ಬ್ರೇಕಿಂಗ್
ಶರಣರ ಅನುಭವ ಮಂಟಪಕ್ಕೆ ಭೆಟ್ಟಿ ನೀಡಿದ AI ರೇಖಾ ಚಿತ್ರಗಳನ್ನು ಹಂಚಿಕೊಂಡ ಮುಖ್ಯಮಂತ್ರಿ ಅಂಗನವಾಡಿಯಿಂದ ಪಿಯುಸಿ ವರೆಗೂ ನಾಳೆ ರಜೆ ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ : 397  ಕಾಳಜಿ ಕೇಂದ್ರಗಳ ಸೌಲಭ್ಯ ಪರಿಶೀಲನೆಗೆ ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಸೂಚನೆ ತುಂಬಿದ ಜೀವಜಲ : ಹಸಿರಾದ ಇಳೆ, ಖುಷಿಗೊಂಡ ರೈತ ಸರ್ಕಾರದ ಸೂಚನೆ ಬೆಳಗಾವಿ ಪಾಲಿಕೆ ಪಾಲಿಸದಿದ್ದರೆ ಸೂಪರ್ ಸೀಡ್ ಮಾಡಬಹುದು - ಸಚಿವರಿಗೆ ಕನ್ನಡ ಸಂಘಟನೆಗಳ ಮನವರಿಕೆ ವಿಟಿಯು ಜಾಗತಿಕ ಮಟ್ಟದ ಖ್ಯಾತಿಗೆ ಗುಣಮಟ್ಟದ ಶಿಕ್ಷಣ ಅಳವಡಿಕೆ ಅಗತ್ಯ : ಕುಲಪತಿ ವಿದ್ಯಾಶಂಕರ್ ಸಲಹೆ ಮಳೆಯಾಗುತ್ತಿದ್ದು ಸದ್ಯ ಆತಂಕ ನಿವಾರಣೆ : ಸಚಿವ ಸತೀಶ ಜಾರಕಿಹೊಳಿ ಮೇಘಮೈತ್ರಿ ಸಾಹಿತ್ಯ ಸಂಭ್ರಮ: ಸಂಘ - ಸಂಸ್ಥೆಗಳ ಪ್ರಶಸ್ತಿ ಪ್ರದಾನ ಪರಂಪರೆ  ಗೌರವಯುತ ಕಾರ್ಯ - ಎಚ್.ಐ. ತಿಮ್ಮಾಪುರ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ ಫುಟ್ ಪಾತ್ ಪಾದಚಾರಿಗಳ ಹಕ್ಕು; ಹಾದಿಮ್ಯಾಲಿನವರ ಬದುಕಿನ ಹಕ್ಕಿನ ದಿಕ್ಕು? ಶರಣರ ಅನುಭವ ಮಂಟಪಕ್ಕೆ ಭೆಟ್ಟಿ ನೀಡಿದ AI ರೇಖಾ ಚಿತ್ರಗಳನ್ನು ಹಂಚಿಕೊಂಡ ಮುಖ್ಯಮಂತ್ರಿ ಅಂಗನವಾಡಿಯಿಂದ ಪಿಯುಸಿ ವರೆಗೂ ನಾಳೆ ರಜೆ ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ : 397  ಕಾಳಜಿ ಕೇಂದ್ರಗಳ ಸೌಲಭ್ಯ ಪರಿಶೀಲನೆಗೆ ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಸೂಚನೆ ತುಂಬಿದ ಜೀವಜಲ : ಹಸಿರಾದ ಇಳೆ, ಖುಷಿಗೊಂಡ ರೈತ ಸರ್ಕಾರದ ಸೂಚನೆ ಬೆಳಗಾವಿ ಪಾಲಿಕೆ ಪಾಲಿಸದಿದ್ದರೆ ಸೂಪರ್ ಸೀಡ್ ಮಾಡಬಹುದು - ಸಚಿವರಿಗೆ ಕನ್ನಡ ಸಂಘಟನೆಗಳ ಮನವರಿಕೆ ವಿಟಿಯು ಜಾಗತಿಕ ಮಟ್ಟದ ಖ್ಯಾತಿಗೆ ಗುಣಮಟ್ಟದ ಶಿಕ್ಷಣ ಅಳವಡಿಕೆ ಅಗತ್ಯ : ಕುಲಪತಿ ವಿದ್ಯಾಶಂಕರ್ ಸಲಹೆ ಮಳೆಯಾಗುತ್ತಿದ್ದು ಸದ್ಯ ಆತಂಕ ನಿವಾರಣೆ : ಸಚಿವ ಸತೀಶ ಜಾರಕಿಹೊಳಿ ಮೇಘಮೈತ್ರಿ ಸಾಹಿತ್ಯ ಸಂಭ್ರಮ: ಸಂಘ - ಸಂಸ್ಥೆಗಳ ಪ್ರಶಸ್ತಿ ಪ್ರದಾನ ಪರಂಪರೆ  ಗೌರವಯುತ ಕಾರ್ಯ - ಎಚ್.ಐ. ತಿಮ್ಮಾಪುರ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ ಫುಟ್ ಪಾತ್ ಪಾದಚಾರಿಗಳ ಹಕ್ಕು; ಹಾದಿಮ್ಯಾಲಿನವರ ಬದುಕಿನ ಹಕ್ಕಿನ ದಿಕ್ಕು?
08 ಜುಲೈ 2026
ಕನ್ನಡಕ್ಕೆ ಮೊದಲ ಆದ್ಯತೆ ನೀಡಲು ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬಿಳಿಮಲೆ ಆಗ್ರಹ
📄 ಕರ್ನಾಟಕ ಸುದ್ದಿ
Dr. K N Doddmani · · 23 ವೀಕ್ಷಣೆಗಳು

