ಬ್ರೇಕಿಂಗ್
◆"ಪತ್ರಕರ್ತ ಜವಾಬ್ದಾರಿಯಿಂದ ನುಣಚಿಕೊಂಡರೆ ಸತ್ಯ ಸಾಯುತ್ತದೆ" ◆ಇಮಾಮ್ ಅವರಿಗೆ ಶನಿವಾರ ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ◆ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ ◆ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ ◆ಟನ್ ಕಬ್ಬಿಗೆ 3,600 ಕಾರ್ಖಾನೆಗಳ ನಿಗದಿಗೆ ನಿಟ್ಟುಸಿರು ಬಿಟ್ಟ ರೈತರು ಹೋರಾಟದ ಬಿಸಿ ಉಸಿರು ◆ಬೆಳಗಾವಿ ಪಾಲಿಕೆಯಿಂದ ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ ◆ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ ◆ಗಣಿ ಇಲಾಖೆ ಸಿಬ್ಬಂದಿಗೆ ಅನಧಿಕೃತ ಹಣದ ವಹಿವಾಟು- ಉಪ ಲೋಕಾಯುಕ್ತ ಬಿ. ವೀರಪ್ಪ ◆ಮರು ನೋಂದಣಿ ಮಾಡದ ಶಾಲಾ ವಾಹನ, ಅನಧಿಕೃತ ವಾಹನಗಳ ಮುಲಾಜಿಲ್ಲದೆ ಜಪ್ತಿ ಮಾಡಿ- ಉಪ ಲೋಕಾಯುಕ್ತರ ಕಡಕ್ ಸೂಚನೆ ◆ಮುಚ್ಚಂಡಿ ಗ್ರಾಮ ಪಂಚಾಯತಿ: ಕರ್ತವ್ಯ ಲೋಪ, ಅನುದಾನ ದುರ್ಬಳಕೆ - ಮುಲಾಜಿಲ್ಲದೆ ಕ್ರಮ - ಉಪ ಲೋಕಾಯುಕ್ತರ ಎಚ್ಚರಿಕೆ ◆"ಪತ್ರಕರ್ತ ಜವಾಬ್ದಾರಿಯಿಂದ ನುಣಚಿಕೊಂಡರೆ ಸತ್ಯ ಸಾಯುತ್ತದೆ" ◆ಇಮಾಮ್ ಅವರಿಗೆ ಶನಿವಾರ ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ◆ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ ◆ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ ◆ಟನ್ ಕಬ್ಬಿಗೆ 3,600 ಕಾರ್ಖಾನೆಗಳ ನಿಗದಿಗೆ ನಿಟ್ಟುಸಿರು ಬಿಟ್ಟ ರೈತರು ಹೋರಾಟದ ಬಿಸಿ ಉಸಿರು ◆ಬೆಳಗಾವಿ ಪಾಲಿಕೆಯಿಂದ ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ ◆ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ ◆ಗಣಿ ಇಲಾಖೆ ಸಿಬ್ಬಂದಿಗೆ ಅನಧಿಕೃತ ಹಣದ ವಹಿವಾಟು- ಉಪ ಲೋಕಾಯುಕ್ತ ಬಿ. ವೀರಪ್ಪ ◆ಮರು ನೋಂದಣಿ ಮಾಡದ ಶಾಲಾ ವಾಹನ, ಅನಧಿಕೃತ ವಾಹನಗಳ ಮುಲಾಜಿಲ್ಲದೆ ಜಪ್ತಿ ಮಾಡಿ- ಉಪ ಲೋಕಾಯುಕ್ತರ ಕಡಕ್ ಸೂಚನೆ ◆ಮುಚ್ಚಂಡಿ ಗ್ರಾಮ ಪಂಚಾಯತಿ: ಕರ್ತವ್ಯ ಲೋಪ, ಅನುದಾನ ದುರ್ಬಳಕೆ - ಮುಲಾಜಿಲ್ಲದೆ ಕ್ರಮ - ಉಪ ಲೋಕಾಯುಕ್ತರ ಎಚ್ಚರಿಕೆ
18 ನವೆಂ 2026
ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ
🎭 ಸಾಂಸ್ಕೃತಿಕ
Dr. K N Doddmani · · 112 ವೀಕ್ಷಣೆಗಳು

ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡಿನ ಸಾಂಸ್ಕೃತಿಕ ಅಸ್ಮಿತೆಯ ದೊಡ್ಡ ಪರಂಪರೆಯನ್ನು ಹೊಂದಿದ್ದು, ಅದು ಕನ್ನಡಿಗರನ್ನು, ಕನ್ನಡ ಮನಸ್ಸುಗಳನ್ನು ಒಗ್ಗೂಡಿಸುವ ನಾಡಿನ ಏಕೈಕ ಸಂಸ್ಥೆಯಾಗಿದೆ

ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ

ಅಸ್ಮಿತೆ ವರದಿ, ನ.೦೫: 1915ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡಿನ ಸಾಂಸ್ಕೃತಿಕ ಅಸ್ಮಿತೆಯ ದೊಡ್ಡ ಪರಂಪರೆಯನ್ನು ಹೊಂದಿದ್ದು, ಅದು ಕನ್ನಡಿಗರನ್ನು, ಕನ್ನಡ ಮನಸ್ಸುಗಳನ್ನು ಒಗ್ಗೂಡಿಸುವ ನಾಡಿನ ಏಕೈಕ ಸಂಸ್ಥೆಯಾಗಿದೆ. ನಾಡಿನ ಸಾಹಿತ್ಯ- ಸಾಂಸ್ಕೃತಿಕ  ಭವ್ಯ ಪರಂಪರೆಯ ಈ ಸಂಸ್ಥೆಯನ್ನು ಕಳೆದುಕೊಂಡರೆ ಮತ್ತೊಂದು ಇಂಥ ಸಂಸ್ಥೆಯನ್ನು ಕಟ್ಟಲು ಸಾಧ್ಯವಿಲ್ಲ ಎಂದು ಸಾಹಿತಿ, ಪತ್ರಕರ್ತ ಹಾಗೂ ನಾಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ತಿಳಿಸಿದ್ದಾರೆ.

ಪರಿಷತ್ತಿನ ಚುನಾವಣೆಯ ಹಿನ್ನಲೆಯಲ್ಲಿ ಕೇಂದ್ರ ಸ್ಥಾನದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ  ಸ್ಪರ್ಧಿಸುವ ಆಕಾಂಕ್ಷಿಯಾಗಿ ರಾಜ್ಯ ಪ್ರವಾಸ ಕೈಗೊಂಡಿರುವ ಅವರು ಮಂಗಳವಾರ ಬೆಳಗಾವಿಯಲ್ಲಿ ಸಾಹಿತಿ, ಸಮ ಮನಸ್ಕರೊಂದಿಗೆ ಸಮಾಲೋಚನೆ ನಡೆಸಿದ ಅವರು, ಈ ಹಿಂದಿನ ಅಧ್ಯಕ್ಷರು ಪರಿಷತ್ತಿನ ಬೈಲನ್‌ ಪಾವಿತ್ರ್ಯತೆಯನ್ನು ಹಾಳುಗೆಡವಿ ಸರ್ವಾಧಿಕಾರ ಮೆರೆದು ಅದರ ಘನತೆ ಗೌರವಕ್ಕೆ ಚ್ಯತಿ ತಂದಿದ್ದಾರೆ. ಅವರ ಮೋಸ, ವಂಚನೆ, ಭ್ರಷ್ಟತೆ, ಮನಬಂದಂತಹ ವರ್ತೆಯಯಿಂದ ಪರಿಷತ್ತಿನ ಸಾಂಸ್ಕೃತಿಕ ಪರಂಪರೆಗೆ ಧಕ್ಕೆ ತಂದಿದ್ದಾರೆ. ಅವರ ಮೇಲೆ 17 ವಿವಿಧ ಆರೋಪಗಳಿದ್ದು 16 ಆರೋಪಗಳು ಸಾಬೀತಾಗಿದ್ದು, ಇನ್ನೊಂದು ವಿಚಾರಣೆ ಮುಂದುವರೆದಿದೆ. ಈ ಭ್ರಷ್ಟ ಆಡಳಿತ ನಿರ್ವಹಣೆಯಿಂದಾಗಿ ಆತನನ್ನು ಸರ್ಕಾರ ಅಮಾನತ್ತುಗೊಳಿಸಿ ಪರಿಷತ್ತಿಗೆ ಆಡಳಿತಾಧಿಕಾರಿಯನ್ನು ನೇಮಿಸಿದೆ. ಈತನ ಅಕ್ರಮ ಚಟುವಟಿಕೆಗಳನ್ನು ಬಯಲಿಗೆಳೆದು ಸಂಸ್ಥೆಯ ಘನತೆ ಉಳಿಸಿಕೊಳ್ಳಲು ನಿರಂತರ ಹೋರಾಟ ನಡೆಸುತ್ತ ಬಂದಿದ್ದೇವೆ. ಪ್ರಸ್ತುತ ಪರಿಷತ್ತಿಗೆ ಚುನಾವಣೆಗೆ ಬಂದಿದೆ. ಸಂಸ್ಥೆಯ ಘಟನೆ ಗೌರವ, ಸಾಂಸ್ಕೃತಿಕ ಪರಂಪರೆಯನ್ನು ಪುನರ್‌ ಸ್ಥಾಪಿಸಿ ಉಪಯುಕ್ತ ಚಟುವಟಿಕೆಗಳ ಮೂಲಕ ಕನ್ನಡಮಯಗೊಳಿಸುವ ಉದ್ದೇಶವಿಟ್ಟುಕೊಂಡು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಉದ್ದೇಶಿಸಿದ್ದೇನೆ. ನಾಡಿನ ಹಲವಾರು ಸಾಹಿತಿಗಳು, ಕನ್ನಡಪರ ಮನಸ್ಸುಗಳು ಸ್ಪರ್ಧಿಸುವಂತೆ ಒಮ್ಮತದಿಂದ ಅಭ್ಯರ್ಥಿ ಸ್ಥಾನಕ್ಕೆ ಸೂಚಿಸಿದ್ದಾರೆ. ಈ ಕಾರಣಕ್ಕೆ ನಾಡಿನ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಮನವರಿಕೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದರು.

