ಸವಾಲುಗಳ ಮುಖಾಮುಖಿಗೆ ಸಮಗ್ರತೆಯ ಆಲಂಗಿಸಿದ ನೂತನ ಮುಖ್ಯಮಂತ್ರಿ ಡಿಕೆಶಿ
ಅಪಾರ ಜನ ಬೆಂಬಲ, ರಾಜಕೀಯ ಬಲಾಢ್ಯ ಶಕ್ತಿ, ಅಪಾರವಾದ ರಾಜಕೀಯ ಅನುಭವ, ಅತ್ಯಂತ ಸಮರ್ಥ ಜನನಾಯಕ ಎಂದು ಪ್ರಸಿದ್ದಿಯಾದ ಸಿದ್ಧರಾಮಯ್ಯನವರನ್ನು ಸರಿಸಿ ತಾನೇ ಮುಖ್ಯಮಂತ್ರಿ ಆಗಬೇಕು ಎಂಬುದು ಡಿ.ಕೆ. ಶಿವಕುಮಾರ ಅವರಿಗೆ ಕೇವಲ ಅಧಿಕಾರದ ಲಾಲಸೆ ಮಾತ್ರವಾಗಿರದೆ ನಾಡಿನ ಸಮಗ್ರ ಅಭಿವೃದ್ಧಿಯ ಹೊಸ ಪರ್ವದ ರಾಜಕೀಯ ಜಾಣ್ಮೆ ಇರಲು ಸಾಧ್ಯವಿದೆ.
ಸವಾಲುಗಳ ಮುಖಾಮುಖಿಗೆ ಸಮಗ್ರತೆಯ ಆಲಂಗಿಸಿದ ನೂತನ ಮುಖ್ಯಮಂತ್ರಿ ಡಿಕೆಶಿ
**
ಕಳೆದ ಐದಾರು ತಿಂಗಳಿಂದ ಕುರ್ಚಿಗಾಗಿ ನಡೆದ ರಾಜಕೀಯ ತೀವ್ರ ಗುದ್ದಾಟದೊಂದಿಗೆ ಪೂರ್ವ ಒಪ್ಪಂದದಂತೆ ಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿ ಪದಗ್ರಹಣ ಮಾಡಿರುವುದು ಅವರೇ ಹೇಳಿರುವಂತೆ "ಹೊಸ ಪರ್ವ" ಎಂದು ಉದ್ಘೋಷಿಸಲಾಗಿದೆ.
ಒಂದೇ ಪಕ್ಷದಲ್ಲಿದ್ದುಕೊಂಡು ಒಬ್ಬ ಅತ್ಯಂತ ಪ್ರಬಲ ಜನನಾಯಕನನ್ನು ಹಿಂದೆ ಸರಿಸಿ, ಆ ಸ್ಥಾನ ತಾನು ಪಡೆದುಕೊಳ್ಳುವುದರ ಹಿಂದೆ ವಿಭಿನ್ನ ಬಲವಾದ ಕಾರಣ ಇರಲು ಸಾಧ್ಯ. ಇದರ ಸಾಧ್ಯತೆಗೆ ಡಿಕೆಶಿ ನಡೆಯುವ ಮುಂದಿನ ದಾರಿ ಹೂವಿನ ಹಾಸಿಗೆಯಾಗಿರುವುದಿಲ್ಲ; ಅದು ಬೆಂಕಿಯ ನಡುಗೆಯಾಗಿರುತ್ತದೆ. ರಾಜಕೀಯದಲ್ಲಿ ಭೀಮನ ಬಲವೂ ಬೇಕು ಎಂದು ನಂಬಿರುವ ಅವರಿಗೆ ಬೆಂಕಿಯ ನಡುಗೆಯ ಪೂರ್ಣಪ್ರಮಾಣದ ಅರಿವಿದೆ.
