ಬ್ರೇಕಿಂಗ್
◆"ಪತ್ರಕರ್ತ ಜವಾಬ್ದಾರಿಯಿಂದ ನುಣಚಿಕೊಂಡರೆ ಸತ್ಯ ಸಾಯುತ್ತದೆ" ◆ಇಮಾಮ್ ಅವರಿಗೆ ಶನಿವಾರ ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ◆ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ ◆ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ ◆ಟನ್ ಕಬ್ಬಿಗೆ 3,600 ಕಾರ್ಖಾನೆಗಳ ನಿಗದಿಗೆ ನಿಟ್ಟುಸಿರು ಬಿಟ್ಟ ರೈತರು ಹೋರಾಟದ ಬಿಸಿ ಉಸಿರು ◆ಬೆಳಗಾವಿ ಪಾಲಿಕೆಯಿಂದ ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ ◆ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ ◆ಗಣಿ ಇಲಾಖೆ ಸಿಬ್ಬಂದಿಗೆ ಅನಧಿಕೃತ ಹಣದ ವಹಿವಾಟು- ಉಪ ಲೋಕಾಯುಕ್ತ ಬಿ. ವೀರಪ್ಪ ◆ಮರು ನೋಂದಣಿ ಮಾಡದ ಶಾಲಾ ವಾಹನ, ಅನಧಿಕೃತ ವಾಹನಗಳ ಮುಲಾಜಿಲ್ಲದೆ ಜಪ್ತಿ ಮಾಡಿ- ಉಪ ಲೋಕಾಯುಕ್ತರ ಕಡಕ್ ಸೂಚನೆ ◆ಮುಚ್ಚಂಡಿ ಗ್ರಾಮ ಪಂಚಾಯತಿ: ಕರ್ತವ್ಯ ಲೋಪ, ಅನುದಾನ ದುರ್ಬಳಕೆ - ಮುಲಾಜಿಲ್ಲದೆ ಕ್ರಮ - ಉಪ ಲೋಕಾಯುಕ್ತರ ಎಚ್ಚರಿಕೆ ◆"ಪತ್ರಕರ್ತ ಜವಾಬ್ದಾರಿಯಿಂದ ನುಣಚಿಕೊಂಡರೆ ಸತ್ಯ ಸಾಯುತ್ತದೆ" ◆ಇಮಾಮ್ ಅವರಿಗೆ ಶನಿವಾರ ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ◆ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ ◆ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ ◆ಟನ್ ಕಬ್ಬಿಗೆ 3,600 ಕಾರ್ಖಾನೆಗಳ ನಿಗದಿಗೆ ನಿಟ್ಟುಸಿರು ಬಿಟ್ಟ ರೈತರು ಹೋರಾಟದ ಬಿಸಿ ಉಸಿರು ◆ಬೆಳಗಾವಿ ಪಾಲಿಕೆಯಿಂದ ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ ◆ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ ◆ಗಣಿ ಇಲಾಖೆ ಸಿಬ್ಬಂದಿಗೆ ಅನಧಿಕೃತ ಹಣದ ವಹಿವಾಟು- ಉಪ ಲೋಕಾಯುಕ್ತ ಬಿ. ವೀರಪ್ಪ ◆ಮರು ನೋಂದಣಿ ಮಾಡದ ಶಾಲಾ ವಾಹನ, ಅನಧಿಕೃತ ವಾಹನಗಳ ಮುಲಾಜಿಲ್ಲದೆ ಜಪ್ತಿ ಮಾಡಿ- ಉಪ ಲೋಕಾಯುಕ್ತರ ಕಡಕ್ ಸೂಚನೆ ◆ಮುಚ್ಚಂಡಿ ಗ್ರಾಮ ಪಂಚಾಯತಿ: ಕರ್ತವ್ಯ ಲೋಪ, ಅನುದಾನ ದುರ್ಬಳಕೆ - ಮುಲಾಜಿಲ್ಲದೆ ಕ್ರಮ - ಉಪ ಲೋಕಾಯುಕ್ತರ ಎಚ್ಚರಿಕೆ
18 ನವೆಂ 2026
ಏಷ್ಯನ್ ಪ್ಯಾರಾ ಗೇಮ್ಸ್ ಕಂಚಿನ ಪದಕ ವಿಜೇತ ಸ್ವಾತಿಕ್ ಪಾಟೀಲಗೆ ಬೆಳಗಾವಿಯಲ್ಲಿ ಅದ್ಧೂರಿ ಸ್ವಾಗತ  ಸಾಂಬ್ರಾ
🎭 ಸಾಂಸ್ಕೃತಿಕ
Dr. K N Doddmani · · 33 ವೀಕ್ಷಣೆಗಳು