ಸ್ಥಗಿತಗೊಂಡಿರುವ ಕನ್ನಡ ನಿಘಂಟು ಯೋಜನೆಗೆ ಚಾಲನೆ ನೀಡುವ,  ಕನ್ನಡ ನುಡಿ ಪತ್ರಿಕೆಗೆ ಮರು ಜೀವ ನೀಡುವ, ಹಿಂದಿನ ಅಧ್ಯಕ್ಷರ ಉಪಯುಕ್ತ ಚಟುವಟಿಕೆಗಳನ್ನು ಮುಂದುವರೆಸುವ ಕುವೆಂಪು, ಅಕ್ಕಮಹಾದೇವಿ ಸಭಾಂಗಣಗಳ ಬಾಡಿಗೆ ಕಡಿಮೆ ಮಾಡಿ ಸಾಹಿತ್ಯ- ಸಾಂಸ್ಕೃತಿಕ ಚಟುವಟಿಕೆಗಳನ್ನು ಹೆಚ್ಚಿಸುವ, ಗ್ರಂಥಾಲಯ ಆಧುನಿಕಗೊಳಿಸುವ, ಸಮ್ಮೇಳನ ಅಧ್ಯಕ್ಷರನ್ನು ಉತ್ಸವ ಮೂರ್ತಿಯನ್ನಾಗಿಸದೆ ಅವರ ಕ್ರಿಯಾಶೀಲತೆಯನ್ನು ಬಳಸಿಕೊಳ್ಳುವ, ನಾಡಪರ, ರೈತಪರ, ದಲಿತಪರ ಚಳವಳಿಗಳ ವಾರ್ಷಿಕ ಸಮಾವೇಶ ಏರ್ಪಡಿಸಿ ಐಕ್ಯತೆ ತಂದುಕೊಳ್ಳುವ, ಗ್ರಾಮೀಣ ನಗರ ಪ್ರದೇಶದ ಶಾಲೆಗಳನ್ನು ಉಳಿಸಿ ಅಭಿವೃದ್ಧಿಪಡಿಸಲು ಸರ್ಕಾರದ ಮೇಲೆ ಒತ್ತಡ ಹೇರವು ಮೊದಲಾದ ಜನಪರ, ಕನ್ನಡಪರ ರಚನಾತ್ಮಕ ಯೋಜನೆ ಹಾಗೂ ಚಟುವಟಿಕೆಗಳನ್ನು ಕಾರ್ಯಗತಗೊಳಿಸುವ ಮಹದ್ದೇಶ ಹೊಂದಿರುವುದಾಗಿ ಜಾನಗೆರೆ ವೆಂಕಟರಾಮಯ್ಯ ತಿಳಿಸಿದರು.

ಬೆಳಗಾವಿ ಅವಿಭಾಜ್ಯ ಅಂಗವೆಂದು ಪರಿಷತ್ತಿನಲ್ಲಿ ಅಂಗೀಕರಾರ:

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ ಜಾಣಗೆರೆ ಅವರು, ಗಡಿ ಜಿಲ್ಲೆಗಳಿಗೆ ಪರಿಷತ್ತಿನೊಂದಿಗೆ ವಿಶೇಷ ಪ್ರಾತಿನಿಧಿತ್ವ ನೀಡಲಾಗುವುದು ಎಂದರು.