ಅಪಾರ ಜನ ಬೆಂಬಲ, ರಾಜಕೀಯ ಬಲಾಢ್ಯ ಶಕ್ತಿ, ಅಪಾರವಾದ ರಾಜಕೀಯ ಅನುಭವ, ಅತ್ಯಂತ ಸಮರ್ಥ ಜನನಾಯಕ ಎಂದು ಪ್ರಸಿದ್ದಿಯಾದ ಸಿದ್ಧರಾಮಯ್ಯನವರನ್ನು ಸರಿಸಿ ತಾನೇ ಮುಖ್ಯಮಂತ್ರಿ ಆಗಬೇಕು ಎಂಬುದು ಡಿ.ಕೆ. ಶಿವಕುಮಾರ ಅವರಿಗೆ ಕೇವಲ ಅಧಿಕಾರದ ಲಾಲಸೆ ಮಾತ್ರವಾಗಿರದೆ ನಾಡಿನ ಸಮಗ್ರ ಅಭಿವೃದ್ಧಿಯ ಹೊಸ ಪರ್ವದ ರಾಜಕೀಯ ಜಾಣ್ಮೆ ಇರಲು ಸಾಧ್ಯವಿದೆ. ಆ ಮೂಲಕ ಸರ್ಕಾರವನ್ನು ಜನಪರಗೊಳಿಸಿ ಸಮರ್ಥವಾಗಿ ಮುನ್ನಡೆಸುವ ಪ್ರಬಲವಾದ ಸವಾಲಕ್ಕೆ ಧೈರ್ಯದಿಂದ ಮುಖಾಮುಖಿಯಾಗುವ ಛಲ ಮತ್ತು ಹಠ ಹೊಂದಿದ ಕಾರಣ ಸಿದ್ಧರಾಮಯ್ಯನಂಥ ಪ್ರಬಲ ನಾಯಕನನ್ನು ಬದಿಗೆ ಸರಿಸುತ್ತಾರೆ.
ಕೇವಲ ಪಕ್ಷದ ಆಂತರಿಕ ಬಿರುಕುಗಳ ನಿವಾರಣೆ, ಜನಪರ ಅಭಿವೃದ್ಧಿ ಮೂಲಕ ಸರ್ಕಾರವನ್ನು ಸಮರ್ಥವಾಗಿ ಮುನ್ನಡೆಸುವ ಎರಡೇ ಸವಾಲಗಳು ಡಿಕೆಸಿ ಮುಂದಿಲ್ಲ. ಅದಕ್ಕೂ ಮೀರಿದ ತನ್ನ ರಾಜಕೀಯ ಅಧಿಕಾರ ಕೇವಲ ಎರಡು ವರ್ಷದ ಅಧಿಕಾರವಧಿಗೆ ಮಾತ್ರ ಸೀಮಿತಗೊಳ್ಳದೆ, ಮುಂದಿನ ಚುನಾವಣೆಯಲ್ಲಿ ಮತ್ತೇ ಬಹುಮತ ಸಾಧಿಸಿ ಅಧಿಕಾರಕ್ಕೆ ತರಬೇಕು ಎಂಬ ಸವಾಲು ಎದುರಿಟ್ಟುಕೊಂಡಿದ್ದಾರೆ. ರಾಜಕೀಯ ಚಾಣಾಕ್ಷ ಸಿದ್ಧರಾಮಯ್ಯನವರಿಗೆ ಈ ಸವಾಲು ಇರಲಿಲ್ಲವಂತಲ್ಲ, ಇತ್ತು, ಆದರೆ, ಡಿಕೆ ಶಿವಕುಮಾರ ಅವರು ರಾಜ್ಯದ ಚುನಾವಣೆ ಮಾತ್ರವಲ್ಲ, ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಚುನಾವಣೆಯನ್ನು ಪ್ರಬಲವಾಗಿ ಎದುರಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ವಿಶಾಲವಾದ ಆಕಾಂಕ್ಷೆಯ ಸವಾಲು ಹೆಗಲಿಗೆ ಹಾಕೊಂಡತ್ತಿದೆ.

