ಯ ಆತಂಕ ನಿವಾರಣೆ : ಸಚಿವ ಸತೀಶ ಜಾರಕಿಹೊಳಿ ಮೇಘಮೈತ್ರಿ ಸಾಹಿತ್ಯ ಸಂಭ್ರಮ: ಸಂಘ - ಸಂಸ್ಥೆಗಳ ಪ್ರಶಸ್ತಿ ಪ್ರದಾನ ಪರಂಪರೆ  ಗೌರವಯುತ ಕಾರ್ಯ - ಎಚ್.ಐ. ತಿಮ್ಮಾಪುರ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ ಫುಟ್ ಪಾತ್ ಪಾದಚಾರಿಗಳ ಹಕ್ಕು; ಹಾದಿಮ್ಯಾಲಿನವರ ಬದುಕಿನ ಹಕ್ಕಿನ ದಿಕ್ಕು? ಶರಣರ ಅನುಭವ ಮಂಟಪಕ್ಕೆ ಭೆಟ್ಟಿ ನೀಡಿದ AI ರೇಖಾ ಚಿತ್ರಗಳನ್ನು ಹಂಚಿಕೊಂಡ ಮುಖ್ಯಮಂತ್ರಿ ಅಂಗನವಾಡಿಯಿಂದ ಪಿಯುಸಿ ವರೆಗೂ ನಾಳೆ ರಜೆ ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ : 397  ಕಾಳಜಿ ಕೇಂದ್ರಗಳ ಸೌಲಭ್ಯ ಪರಿಶೀಲನೆಗೆ ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಸೂಚನೆ ತುಂಬಿದ ಜೀವಜಲ : ಹಸಿರಾದ ಇಳೆ, ಖುಷಿಗೊಂಡ ರೈತ ಸರ್ಕಾರದ ಸೂಚನೆ ಬೆಳಗಾವಿ ಪಾಲಿಕೆ ಪಾಲಿಸದಿದ್ದರೆ ಸೂಪರ್ ಸೀಡ್ ಮಾಡಬಹುದು - ಸಚಿವರಿಗೆ ಕನ್ನಡ ಸಂಘಟನೆಗಳ ಮನವರಿಕೆ ವಿಟಿಯು ಜಾಗತಿಕ ಮಟ್ಟದ ಖ್ಯಾತಿಗೆ ಗುಣಮಟ್ಟದ ಶಿಕ್ಷಣ ಅಳವಡಿಕೆ ಅಗತ್ಯ : ಕುಲಪತಿ ವಿದ್ಯಾಶಂಕರ್ ಸಲಹೆ ಮಳೆಯಾಗುತ್ತಿದ್ದು ಸದ್ಯ ಆತಂಕ ನಿವಾರಣೆ : ಸಚಿವ ಸತೀಶ ಜಾರಕಿಹೊಳಿ ಮೇಘಮೈತ್ರಿ ಸಾಹಿತ್ಯ ಸಂಭ್ರಮ: ಸಂಘ - ಸಂಸ್ಥೆಗಳ ಪ್ರಶಸ್ತಿ ಪ್ರದಾನ ಪರಂಪರೆ  ಗೌರವಯುತ ಕಾರ್ಯ - ಎಚ್.ಐ. ತಿಮ್ಮಾಪುರ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ ಫುಟ್ ಪಾತ್ ಪಾದಚಾರಿಗಳ ಹಕ್ಕು; ಹಾದಿಮ್ಯಾಲಿನವರ ಬದುಕಿನ ಹಕ್ಕಿನ ದಿಕ್ಕು?
08 ಜುಲೈ 2026
ಸೈಬರ್ ವಂಚನೆಯಿಂದ ಹಣ ಕಳೆದುಹೋಗದಂತೆ ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನದ ಬಿಗಿಕ್ರಮ - ಪ್ರಿಯಾಂಕ ಖರ್ಗೆ
📄 ಕರ್ನಾಟಕ ಸುದ್ದಿ
Dr. K N Doddmani · · 48 ವೀಕ್ಷಣೆಗಳು

