ಬ್ರೇಕಿಂಗ್
◆ಕನ್ನಡ ಅಭಿಮಾನಕ್ಕೆ ಬೆಳಗಾವಿ ಮಾದರಿ :  ಉಪ ಪೊಲೀಸ್‌  ಆಯುಕ್ತ ನಾರಾಯಣ  ಬರಮನಿ ◆ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕದ ಸೂಕ್ತ ಸ್ಪಂದನೆಗೆ ಆಗ್ರಹಿಸಿ ಸರ್ಕಾರಿ ಸೌಲಭ್ಯ ‌ನಿರಾಕರಿಸಿದ ಶಾಸಕ ಶರಣಗೌಡ ◆"ಪತ್ರಕರ್ತ ಜವಾಬ್ದಾರಿಯಿಂದ ನುಣಚಿಕೊಂಡರೆ ಸತ್ಯ ಸಾಯುತ್ತದೆ" ◆ಇಮಾಮ್ ಅವರಿಗೆ ಶನಿವಾರ ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ◆ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ ◆ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ ◆ಟನ್ ಕಬ್ಬಿಗೆ 3,600 ಕಾರ್ಖಾನೆಗಳ ನಿಗದಿಗೆ ನಿಟ್ಟುಸಿರು ಬಿಟ್ಟ ರೈತರು ಹೋರಾಟದ ಬಿಸಿ ಉಸಿರು ◆ಬೆಳಗಾವಿ ಪಾಲಿಕೆಯಿಂದ ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ ◆ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ ◆ಗಣಿ ಇಲಾಖೆ ಸಿಬ್ಬಂದಿಗೆ ಅನಧಿಕೃತ ಹಣದ ವಹಿವಾಟು- ಉಪ ಲೋಕಾಯುಕ್ತ ಬಿ. ವೀರಪ್ಪ ◆ಕನ್ನಡ ಅಭಿಮಾನಕ್ಕೆ ಬೆಳಗಾವಿ ಮಾದರಿ :  ಉಪ ಪೊಲೀಸ್‌  ಆಯುಕ್ತ ನಾರಾಯಣ  ಬರಮನಿ ◆ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕದ ಸೂಕ್ತ ಸ್ಪಂದನೆಗೆ ಆಗ್ರಹಿಸಿ ಸರ್ಕಾರಿ ಸೌಲಭ್ಯ ‌ನಿರಾಕರಿಸಿದ ಶಾಸಕ ಶರಣಗೌಡ ◆"ಪತ್ರಕರ್ತ ಜವಾಬ್ದಾರಿಯಿಂದ ನುಣಚಿಕೊಂಡರೆ ಸತ್ಯ ಸಾಯುತ್ತದೆ" ◆ಇಮಾಮ್ ಅವರಿಗೆ ಶನಿವಾರ ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ◆ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ ◆ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ ◆ಟನ್ ಕಬ್ಬಿಗೆ 3,600 ಕಾರ್ಖಾನೆಗಳ ನಿಗದಿಗೆ ನಿಟ್ಟುಸಿರು ಬಿಟ್ಟ ರೈತರು ಹೋರಾಟದ ಬಿಸಿ ಉಸಿರು ◆ಬೆಳಗಾವಿ ಪಾಲಿಕೆಯಿಂದ ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ ◆ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ ◆ಗಣಿ ಇಲಾಖೆ ಸಿಬ್ಬಂದಿಗೆ ಅನಧಿಕೃತ ಹಣದ ವಹಿವಾಟು- ಉಪ ಲೋಕಾಯುಕ್ತ ಬಿ. ವೀರಪ್ಪ
20 ನವೆಂ 2026
ಕನ್ನಡ ಅಭಿಮಾನಕ್ಕೆ ಬೆಳಗಾವಿ ಮಾದರಿ :  ಉಪ ಪೊಲೀಸ್‌  ಆಯುಕ್ತ ನಾರಾಯಣ  ಬರಮನಿ
🎭 ಸಾಂಸ್ಕೃತಿಕ
Dr. K N Doddmani · · 28 ವೀಕ್ಷಣೆಗಳು

ಕನ್ನಡ ಅಭಿಮಾನಕ್ಕೆ ಬೆಳಗಾವಿ ಮಾದರಿ :  ಉಪ ಪೊಲೀಸ್‌  ಆಯುಕ್ತ ನಾರಾಯಣ  ಬರಮನಿ

ಅಸ್ಮಿತೆ ವರದಿ, ನ.೧೯: ನಾವು ಕಾಲೇಜು ಓದುವ ದಿನಗಳಲ್ಲಿ  ಬೆಳಗಾವಿಯಲ್ಲಿ ಕನ್ನಡ ಉಸಿರುಗಟ್ಟಿತ್ತು. ಈಗ ಕಾಲ ಸಂಪೂರ್ಣವಾಗಿ ಬದಲಾಗಿದೆ. ಎಲ್ಲ ಭಾಷಿಕ ಬಾಂಧವರು ಕನ್ನಡ ಪ್ರೀತಿಸಿ ಅಭಿಮಾನಿಸುವ ಸನ್ನಿವೇಶ ನಿರ್ಮಾಣವಾಗಿದ್ದರಿಂದ ಇಲ್ಲಿ ಆಚರಿಸುವ ರಾಜೋತ್ಸವ ನಾಡಿನ ಉದ್ದಕ್ಕೂ ಸದ್ದು ಮಾಡಿ ಕನ್ನಡ ಅಭಿಮಾನಕ್ಕೆ ಮಾದರಿಯಾಗಿದೆ ಎಂದು ಬೆಳಗಾವಿ ನಗರ ಕಾನೂನು ಮತ್ತು ಸುವ್ಯವಸ್ಥೆ  ವಿಭಾಗದ ಉಪ ಪೊಲೀಸ್‌ ಆಯುಕ್ತ ನಾರಾಯಣ ಬರಮನಿ ತಿಳಿಸಿದ್ದಾರೆ.