ಏಷ್ಯನ್ ಪ್ಯಾರಾ ಗೇಮ್ಸ್ ಕಂಚಿನ ಪದಕ ವಿಜೇತ ಸ್ವಾತಿಕ್ ಪಾಟೀಲಗೆ ಬೆಳಗಾವಿಯಲ್ಲಿ ಅದ್ಧೂರಿ ಸ್ವಾಗತ ಸಾಂಬ್ರಾ

ವಿಮಾನ ನಿಲ್ದಾಣದಲ್ಲಿ ಸನ್ಮಾನ; ತೆರೆದ ವಾಹನದಲ್ಲಿ ಮೆರವಣಿಗೆ

ಅಸ್ಮಿತೆ ವರದಿ, ಅ.29: ಜಪಾನ್‌ನಲ್ಲಿ ನಡೆದ 2026ರ ಏಷ್ಯನ್ ಪ್ಯಾರಾ ಗೇಮ್ಸ್‌ನ ಪುರುಷರ 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್ SB9 ಈಜು ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ಕಂಚಿನ ಪದಕ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದ ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಹೆಮ್ಮೆಯ ಕ್ರೀಡಾಪಟು ಸ್ವಾತಿಕ್ ಪಾಟೀಲ ಅವರಿಗೆ ಬುಧವಾರ ಬೆಳಗಾವಿಯಲ್ಲಿ ಅದ್ಧೂರಿ ಸ್ವಾಗತ ನೀಡಿ ಗೌರವಿಸಲಾಯಿತು.

ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ತಮ್ಮ ಅಸಾಧಾರಣ ಪ್ರತಿಭೆ, ಕಠಿಣ ಪರಿಶ್ರಮ, ಛಲ ಹಾಗೂ ಆತ್ಮವಿಶ್ವಾಸದ ಮೂಲಕ ಪದಕ ಗೆದ್ದು ಭಾರತದ ತ್ರಿವರ್ಣ ಧ್ವಜವನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದ ಸ್ವಾತಿಕ್ ಪಾಟೀಲ ಅವರು ಇಂದು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ, ಅಭಿನಂದನೆ ಸಲ್ಲಿಸಲಾಯಿತು.

ಸಾಧಕನಿಗೆ ಆತ್ಮೀಯ ಸ್ವಾಗತ:

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷ ಬಸವರಾಜ ಶೇಗಾಂವಿ, ಕಾಂಗ್ರೆಸ್ ಮುಖಂಡ ನಾಗೇಶ್ ದೇಸಾಯಿ ಸೇರಿದಂತೆ ಮುತಗಾ ಗ್ರಾಮದ ಮುಖಂಡರು, ಊರಿನ ಹಿರಿಯರು, ಯುವಕರು ಹಾಗೂ ಅಪಾರ ಸಂಖ್ಯೆಯ ಮಹಿಳೆಯರು ಭಾಗವಹಿಸಿದ್ದರು.

ತಮ್ಮೂರಿನ ಪ್ರತಿಭಾವಂತ ಕ್ರೀಡಾಪಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ತವರಿಗೆ ಮರಳಿದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಸಂಭ್ರಮ ಮನೆಮಾಡಿತ್ತು. ನೆಚ್ಚಿನ ಕ್ರೀಡಾಪಟುವನ್ನು ಕಂಡ ಜನರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದರು. ಹಿರಿಯರು ಸ್ವಾತಿಕ್ ಅವರನ್ನು ಆಶೀರ್ವದಿಸಿದರೆ, ಯುವಕರು ಹಾಗೂ ಮಹಿಳೆಯರು ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ಕ್ರೀಡಾ ಬದುಕಿಗೆ ಶುಭ ಹಾರೈಸಿದರು.