ಸೈಬರ್ ವಂಚನೆಯಿಂದ ಹಣ ಕಳೆದುಹೋಗದಂತೆ ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನದ ಬಿಗಿಕ್ರಮ - ಪ್ರಿಯಾಂಕ ಖರ್ಗೆ

ತಂತ್ರಜ್ಞಾನ ಹಾಗೂ ದಕ್ಷ ಅಧಿಕಾರಿಗಳ ಸಮಯೋಚಿತ ಕ್ರಮದಿಂದಾಗಿ ಕರ್ನಾಟಕವು ಸೈಬರ್ ವಂಚಕರ ಜಾಲವನ್ನು ಭೇದಿಸುವಲ್ಲಿ ಮತ್ತು ಸಾರ್ವಜನಿಕರ ದುಡಿಮೆಯ ಹಣವನ್ನು ರಕ್ಷಿಸುವಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿ ನಿಂತಿದೆ. ರಾಜ್ಯದ ಪೊಲೀಸರು ಬಳಸುತ್ತಿರುವ ವೈರ್‌ಲೆಸ್‌ ವ್ಯವಸ್ಥೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಮತ್ತಷ್ಟು ಸದೃಢಗೊಳಿಸುವುದು ನಮ್ಮ ಉದ್ದೇಶವಾಗಿದೆ.

  • ಅಸ್ಮಿತ ವರದಿ: ದೇಶಾದ್ಯಂತ ಸೈಬರ್ ಅಪರಾಧಗಳು ಮತ್ತು ಆನ್‌ಲೈನ್ ವಂಚನೆ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಕರ್ನಾಟಕ ಸರ್ಕಾರ ಮತ್ತು ಪೊಲೀಸ್ ಇಲಾಖೆ ವಂಚಕರಿಗೆ ಬಿಸಿ ಮುಟ್ಟಿಸಲು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಸೈಬರ್ ವಂಚನೆಗೆ ಒಳಗಾದ ಹಣವನ್ನು ಬ್ಯಾಂಕ್‌ಗಳಲ್ಲಿ ಫ್ರೀಜ್ ಮಾಡುವ (Lien Mark) ಪ್ರಕ್ರಿಯೆಯಲ್ಲಿ ಕರ್ನಾಟಕ ಅತ್ಯುನ್ನತ ಸಾಧನೆ ಮಾಡಿದೆ ಎಂದು ಗೃಹ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.

    ಅವರು ಇಂದು ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಪೊಲೀಸ್‌ ವೈರ್‌ಲೆಸ್‌ ಕೇಂದ್ರ ಕಚೇರಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ, ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಹೇಳಿಕೆ ನೀಡಿದ್ದಾರೆ.

    ವಂಚನೆಗೊಳಗಾದ ಸಾರ್ವಜನಿಕರ ಹಣವನ್ನು ಬ್ಯಾಂಕುಗಳಲ್ಲೇ ತಡೆಹಿಡಿಯುವಲ್ಲಿ (Lien Marked Amount) ಕರ್ನಾಟಕ ಪೊಲೀಸರು ಗಮನಾರ್ಹ ಯಶಸ್ಸು ಸಾಧಿಸಿದ್ದಾರೆ. ಮಹಾರಾಷ್ಟ್ರದಲ್ಲಿ ವರದಿಯಾದ ₹3,203 ಕೋಟಿ ವಂಚನೆಯಲ್ಲಿ ₹548 ಕೋಟಿ ಮೊತ್ತವನ್ನು (17%) ಹಣವನ್ನು ಬ್ಲಾಕ್ ಮಾಡಿದ್ದರೆ, ಕರ್ನಾಟಕದಲ್ಲಿ ವರದಿಯಾದ ₹2,640 ಕೋಟಿಯಲ್ಲಿ ₹436 ಕೋಟಿ (17%) ಹಣವನ್ನು ಯಶಸ್ವಿಯಾಗಿ ತಡೆಹಿಡಿಯುವ ಮೂಲಕ ಸಾರ್ವಜನಿಕರ ಹಣವನ್ನು ರಕ್ಷಿಸಿದೆ.