ರಾಜಕೀಯಕ್ಕೆ ವಿಧುರ ನೀತಿಯೂ ಬೇಕು ಎಂದು ನಂಬಿಕದ ಡಿ.ಕೆ. ಶಿವಕುಮಾರ ಅದರ ಯಶಸ್ವಿಯ ಸವಾಲು ಬೆನ್ನಿಗೆ ಕಟ್ಟಿಕೊಂಡಿದ್ದಾರೆ. ಅರ್ಜನಂತೆ ಗುರಿ ಇರಬೇಕೆಂದು ಹೇಳುವ ಅವರು ಈ ಸವಾಲುಗಳನ್ನೇ ತಮ್ಮ ರಾಜಕೀಯ ಗುರಿಗಳನ್ನಾಗಿರಿಸಿಕೊಂಡಿದ್ದಾರೆ.
ಕೃಷ್ಣನ ರಾಜಕೀಯ ತಂತ್ರಗಾರಿಕೆಯನ್ನು ಚನ್ನಾಗಿ ರೂಢಿಸಿಕೊಂಡಿರುವ ಡಿ.ಕೆ. ಶಿವಕುಮಾರ ಎದುರಿಗುರವ ಮತ್ತು ಎದುರಿಸಲೇಬೇಕಾದ ಪ್ರಬಲವಾದ ಸವಾಲುಗಳನ್ನು ಎದುರಿಸಿ ಜಯಶಾಲಿಯಾಗಲು ಅನುರಿಸಿದ ಮಾರ್ಗ ಸಮಗ್ರತೆಯನ್ನು ಒಳಗೊಳ್ಳುವಿಕೆಯ ಮಾರ್ಗ.ಒಂದೆಡೆ ಸಿದ್ಧರಾಮಯ್ಯನವರಿಂದ ಕುರ್ಚಿ ಕಸಿದುಕೊಳ್ಳುವ ಇವರು ಇನ್ನೊಂದೆಡೆ ಅಷ್ಟೇ ಪ್ರೀತಿ , ಮಮಕಾರದಿಂದ ಸಿದ್ಧರಾಮಯ್ಯನವರನ್ನು ನಯವಾಗಿ ಅಪ್ಪಿಕೊಂಡು ಕಾಲಿಗೆ ಎರಗಿ ಬಲಾಡ್ಯ ನಾಯಕ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಇದು ಇಲ್ಲಿಗೆ ಮಾತ್ರ ನಿಲ್ಲಿಸದೆ ತಮ್ಮ ರಾಜಕೀಯ ಆರಂಭದಿಂದಲೂ ರಾಜಕೀಯ ಬದ್ಧ ಎದುರಾಳಿ, ಅನೇಕಸಲ ವೈರಿ ಎಂದು ಬಗೆದ ರಾಜಕೀಯ ಮುತ್ಸದ್ಧಿ, ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರ ಮನೆಗೆ ತೆರಳಿ ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡು ನೇರವಾಗಿ ಪ್ರತಿಪಕ್ಷದ ಹಿರಿಯ ನಾಯಕ, ಜನಪರ ಹೋರಾಟಗಾರ ಬಿ.ಎಸ್. ಯಡಿಯೂರಪ್ಪನವರ ಮನೆಗೆ ತೆರಳಿ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಇದು ಡಿಕೆಶಿ ಅವರ ಸಮಗ್ರ ರಾಜಕೀಯ ಒಳಗೊಳ್ಳುವಿಕೆ.
