ಅಂಗನವಾಡಿಯಿಂದ ಪಿಯುಸಿ ವರೆಗೂ ನಾಳೆ ರಜೆ
ಬೆಳಗಾವಿ, ಖಾನಾಪುರ ಮತ್ತು ನಿಪ್ಪಾಣಿ ತಾಲ್ಲೂಕಿನ ಶಾಲೆಗಳು, ಪಿಯು ಕಾಲೇಜುಗಳಿಗೆ ರಜೆ ಘೋಷಣೆ
ಅಸ್ಮಿತೆ ವರದಿ, ಜು.07: ಶಾಲಾ ಕಾಲೇಜು ರಜೆಯ ಪರಿಷ್ಕೃತ ಆದೇಶ ಪ್ರಕಟಿಸಲಾಗಿದ್ದು, ವ್ಯಾಪಕ ಮಳೆಯ ಕಾರಣ ಬೆಳಗಾವಿ, ಖಾನಾಪುರ ಮತ್ತು ನಿಪ್ಪಾಣಿ ತಾಲ್ಲೂಕಿನ ಶಾಲೆಗಳು, ಪಿಯು ಕಾಲೇಜುಗಳಿಗೆ ರಜೆ ಘೋಷಣೆ
ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕುಗಳ ನಗರ ಹಾಗೂ ಗ್ರಾಮೀಣ ಪ್ರದೇಶಗಳು ಮತ್ತು ನಿಪ್ಪಾಣಿ ತಾಲ್ಲೂಕು ವ್ಯಾಪ್ತಿಯಲ್ಲಿನ ಎಲ್ಲ ಅಂಗನವಾಡಿ ಕೇಂದ್ರಗಳು/ಪ್ರಾಥಮಿಕ/ ಪ್ರೌಢಶಾಲೆಗಳು ಮತ್ತು ಪಿಯುಸಿ ಹಾಗೂ ಸಮವರ್ತಿತ ಕಾಲೇಜುಗಳಿಗೂ ಬುಧವಾರ(ಜುಲೈ 8) ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಆದೇಶಿಸಿದ್ದಾರೆ
****
ಈ ಲೇಖನ ಹಂಚಿಕೊಳ್ಳಿ