    2025ರಲ್ಲಿ ವೆಬ್‌ ಮೂಲಕ ಹಾಗೂ 2026ರಲ್ಲಿ ವಾಟ್ಸಾಪ್ ಚಾಟ್‌ ಮೂಲಕ ದೂರು ಕೊಡುವ ಸೌಲಭ್ಯವನ್ನು ಪರಿಚಯಿಸಿದ ನಂತರ, ವೈರ್‌ಲೆಸ್‌ ಘಟಕಕ್ಕೆ ದೂರು ನೀಡುವ ಸಾರ್ವಜನಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. 2026ರಲ್ಲಿ ಮೊದಲ 5 ತಿಂಗಳಲ್ಲೇ (ಜನವರಿ-ಮೇವರೆಗೆ) 10,33,352 ಕರೆಗಳು ಬಂದಿದ್ದು, 90,225 ದೂರುಗಳು ದಾಖಲಾಗಿವೆ. ಈ ಅವಧಿಯಲ್ಲಿ ₹807 ಕೋಟಿಯಷ್ಟು ವಂಚನೆಯಾಗಿದ್ದು, ಅದರಲ್ಲಿ ಈಗಾಗಲೇ ₹216 ಕೋಟಿ, ಅಂದರೆ 27% ರಷ್ಟು ಹಣವನ್ನು ಬ್ಲಾಕ್ ಮಾಡಲಾಗಿದೆ ಎಂದು ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.

  • ಸೈಬರ್ ವಂಚನೆಯಿಂದ ಹಣ ಕಳೆದುಹೋಗದಂತೆ ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನದ ಬಿಗಿಕ್ರಮ - ಪ್ರಿಯಾಂಕ ಖರ್ಗೆ

  • ಇಲಾಖೆಯ ಪ್ರಮುಖ ಹೆಜ್ಜೆಗಳು:

    ಸೈಬರ್ ಅಪರಾಧಗಳ ತನಿಖೆ ಮತ್ತು ಹಣ ಹಿಂಪಡೆಯುವಿಕೆಯನ್ನು ಚುರುಕುಗೊಳಿಸಲು ಪೊಲೀಸ್ ಇಲಾಖೆ ಹಲವು ಪ್ರಮುಖ ಹೆಜ್ಜೆಗಳನ್ನು ಇಟ್ಟಿದೆ. ಬ್ಯಾಂಕುಗಳಲ್ಲಿ ಸೈಬರ್ ವಂಚನೆಯಾದ ಹಣವನ್ನು ತಕ್ಷಣವೇ ಫ್ರೀಜ್ (Lien Marking) ಮಾಡಲು ಬ್ಯಾಂಕ್ ಫಾಲೋ-ಅಪ್ ಟೀಮ್ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಇಲಾಖೆಯ ವೈರ್‌ಲೆಸ್ ಸಿಬ್ಬಂದಿಗೆ ಸೈಬರ್ ಅಪರಾಧ, ಸಿಸ್ಟಮ್ ಅಡ್ಮಿನ್ ಮತ್ತು I4C (Indian Cyber Crime Coordination Centre) ಪ್ಲಾಟ್‌ಫಾರ್ಮ್ ಬಳಕೆಯ ಬಗ್ಗೆ ವಿಶೇಷ ತರಬೇತಿ ನೀಡಲಾಗಿದೆ. ಬ್ಯಾಂಕುಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು, ಸಿಸಿಟಿವಿ ದೃಶ್ಯಾವಳಿಗಳ ವಿನಂತಿ ಹಾಗೂ ಬ್ಲಾಕ್ ಆದ ಹಣವನ್ನು ಸಾರ್ವಜನಿಕರಿಗೆ ಮರಳಿ ಕೊಡಿಸಲು ಹಾಗೂ ಎಫ್‌ಐಆರ್ (FIR) ದಾಖಲಿಸಲು ವಿಶೇಷ ಸಂಪರ್ಕ ಅಧಿಕಾರಿಗಳನ್ನು (Liaison Officers) ಬಳಸಿಕೊಳ್ಳಲಾಗುತ್ತಿದೆ.ತಂತ್ರಜ್ಞಾನ ಆಧಾರಿತ ಆಧುನಿಕ ಸುಧಾರಣೆಗಳು ಸಾರ್ವಜನಿಕರಿಗೆ ದೂರು ನೀಡಲು ಸುಲಭವಾಗುವಂತೆ ಮತ್ತು ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಲು ಇಲಾಖೆಯು ಇತ್ತೀಚೆಗೆ ಹಲವು ತಾಂತ್ರಿಕ ಸುಧಾರಣೆಗಳನ್ನು ತಂದಿದೆ ಎಂದಿದ್ದಾರೆ.