ಬೆಳಗಾವಿ ಜೆಜಿಐ ಸಂಸ್ಥೆಯ ಜೈನ ಪದವಿ ಪೂರ್ವ ಮಹಾವಿದ್ಯಾಲಯ ಕನ್ನಡ ಬಳಗ ಇತ್ತೀಚೆಗೆ ನೆಹರು ನಗರ ಕನ್ನಡ ಭವನದಲ್ಲಿ ಅದ್ದೂರಿಯಾಗಿ ಆಯೋಜಿಸಿದ ಕನ್ನಡೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಳಗಾವಿಯಲ್ಲಿ ಇಂದು ಕನ್ನಡಮಯ ವಾತಾವರಣ ಆವರಿಸಿಕೊಂಡು ಎಲ್ಲರೂ  ಸಂಭ್ರಮಿಸುವ ಸನ್ನಿವೇಶ ನಿಮಾರ್ಣವಾಗಿದೆ. ಸರ್ವಜನಾಂಗದ ಶಾಂತಿಯ ತೋಟದೊಂದಿಗೆ ಕನ್ನಡ ಪ್ರೀತಿ  ನಿರ್ಮಾಣಗೊಳ್ಳಲು ಕನ್ನಡಪರ ಮನಸ್ಸುಗಳ ಹೋರಾಟ, ಕ್ರೀಯಾಶೀಲತೆ, ಸರಕಾರದ ಪ್ರೋತ್ಸಾಹ, ರಚನಾತ್ಮಕ ಕಾರ್ಯಕ್ರಮಗಳ ಶ್ರಮ ಅಡಗಿದೆ ಎಂದು ತಿಳಿಸಿದರು.

ಕನ್ನಡ ಉತ್ಸವ, ಉತ್ಸಾಹ  ಇನ್ನಷ್ಟು ಹೆಚ್ಚಾಗಲು ಸಂಘಟನಾತ್ಮಕ  ಸೃಜನಶೀಲ ಕೆಲಸಗಳು ನಿತ್ಯ ನಡೆಯುತ್ತಿರಬೇಕು. ವಿದ್ಯಾರ್ಥಿಗಳು, ಯುವಕರು, ಪ್ರಜ್ಞಾಶೀಲ ಮನಸ್ಸುಗಳು ಸಕ್ರಿಯ ಸಹಭಾಗೀತ್ವ ವಹಿಸಿಬೇಕು. ಯಾವುದೇ ಭಾಷೆ, ಸಂಸ್ಕೃತಿಯ ದ್ವೇಷ ಸರಿಯಲ್ಲ.  ಅನ್ಯ ಭಾಷೆಗಳ ಕಲಿಕೆಯ ಮಮಕಾರದ ಮನೋಭಾವದ ಜೊತೆಗೆ ನಾಡಿನ ಕರಳು ಭಾಷೆ ಕನ್ನಡದ ಬಗೆಗಿನ ಪ್ರೀತಿ ಅಭಿಮಾನ ಯಾವತ್ತೂ ಪ್ರಜ್ವಲಮಾನವಾಗಿರಬೇಕು ಎಂದು ಉಪ ಪೊಲೀಸ್‌ ಆಯುಕ್ತ ನಾರಾಯಣ  ಬರಮನಿ ತಿಳಿಸಿದ್ದಾರೆ.

ಪ್ರಾಚಾರ್ಯ ವಿಶ್ವನಾಥ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಉಪನ್ಯಾಸಕ ಡಾ. ಕೆ.ಎನ್.‌ ದೊಡ್ಡಮನಿ ಸ್ವಾಗತಿಸಿ, ಪರಿಚಯಿಸಿದರು. ಚಿನ್ಮಯ ಕೇಳಕರ ಹಾಗೂ ಸ್ಪೂರ್ತಿ ಕುಂಬಾರ ಕಾರ್ಯಕ್ರಮ ನಿರೂಪಿಸಿದರು. ಸಮಿಧಾ ಪೈ ವಂದಿಸಿದರು. ನಂತರ ಪ್ರಶಸ್ತಿ ಪ್ರದಾನ ಹಾಗೂ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ ಸಾಂಸ್ಕೃತಿಕ

ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡಿನ ಸಾಂಸ್ಕೃತಿಕ ಅಸ್ಮಿತೆಯ ದೊಡ್ಡ ಪರಂಪರೆಯನ್ನು ಹೊಂದಿದ್ದು, ಅದು ಕನ್ನಡಿಗರನ್ನು, ಕನ್ನಡ ಮನಸ್ಸುಗಳನ್ನು ಒಗ್ಗೂಡಿಸುವ ನಾಡಿನ ಏಕೈಕ ಸಂಸ್ಥೆಯಾಗಿದೆ

Admin