ಬ್ರೇಕಿಂಗ್
ಶರಣರ ಅನುಭವ ಮಂಟಪಕ್ಕೆ ಭೆಟ್ಟಿ ನೀಡಿದ AI ರೇಖಾ ಚಿತ್ರಗಳನ್ನು ಹಂಚಿಕೊಂಡ ಮುಖ್ಯಮಂತ್ರಿ ಅಂಗನವಾಡಿಯಿಂದ ಪಿಯುಸಿ ವರೆಗೂ ನಾಳೆ ರಜೆ ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ : 397  ಕಾಳಜಿ ಕೇಂದ್ರಗಳ ಸೌಲಭ್ಯ ಪರಿಶೀಲನೆಗೆ ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಸೂಚನೆ ತುಂಬಿದ ಜೀವಜಲ : ಹಸಿರಾದ ಇಳೆ, ಖುಷಿಗೊಂಡ ರೈತ ಸರ್ಕಾರದ ಸೂಚನೆ ಬೆಳಗಾವಿ ಪಾಲಿಕೆ ಪಾಲಿಸದಿದ್ದರೆ ಸೂಪರ್ ಸೀಡ್ ಮಾಡಬಹುದು - ಸಚಿವರಿಗೆ ಕನ್ನಡ ಸಂಘಟನೆಗಳ ಮನವರಿಕೆ ವಿಟಿಯು ಜಾಗತಿಕ ಮಟ್ಟದ ಖ್ಯಾತಿಗೆ ಗುಣಮಟ್ಟದ ಶಿಕ್ಷಣ ಅಳವಡಿಕೆ ಅಗತ್ಯ : ಕುಲಪತಿ ವಿದ್ಯಾಶಂಕರ್ ಸಲಹೆ ಮಳೆಯಾಗುತ್ತಿದ್ದು ಸದ್ಯ ಆತಂಕ ನಿವಾರಣೆ : ಸಚಿವ ಸತೀಶ ಜಾರಕಿಹೊಳಿ ಮೇಘಮೈತ್ರಿ ಸಾಹಿತ್ಯ ಸಂಭ್ರಮ: ಸಂಘ - ಸಂಸ್ಥೆಗಳ ಪ್ರಶಸ್ತಿ ಪ್ರದಾನ ಪರಂಪರೆ  ಗೌರವಯುತ ಕಾರ್ಯ - ಎಚ್.ಐ. ತಿಮ್ಮಾಪುರ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ ಫುಟ್ ಪಾತ್ ಪಾದಚಾರಿಗಳ ಹಕ್ಕು; ಹಾದಿಮ್ಯಾಲಿನವರ ಬದುಕಿನ ಹಕ್ಕಿನ ದಿಕ್ಕು? ಶರಣರ ಅನುಭವ ಮಂಟಪಕ್ಕೆ ಭೆಟ್ಟಿ ನೀಡಿದ AI ರೇಖಾ ಚಿತ್ರಗಳನ್ನು ಹಂಚಿಕೊಂಡ ಮುಖ್ಯಮಂತ್ರಿ ಅಂಗನವಾಡಿಯಿಂದ ಪಿಯುಸಿ ವರೆಗೂ ನಾಳೆ ರಜೆ ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ : 397  ಕಾಳಜಿ ಕೇಂದ್ರಗಳ ಸೌಲಭ್ಯ ಪರಿಶೀಲನೆಗೆ ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಸೂಚನೆ ತುಂಬಿದ ಜೀವಜಲ : ಹಸಿರಾದ ಇಳೆ, ಖುಷಿಗೊಂಡ ರೈತ ಸರ್ಕಾರದ ಸೂಚನೆ ಬೆಳಗಾವಿ ಪಾಲಿಕೆ ಪಾಲಿಸದಿದ್ದರೆ ಸೂಪರ್ ಸೀಡ್ ಮಾಡಬಹುದು - ಸಚಿವರಿಗೆ ಕನ್ನಡ ಸಂಘಟನೆಗಳ ಮನವರಿಕೆ ವಿಟಿಯು ಜಾಗತಿಕ ಮಟ್ಟದ ಖ್ಯಾತಿಗೆ ಗುಣಮಟ್ಟದ ಶಿಕ್ಷಣ ಅಳವಡಿಕೆ ಅಗತ್ಯ : ಕುಲಪತಿ ವಿದ್ಯಾಶಂಕರ್ ಸಲಹೆ ಮಳೆಯಾಗುತ್ತಿದ್ದು ಸದ್ಯ ಆತಂಕ ನಿವಾರಣೆ : ಸಚಿವ ಸತೀಶ ಜಾರಕಿಹೊಳಿ ಮೇಘಮೈತ್ರಿ ಸಾಹಿತ್ಯ ಸಂಭ್ರಮ: ಸಂಘ - ಸಂಸ್ಥೆಗಳ ಪ್ರಶಸ್ತಿ ಪ್ರದಾನ ಪರಂಪರೆ  ಗೌರವಯುತ ಕಾರ್ಯ - ಎಚ್.ಐ. ತಿಮ್ಮಾಪುರ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ ಫುಟ್ ಪಾತ್ ಪಾದಚಾರಿಗಳ ಹಕ್ಕು; ಹಾದಿಮ್ಯಾಲಿನವರ ಬದುಕಿನ ಹಕ್ಕಿನ ದಿಕ್ಕು?
08 ಜುಲೈ 2026
ಮಂಗಾವತಿ :   ಸೇವಾ ನಿವೃತ್ತ ಹಾಗೂ ಪ್ರತಿಭಾ ಸಾಧಕರಿಗೆ ಗೌರವ ಸನ್ಮಾನ
🏡 ಗ್ರಾಮ
Dr. K N Doddmani · · 178 ವೀಕ್ಷಣೆಗಳು