    2025ರಲ್ಲಿ ವೆಬ್-ಆಧಾರಿತ ಕಂಪ್ಲೇಂಟ್ ಬಾಟ್ ಮತ್ತು 2026 ರಲ್ಲಿ ವಾಟ್ಸಾಪ್ ಕಂಪ್ಲೇಂಟ್ ಬಾಟ್ (WhatsApp Complaint Bot) ಪರಿಚಯಿಸಲಾಗಿದೆ. ದೂರುಗಳ ಆದ್ಯತೆಯ ಮೇರೆಗೆ ಕರೆಗಳನ್ನು ವಿಂಗಡಿಸಲು ಮತ್ತು ಸ್ವಯಂಚಾಲಿತವಾಗಿ ನಿರ್ವಹಿಸಲು IVRS ತಂತ್ರಜ್ಞಾನ ಬಳಸಲಾಗುತ್ತಿದೆ. ಸಾರ್ವಜನಿಕರು ಕರೆ ಮಾಡಿದಾಗ ಕಡಿತಗೊಂಡ ಕರೆಗಳಿಗೆ (Dropped Calls) ದೂರುಗಳನ್ನು ಅಪ್‌ಲೋಡ್ ಮಾಡಲು ಸ್ವಯಂಚಾಲಿತ ಬಾಟ್ ಲಿಂಕ್ ಕಳುಹಿಸಲಾಗುತ್ತಿದೆ. I4C ಪ್ಲಾಟ್‌ಫಾರ್ಮ್‌ನಲ್ಲಿ ಬ್ಯಾಂಕ್ ವಹಿವಾಟುಗಳನ್ನು ವೇಗವಾಗಿ ನಿರ್ಬಂಧಿಸಲು 51 ಪಿಎಸ್ಐ ಮತ್ತು ಹೆಡ್ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.

    ***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ಫುಟ್ ಪಾತ್ ಪಾದಚಾರಿಗಳ ಹಕ್ಕು; ಹಾದಿಮ್ಯಾಲಿನವರ ಬದುಕಿನ ಹಕ್ಕಿನ ದಿಕ್ಕು? ಕರ್ನಾಟಕ ಸುದ್ದಿ

ಫುಟ್ ಪಾತ್ ಪಾದಚಾರಿಗಳ ಹಕ್ಕು; ಹಾದಿಮ್ಯಾಲಿನವರ ಬದುಕಿನ ಹಕ್ಕಿನ ದಿಕ್ಕು?

ಪದಚಾರಿಗಳ ಹಕ್ಕು ಸ್ಥಾಪಿಸಲು ಹೊರಟಿರುವ ಸಂದರ್ಭದಲ್ಲಿ ಸಚಿವ  ಕೃಷ್ಣ ಬೈರೇಗೌಡರು ಹಾಗು ಜನಪ್ರತಿನಿಧಿತ್ವದ ಸರ್ಕಾರ, ಕಾರ್ಯರೂಪಕ್ಕಾಗಿ ಕ್ಷೇತ್ರಕ್ಕೆ ಇಳಿಯುವ ಆಡಳಿತ ವ್ಯವಸ್ಥೆ  ಬೀದಿ ಬದಿ ವ್ಯಾಪಾರಿಗಳು ಯಾಕಿದ್ದಾರೆ ಎಂಬುದನ್ನೂ ಗಮನಿಸಬೇಕಿದೆ. ಭಾರತದ ಜನರ ದುಡಿಮೆಯ ಅವಕಾಶ, ಆದಾಯ, ಕುಟುಂಬ ನಿರ್ವಹಣೆಯ ಕನಿಷ್ಟ ಖರ್ಚುಗಳು, ಸಾಮಾಜಿಕ ಸಮೀಕರಣಗಳನ್ನೂ ಗಮನಿಸಬೇಕಿದೆ ಎಂದು ನಾಗರಿಕ ಸಮಾಜ ಮಾತನಾಡಿಕೊಳ್ಳುತ್ತಿದೆ.