ತೆರೆದ ವಾಹನದಲ್ಲಿ ಮೆರವಣಿಗೆ :

ವಿಮಾನ ನಿಲ್ದಾಣದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಸ್ವಾತಿಕ್ ಪಾಟೀಲ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಕರೆದೊಯ್ಯಲಾಯಿತು. ಮೆರವಣಿಗೆಯಲ್ಲಿ ಅಭಿಮಾನಿಗಳು, ಗ್ರಾಮಸ್ಥರು ಹಾಗೂ ಯುವಕರು ಪಾಲ್ಗೊಂಡು ತಮ್ಮೂರಿನ ಕ್ರೀಡಾ ಸಾಧಕನಿಗೆ ಗೌರವ ಸಮರ್ಪಿಸಿದರು. ಸ್ವಾತಿಕ್ ಅವರ ಸಾಧನೆಯನ್ನು ಸಂಭ್ರಮಿಸುವ ಮೂಲಕ ಮುತಗಾ ಗ್ರಾಮದ ಜನರು ತಮ್ಮ ಪ್ರೀತಿ, ಅಭಿಮಾನ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸಿದರು.

ನಾಡಿನ ಯುವಜನತೆಗೆ ಸ್ಫೂರ್ತಿಯಾದ ಸಾಧನೆ:

ಸ್ವಾತಿಕ್ ಪಾಟೀಲ ಅವರ ಈ ಸಾಧನೆ ಬೆಳಗಾವಿ ಜಿಲ್ಲೆ ಮಾತ್ರವಲ್ಲದೆ ಇಡೀ ಕರ್ನಾಟಕಕ್ಕೆ ಹೆಮ್ಮೆ ತರುವಂತಹದ್ದಾಗಿದೆ. ಕ್ರೀಡೆಯಲ್ಲಿ ಸಾಧನೆ ಮಾಡಲು ಪ್ರತಿಭೆಯ ಜತೆಗೆ ನಿರಂತರ ಪರಿಶ್ರಮ, ಶಿಸ್ತು, ಆತ್ಮವಿಶ್ವಾಸ ಹಾಗೂ ದೃಢ ಸಂಕಲ್ಪ ಎಷ್ಟು ಮುಖ್ಯ ಎಂಬುದಕ್ಕೆ ಸ್ವಾತಿಕ್ ಅವರ ಸಾಧನೆ ಸ್ಫೂರ್ತಿದಾಯಕವಾಗಿದೆ.

ವಿಶೇಷ ಚೇತನ ಕ್ರೀಡಾಪಟುಗಳ ಸಾಮರ್ಥ್ಯ, ಪ್ರತಿಭೆ ಹಾಗೂ ಸಾಧನೆಯ ಶಕ್ತಿಯನ್ನು ಜಗತ್ತಿಗೆ ಪರಿಚಯಿಸುವಲ್ಲಿ ಪ್ಯಾರಾ ಕ್ರೀಡೆಗಳು ಮಹತ್ವದ ಪಾತ್ರ ವಹಿಸುತ್ತಿದ್ದು, ಸ್ವಾತಿಕ್ ಅವರಂತಹ ಕ್ರೀಡಾಪಟುಗಳ ಸಾಧನೆ ಅನೇಕ ಯುವಕರಿಗೆ ಹೊಸ ಭರವಸೆ ಮತ್ತು ಪ್ರೇರಣೆ ನೀಡಲಿದೆ.

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದು ತವರಿಗೆ ಹೆಮ್ಮೆ ತಂದಿರುವ ಸ್ವಾತಿಕ್ ಪಾಟೀಲ ಅವರು ಮುಂಬರುವ ದಿನಗಳಲ್ಲಿಯೂ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲಿ, ದೇಶದ ಪರವಾಗಿ ಮತ್ತಷ್ಟು ಪದಕಗಳನ್ನು ಗೆದ್ದು ಭಾರತದ ಕೀರ್ತಿಯನ್ನು ಹೆಚ್ಚಿಸಲಿ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸಲಾಯಿತು.

**"

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ ಸಾಂಸ್ಕೃತಿಕ

ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡಿನ ಸಾಂಸ್ಕೃತಿಕ ಅಸ್ಮಿತೆಯ ದೊಡ್ಡ ಪರಂಪರೆಯನ್ನು ಹೊಂದಿದ್ದು, ಅದು ಕನ್ನಡಿಗರನ್ನು, ಕನ್ನಡ ಮನಸ್ಸುಗಳನ್ನು ಒಗ್ಗೂಡಿಸುವ ನಾಡಿನ ಏಕೈಕ ಸಂಸ್ಥೆಯಾಗಿದೆ

Admin