ಮಂಗಾವತಿ :   ಸೇವಾ ನಿವೃತ್ತ ಹಾಗೂ ಪ್ರತಿಭಾ ಸಾಧಕರಿಗೆ ಗೌರವ ಸನ್ಮಾನ

ಕಬ್ಬಿನಿಂದ ಕಬ್ಬಿಗೆ ನಿರ್ಧಿಷ್ಟ ಅಂತರ ಕಾಯ್ದುಕೊಂಡು ಬೆಳೆಯಲ್ಲಿ ಸಾಕಷ್ಟು ಗಾಳಿಯಾಡುವಂತೆ ಮಾಡಿದರೆ, ಕಬ್ಬು ಪೂರ್ಣ ಪ್ರಮಾಣದಲ್ಲಿ ಬೆಳೆದು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಸಾವಯವ ಮಾದರಿಯಿಂದ ಒಂದ ಎಕರೆಗೆ ಒಂದು ನೂರರಿಂದ 120 ಟನ್‌ ಇಳುವರಿ ಪಡೆಯಲು ಸಾಧ್ಯವಿದೆ. ಕಬ್ಬು ಕಟಾವ್‌ ಮಾಡಿದ ಮೇಲೆ ಅದರ ರವದಿ ಸುಡದೆ ಅಲ್ಲಿಯೇ ಬಿಟ್ಟು ಸಾವಯವ ಗೊಬ್ಬರವನ್ನಾಗಿಸಬೇಕು - ತಳಿ ತಜ್ಞರಿಂದ ವಿಶೇಷ ಉಪನ್ಯಾಸ

ಮಂಗಾವತಿ :   ಸೇವಾ ನಿವೃತ್ತ ಹಾಗೂ ಪ್ರತಿಭಾ ಸಾಧಕರಿಗೆ ಗೌರವ ಸನ್ಮಾನ

--

ಅಸ್ಮಿತೆ ಸುದ್ಧಿ: ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮದ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸೇವಾ ನಿವೃತ್ತರಿಗೆ ಹಾಗೂ ಕಳೆದ ಶೈಕ್ಷಣಿಕ ಸಾಲಿನಲ್ಲಿ ಉತ್ತಮ ಅಂಕ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಗ್ರಾಮದ ನಿವೃತ್ತ ಹಾಗೂ ಸೇವಾನಿರತ ನೌಕರರ ಗ್ರಾಮ ಕಲ್ಯಾಣ ಸಂಘದಿಂದ ಗೌರವ ಸನ್ಮಾನ ಕಾರ್ಯಕ್ರಮವನ್ನು ಇತ್ತೀಚಿಗೆ ಹಮ್ಮಿಕೊಳ್ಳಲಾಯಿತು.