ಕನ್ನಡಕ್ಕೆ ಮೊದಲ ಆದ್ಯತೆ ನೀಡಲು ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬಿಳಿಮಲೆ ಆಗ್ರಹ

ಸಂಸ್ಥೆಯ ಪ್ರತಿನಿಧಿಗಳು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾಗರಿಕರಿಗೆ ಸಂಬಂಧಿಸಿದ ಯಾವುದೇ ಮಾಹಿತಿ, ಅರ್ಜಿ ಅಥವಾ ದಾಖಲೆಗಳನ್ನು ಆಂಗ್ಲ ಭಾಷೆಯಲ್ಲಿ ನಿರೀಕ್ಷಿಸಿದಾಗ ನಾಗರಿಕರು ಅದನ್ನು ಕನ್ನಡದಲ್ಲಿಯೇ ಒದಗಿಸಲು ಆಗ್ರಹಿಸಬೇಕೆಂದು ನಾಡಿನ ಜನರಿಗೆ ಕರೆ

ಕನ್ನಡಕ್ಕೆ ಮೊದಲ ಆದ್ಯತೆ ನೀಡಲು ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬಿಳಿಮಲೆ ಆಗ್ರಹ

ಕರ್ನಾಟಕದಲ್ಲಿ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ಪಡೆಯಲು ಟಾಟಾ ಪವರ್ ಸಂಸ್ಥೆ ಸಲ್ಲಿಸಿರುವ ಅರ್ಜಿ ನಮೂನೆಗಳು, ಅನುಬಂಧಗಳು ಹಾಗೂ ಸಂಬಂಧಿತ ಎಲ್ಲ ಮಾಹಿತಿ ದಾಖಲೆಗಳು ಸಂಪೂರ್ಣವಾಗಿ ಆಂಗ್ಲಭಾಷೆಯಲ್ಲಿದ್ದು, ಅಸಂಖ್ಯ ಕನ್ನಡಿಗರ ಭಾಷಾ ಹಿತಾಸಕ್ತಿಗೆ ಸಂಬಂಧಿಸಿದ ಈ ಮಹತ್ವದ ದಾಖಲೆಗಳನ್ನು ಕನ್ನಡದಲ್ಲಿ ಲಭ್ಯವಾಗುವಂತೆ ಮಾಡಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿರುವ ಬಿಳಿಮಲೆ, ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸಲು ಮುಂದಾಗುವ ಯಾವುದೇ ಸಂಸ್ಥೆ ಈ ನೆಲದ ಭಾಷೆ, ಸಂಸ್ಕೃತಿ ಮತ್ತು ಭಾಷಾ ಹಕ್ಕುಗಳಿಗೆ ಗೌರವ ನೀಡುವುದು ಅದರ ಸಾಮಾಜಿಕ ಹೊಣೆಗಾರಿಕೆಯಾಗಿರಬೇಕು. ಆದರೆ ಟಾಟಾ ಪವರ್ ಸಂಸ್ಥೆ ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಿರುವುದು ಕನ್ನಡಿಗರ ಭಾಷಾ ಹಕ್ಕುಗಳಿಗೆ ಧಕ್ಕೆಯುಂಟು ಮಾಡುವುದಾಗಿದೆ ಎಂದಿದ್ದಾರೆ.