Admin
ಪೊಲೀಸ್ ಇಲಾಖೆಯ ಮಾಹಿತಿ ಹಂಚಿಕೆಗೆ ಏಕೀಕೃತ ಮಾರ್ಗಸೂಚಿ ಬಿಡುಗಡೆಗೊಳಿಸಿದ ಗೃಹ ಸಚಿವರು ಕರ್ನಾಟಕ ಸುದ್ದಿ

ಪೊಲೀಸ್ ಇಲಾಖೆಯ ಮಾಹಿತಿ ಹಂಚಿಕೆಗೆ ಏಕೀಕೃತ ಮಾರ್ಗಸೂಚಿ ಬಿಡುಗಡೆಗೊಳಿಸಿದ ಗೃಹ ಸಚಿವರು

ಗೃಹ ಇಲಾಖೆಯ ಹೊಸ ಮಾರ್ಗಸೂಚಿಗಳ ಮೂಲಕ, ಪೊಲೀಸ್ ಇಲಾಖೆಯ ವಿವಿಧ ಹಂತಗಳಲ್ಲಿ ಮಾಧ್ಯಮಗಳಿಗೆ ನೀಡಲಾಗುವ ಮಾಹಿತಿ, ಅಪರಾಧ ಪ್ರಕರಣಗಳ ತನಿಖಾ ವಿವರಗಳು ಹಾಗೂ ಸಾರ್ವಜನಿಕ ಪ್ರಕಟಣೆಗಳ ಕುರಿತು ಸ್ಪಷ್ಟ ನಿಯಮಾವಳಿ ಜಾರಿಗೆ ತರಲಾಗಿದೆ

Admin
ಬೆಳಗಾವಿ  ಗಡಿ ವಿಷಯ ಕಾನೂನಾತ್ಮಕವಾಗಿ ಸರ್ಕಾರ   ಗಂಭೀರವಾಗಿ ಪರಿಗಣಿಸಲು ಕನ್ನಡ ಮನಸ್ಸುಗಳ ಒಕ್ಕೊರಲ ಆಗ್ರಹ ಕರ್ನಾಟಕ ಸುದ್ದಿ

ಬೆಳಗಾವಿ  ಗಡಿ ವಿಷಯ ಕಾನೂನಾತ್ಮಕವಾಗಿ ಸರ್ಕಾರ ಗಂಭೀರವಾಗಿ ಪರಿಗಣಿಸಲು ಕನ್ನಡ ಮನಸ್ಸುಗಳ ಒಕ್ಕೊರಲ ಆಗ್ರಹ

ಗಡಿ ದಾವೆಯನ್ನು ಪ್ರಾಥಮಿಕ ಹಂತದಲ್ಲಿಯೇ ನ್ಯಾಯಾಲಯವು ತಿರಸ್ಕರಿಸುವಂತೆ ಸೂಕ್ತ ಕಾನೂನು ಕ್ರಮವನ್ನು ರಾಜ್ಯ ಸರಕಾರ ಕೈಕೊಳ್ಳಬೇಕು. ಬೆಳಗಾವಿ ಗಡಿಗೆ ಸಂಬಂಧಿಸಿದಂತೆ ರಚಿಸಲಾದ ಗಡಿ ಸಂರಕ್ಷಣಾ ಆಯೋಗ ಬೆಂಗಳೂರಿನ ಬಹುಮಹಡಿ ಕಟ್ಟಡದಲ್ಲಿದ್ದು ಅದನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರಿಸಬೇಕು - ಆಗ್ರಹ

Admin