ಮಹಾರಾಷ್ಟ್ರದ ಶಿರೋಳ ದತ್ತ ಸಕ್ಕರೆ ಕಾರ್ಖೆನೆಯಲ್ಲಿ ಸೇವೆ ಸಲ್ಲಿಸಿದ ಸುರೇಶ ಜಗ್ಗಗೌಡ ಪಾಟೀಲ ಮತ್ತು ಶರದ ಬಾಳಾಸಾಬ ಪಾಟೀಲ(ನೇಮನಗೊಳ),ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸಿದ ರಂಗಾ ಕೃಷ್ಣಾ ಗುಂಜಾಳೆ ಮತ್ತು ಶಂಕರ ಬಾಬು ಸುಂಠೆ ಹಾಗೂ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸುನಿತಾ ಚನ್ನಪ್ಪ ರತ್ನಪ್ಪನವರ ಅವರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು.

ಅದೇ ರೀತಿ, ಕಳೆದ ಶೈಕ್ಷಣಿ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರತಿಶತ 95% ಅಂಕ ಪಡೆದ ಸ್ವರಾಲಿ ನರಸು ಬಾವಚೆ, 92% ರಷ್ಟು ಅಂಕಪಡೆದ ವಿದ್ಯಾ ಮನೋಜ್‌ ದೇಶಿಂಗೆ, ಸ್ನೇಹಾ ಚಿದಾನಂದ ಪಾಟೀಲ, ಶೇಕಡಾ 91% ಅಂಕ ಪಡೆದ ಅರ್ಪಿತಾ ಅಮೀತ್‌ ಪಾಟೀಲ ಮತ್ತು ಎಸ್.ಎಸ್. ಎಲ್.ಸಿ. ಪರೀಕ್ಷೆಯಲ್ಲಿ ಪ್ರತಿಶತ 97% ರಷ್ಟು ಸಾಧನೆ ಮಾಡಿದ ತನುಷ್ಕಾ ರಾಮಗೌಡ ಪಾಟೀಲ ಹಾಗೂ ಬೆಳಗಾವಿ ಮರಾಠಾ ಲಘು ಪದಾತಿದಳದ ಅಗ್ನಿವೀರ ಸೈನಿಕನಾಗಿ ಆಯ್ಕೆಯಾದ ಆಸೀಫ್‌ ಶಾಹೀದ್‌ ಸಲಾತೆ ಅವರಿಗೆ ಸಂಘಟನೆ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಕಬ್ಬಿನ ಬೆಳೆಯ ತಳಿಗಳ ಖ್ಯಾತ ಸಂಶೋಧಕ ಮಹಾರಾಷ್ಟ್ರದ ಡಾ. ಭರತ್‌ ರಾಸ್ಕರ್‌ ಅವರು ಕಬ್ಬಿನ ಇಳುವರಿ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ರೈತರು ಸುಧಾರಿತ ಕೃಷಿ ಪದ್ಧತಿ ಅನುಸರಿಸಬೇಕಾದರೆ ಮೊದಲು ಮಣ್ಣಿನ ಪರೀಕ್ಷೆ ಮಾಡುವುದು ಸೂಕ್ತ.  ಮಣ್ಣಿನ ಗುಣಸ್ವಭಾವದ ಅನುಸಾರ ತಳಿಗಳ ಆಯ್ಕೆಯಲ್ಲಿ ಎಚ್ಚರ ವಹಿಸಬೇಕು. ಸಾಮಾನ್ಯವಾಗಿ ಜೂನ್‌ದಿಂದ ಸಪ್ಟೆಂಬರ್‌ ಕಾಲಾವಧಿಯಲ್ಲಿ ಕಬ್ಬಿನಿ ಲಾವಣಿ ಮಾಡಬೇಕು. ಅತೀಯಾದ ನೀರು, ಗೊಬ್ಬರ ಬಳಕೆಯಿಂದ ಇಳುವರಿ ಹೆಚ್ಚಾಗುತ್ತದೆ ಎಂಬ ಸಾಂಪ್ರದಾಯಿಕ ತಿಳುವಳಿಕೆಯಿಂದ ಹೊರಬಂದು ನಿಗದಿ ಪ್ರಮಾಣದಲ್ಲಿ ಅಗತ್ಯವಿದ್ದಷ್ಟು ಪೂರೈಯಿಸಬೇಕು. ಭೂಮಿಯ ತೇವಾಂಶ ಉಳಿಸಿಕೊಳ್ಳಲು ಕಬ್ಬಿನ ಎಲೆಗಳು ಸಾಲಗಳಲ್ಲಿಯೇ ಬಿಟ್ಟು ಸಾವಯವ ಪದ್ಧತಿಗೆ ಆದ್ಯತೆ ನೀಡಬೇಕು. ಕಬ್ಬಿನಿಂದ ಕಬ್ಬಿಗೆ ನಿರ್ಧಿಷ್ಟ ಅಂತರ ಕಾಯ್ದುಕೊಂಡು ಬೆಳೆಯಲ್ಲಿ ಸಾಕಷ್ಟು ಗಾಳಿಯಾಡುವಂತೆ ಮಾಡಿದರೆ, ಕಬ್ಬು ಪೂರ್ಣ ಪ್ರಮಾಣದಲ್ಲಿ ಬೆಳೆದು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಸಾವಯವ ಮಾದರಿಯಿಂದ ಒಂದ ಎಕರೆಗೆ ಒಂದು ನೂರರಿಂದ 120 ಟನ್‌ ಇಳುವರಿ ಪಡೆಯಲು ಸಾಧ್ಯವಿದೆ. ಕಬ್ಬು ಕಟಾವ್‌ ಮಾಡಿದ ಮೇಲೆ ಅದರ ರವದಿ ಸುಡದೆ ಅಲ್ಲಿಯೇ ಬಿಟ್ಟು ಸಾವಯವ ಗೊಬ್ಬರವನ್ನಾಗಿಸಬೇಕು ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಆರ್.ಬಿ. ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಗ್ರಾಮದ ಹಿರಿಯರಾದ ಕೆ.ಆರ್.‌ ಪಾಟೀಲ, ರಾಜಗೌಡ ಪಾಟೀಲ, ಸಿರೀಶ್‌ ಪಾಟೀಲ, ಅಪ್ಪಾಸಾಬ ತೋಬರೆ, ಉದಯ ಪಾಟೀಲ, ಅಶೋಕ ದೇಶಿಂಗೆ, ಕೆ.ಕೆ. ಸುಂಠೆ, ನಿವೃತ್ತ ಶಿಕ್ಷಕರಾದ ಎಂ.ಬಿ. ಕೋರಬು, ಅಣ್ಣಸಾಬ ಕೋರಬು ನಿವೃತ್ತ ಪ್ರಾಧ್ಯಾಪಕರಾದ ಎಸ್.ಎಸ್.‌ ಬಾಗನೆ, ಕೆ.ಪಿ. ಶಿವರಾಯಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಅನಿಲ ರಾವಸಾಬ ಪಾಟೀಲ ಸ್ವಾಗತಿಸಿದರು. ದತ್ತಾ ಸುಂಠೆ ಕಾಯಕ್ರಮ ನಿರ್ವಹಣೆ ಮಾಡಿದರು.