ಚಿಂತರಕ ಸಲಹಾ ಮಂಡಳಿ ರಚನೆ:

ಪರಿಷತ್ತಿನ  ಕನ್ನಡಪರ ರಚನಾತ್ಮಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುನ್ನಡೆಸಲು ಕಾಲಕಾಲಕ್ಕೆ ಅನುಭವಸ್ಥರ ಮಾರ್ಗದರ್ಶನ ಬೇಕಾಗುತ್ತದೆ. ಇದಕ್ಕಾಗಿ ಹಿರಿಯ ಮುತ್ಸದ್ಧಿಗಳ, ಚಿಂತಕರ ಮಾರ್ಗದರ್ಶಕ ಗೌರವ ಸಲಹಾ ಮಂಡಳಿ ರಚಿಸುವ ಉದ್ದೇಶವಿದೆ ಎಂದು ಜಾಣಗೆರೆ ವೆಂಟರಾಮಯ್ಯ ತಿಳಿಸಿದರು.

ಕಸಾಪಾ ಕನ್ನಡಿಗರ ಅಧಿಕಾರ ಕೇಂದ್ರವಾಗಬೇಕು -ಸಿದ್ದರಾಮಯ್ಯ :

ಹಿರಿಯ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ,”ಕನ್ನಡ ಸಾಹಿತ್ಯ ಪರಿಷತ್ತು ಕನ್ನಡತ್ವ ಪ್ರಜ್ಞೆಯಾಗಿ ಕನ್ನಡ ಬದುಕು ನಿರ್ಮಾಣಕ್ಕೆ ಸರ್ಕಾರದ ಕಿವಿಹಿಂಡುವ ಕನ್ನಡಿಗರ ಅಧಿಕಾರ ಕೇಂದ್ರವಾಗಬೇಕು ಹೊರತು ರಾಜಕೀಯ ಕೇಂದ್ರವಾಗಬಾರದು. ಸಂಸ್ಥೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಾದರೆ  ಹೋರಾಟಗಾರರು, ಕನ್ನಡದ ಪ್ರಜ್ಞಾಶೀಲರೂ ಆದ ಜಾಣಗೆರೆ ವೆಂಟರಾಮಯ್ಯ ಅವರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವುದು ಅಗತ್ಯವಿದೆ. ಕನ್ನಡ ಮನಸ್ಸುಗಳು ಇವರ ಬೆಂಬಲಕ್ಕೆ ನಿಲ್ಲಬೇಕೆಂದು” ಕರೆ ನೀಡಿದರು.

ಸಾಹಿತಿ, ಪತ್ರಕರ್ತ ಆರ್.ಜಿ. ಹಳ್ಳಿ ನಾಗರಾಜ ಅವರು, ಜಾಣಗೆರೆ ವೆಂಕಟರಾಮಯ್ಯನವರ ಕ್ರೀಯಾಶೀಲತೆ, ಸಾಹಿತ್ಯಿಕ ಸಾಧನೆ, ಹೋರಾಟದ ಮಾರ್ಗ ಹಾಗೂ ಅವರ ಬದ್ಧತೆ, ನಿಲುವುಗಳ ಬಗ್ಗೆ ಪರಿಚಯಿಸಿದರು.  ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಪ್ರಸ್ತಾವಿಕ ಮಾತನಾಡಿ, “ ಕನ್ನಡಪರ ಸಂಘಟನೆಗಳು ಜಾನಗೆರೆ ವೆಂಕಟರಾಮಯ್ಯನವರ ಪರವಾಗಿ ಕೆಲಸ ಮಾಡುತ್ತವೆ ಏಂದು ಆಶ್ವಾಸನೆ ನೀಡಿದರು. ಬಸವರಾಜ ಕಟ್ಟಿಮನಿ ಟ್ರಸ್ಟ್‌ ನ ಅಧ್ಯಕ್ಷ ಡಾ. ಯಲ್ಲಪ್ಪ ಹಿಮ್ಮಡಿ ಸ್ವಾಗತಿಸಿದರು.

ಸಭೆಯಲ್ಲಿ ನಿವೃತ್ತ ಪ್ರಾಚಾರ್ಯ ಡಾ. ಎಚ್.‌ ಐ . ತಿಮ್ಮಾಪುರ, ಕಿತ್ತೂರು ಕರ್ನಾಟಕ ಸೇನೆಯ ಅಧ್ಯಕ್ಷ ಮಹಾದೇವ ತಳವಾರ, ಪ್ರಾಧ್ಯಾಪಕಿ ನಿರ್ಮಲಾ ಬಟ್ಟಲ, ಡಾ. ಮೈತ್ರಿನಿ ಗದಗೆಪ್ಪಗೌಡರ ಸೇರಿದಂತೆ ಅನೇಕ ಬರಹಗಾರರು, ಕನ್ನಡಪರ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