ಅಪಾರ ಧಾರ್ಮಿಕ ಶ್ರದ್ಧೆಯೊಳ್ಳ, ಜ್ಯೋತಿಷ್ಯದ ನಂಬಿಕೆಯೊಳ್ಳ ಶಿವಕುಮಾರ ಅವರು ಸಮಾಜದ ಎಲ್ಲ ವರ್ಗವನ್ನು ತೆಕ್ಕೆಗೆ ತೆಗೆದುಕೊಳ್ಳಲು ತಮ್ಮ ಮುಖ್ಯಮಂತ್ರಿ ಪದಗ್ರಹಣದ ಅದ್ದೂರಿ ಸಮಾರಂಭಕ್ಕೆ ಸರ್ವಧರ್ಮ ಗುರುಗಳಿಗೆ ವಿಶೇಷ ಆಹ್ವಾನ ನೀಡಿ ಬರಮಾಡಿಕೊಳ್ಳುತ್ತಾರೆ. ಎಲ್ಲ ಪಕ್ಷದ ನಾಯಕರುಗಳು, ಅನ್ಯ ರಾಜ್ಯದ ಮುಖ್ಯಮಂತ್ರಿಗಳನ್ನು, ಪಕ್ಷದ ಹೈಕಮಾಡಂರನ್ನು, ಸ್ತ್ರೀ ಶಕ್ತಿ ಸಂಘಟನೆ ಹೀಗೆ ಎಲ್ಲರಿಗೂ ಆಹ್ವಾನಿಸುತ್ತಾರೆ. ತನ್ನ ರಾಜಕೀಯ ಬದ್ಧತೆಯ ನಡುಗೆಯ ಸಾಕ್ಷಿಗಾಗಿ ಸಂವಿಧಾನದ ಕೃತಿಯನ್ನು ಕೈಯಲ್ಲಿ ಹಿಡಿದುಕೊಂಡು ಆತ್ಮಸಾಕ್ಷಿಯಾಗಿ , ಶ್ರದ್ಧಾಪೂರ್ವಕವಾಗಿ ಪ್ರಮಾಣ ವಚನ ಸ್ವೀಕರಿಸಿ, ಜನತೆಗೆ ಮನಃಪೂರ್ವಕವಾಗಿ ನಮಸ್ಕರಿಸುತ್ತಾರೆ. ಮುಖ್ಯಮಂತ್ರಿ ಗದ್ದುಗೆ ಏರುವ ಸಂದರ್ಭದಲ್ಲಿ ಪ್ರಜಾತಂತ್ರದ ದೇಗುಲ ವಿಧಾನಸೌಧದ ಮೆಟ್ಡಿಲುಗಳ ಮೇಲೆ ದೀರ್ಘದಂಡ ನಮಸ್ಕಾರ ಹಾಕುವುದರ ಮೂಲಕ ಹೊಸ ಪರ್ವದ ಹಾದಿಗೆ ನಾಂದಿ ಹಾಡುತ್ತಾರೆ.

ಡಿ.ಕೆ. ಶಿ ಅವರ ವಿಶೇಷವಾದ ತಮ್ಮ ರಾಜಕೀಯ ನಡೆಯ ಹಿಂದೆ ಮುಖ್ಯಮಂತ್ರಿ ಪದವಿಯನ್ನು ದೀರ್ಘಾವಧಿಗೆ ತೆಗೆದುಕೊಂಡು ಹೋಗುವ, ಆ ಮೂಲಕ ಚಾರಿತ್ರಿಕ ಜನಪರ ಆಡಳಿತ ನಡೆಸುವ ಮಹತ್ವಾಕಾಂಕ್ಷೆ ಹೊಂದಿರುವುದು ಮುಂಬರುವ ಬೆಂಕಿಯ ನಡುಗೆಯಲ್ಲಿ ಎಷ್ಟರ ಮಟ್ಟಗೆ ಸಾಧ್ಯವಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

-ಡಾ. ಕೆ. ಎನ್. ದೊಡ್ಡಮನಿ,
ಈ ಲೇಖನ ಹಂಚಿಕೊಳ್ಳಿ