***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ಜಿಲ್ಲಾ ಪಂಚಾಯತ ಮತ್ತು ಗೋಗಟೆ ಇನಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಒಡಂಬಡಿಕೆ ಗ್ರಾಮ

ಜಿಲ್ಲಾ ಪಂಚಾಯತ ಮತ್ತು ಗೋಗಟೆ ಇನಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಒಡಂಬಡಿಕೆ

ವೃತ್ತಿಪರ ಅಧ್ಯಯನ ವಿದ್ಯಾರ್ಥಿಗಳು ಮಾಡಿದ ಅಧ್ಯಯನ, ಕೈಗೊಂಡ ಸಂಶೋಧನೆ ಯಶಸ್ಸು ಸಾಧಿಸಬೇಕಾದರೆ ಪ್ರಾಯೋಗಿಕವಾಗಿ ಸಾರ್ವಜನಿಕ ಸಂಪರ್ಕ ಸಾಧಿಸುವುದು ಅಗತ್ಯ. ಅದರಲ್ಲೂ ವಿಶೇಷವಾಗಿ ಬದಲಾಗುತ್ತಿರುವ ಗ್ರಾಮಗಳ ಸ್ಥಿತಿಗತಿಗಳ ಅರಿವಿನ ಜೊತೆಗೆ ಅವುಗಳ ಸಕಾರಾತ್ಮಕ ಅಭಿವೃದ್ಧಿ ಯತ್ತ ಯುವ ಸಮುದಾಯ ಮುಂದಾಗಬೇಕಾದ ತುರ್ತು ಅಗತ್ಯದ ಸಂದರ್ಭದಲ್ಲಿ ಒಂದು ಸರ್ಕಾರಿ ಇಲಾಖೆ, ಖಾಸಗಿ ಶಿಕ್ಷಣ ಸಂಸ್ಥೆಯೊಂದಿಗೆ ಕೈಜೋಡಿಸಿರುವುದು ಸ್ವಾಗತಾರ್ಹ ಬೆಳವಣಿಗೆ

Admin