ಕನ್ನಡದಲ್ಲಿಯೇ ಮಾಹಿತಿ ನೀಡಿ: ಇದರ ಜೊತೆಗೆ ಸಂಸ್ಥೆಯ ಪ್ರತಿನಿಧಿಗಳು ಈಗಾಗಲೇ ಮನೆ ಮನೆಗೆ ಭೇಟಿ ನೀಡಿ ವಿದ್ಯುಚ್ಛಕ್ತಿ ಪೂರೈಕೆ ಕುರಿತಂತೆ ನಾಗರಿಕರಿಂದ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಆರಂಭಿಸಿದ್ದು, ಈ ವೇಳೆ ಬಳಸಲಾಗುತ್ತಿರುವ ಮಾಹಿತಿ ಸಂಗ್ರಹಣಾ ನಮೂನೆಗಳು ಸಹ ಆಂಗ್ಲ ಭಾಷೆಯಲ್ಲಿರುವುದು ತೀವ್ರ ಆಕ್ಷೇಪಣೀಯ ಎಂದಿರುವ ಬಿಳಿಮಲೆ, ಇದರಿಂದ ಸಾಮಾನ್ಯ ಕನ್ನಡಿಗರು ಈ ದಾಖಲೆಗಳ ಅಂಶಗಳು, ಉದ್ದೇಶ ಹಾಗೂ ಅದರ ಪರಿಣಾಮಗಳನ್ನು ಅರ್ಥೈಸಿಕೊಳ್ಳಲಾಗದ ಅಸಹಾಯಕ ಪರಿಸ್ಥಿತಿ ಉದ್ಭವವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಂಸ್ಥೆಯ ಪ್ರತಿನಿಧಿಗಳು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾಗರಿಕರಿಗೆ ಸಂಬಂಧಿಸಿದ ಯಾವುದೇ ಮಾಹಿತಿ, ಅರ್ಜಿ ಅಥವಾ ದಾಖಲೆಗಳನ್ನು ಆಂಗ್ಲ ಭಾಷೆಯಲ್ಲಿ ನಿರೀಕ್ಷಿಸಿದಾಗ ನಾಗರಿಕರು ಅದನ್ನು ಕನ್ನಡದಲ್ಲಿಯೇ ಒದಗಿಸಲು ಆಗ್ರಹಿಸಬೇಕೆಂದು ನಾಡಿನ ಜನರಿಗೆ ಕರೆ ನೀಡಿರುವ ಬಿಳಿಮಲೆ, ಎಲ್ಲ ಕನ್ನಡಿಗರು ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಕನ್ನಡದಲ್ಲಿಯೂ ಪಡೆಯುವುದು ಅವರ ಹಕ್ಕು ಮತ್ತು ವಿದ್ಯುತ್ ಬಿಲ್ಲುಗಳು ಮಹತ್ವದ ದಾಖಲೆಗಳಾಗಿರುವುದರಿಂದ ಈ ವಿಷಯದಲ್ಲಿ ಬಳಕೆದಾರರು ಬಹಳ ಜಾಗೃತರಾಗಿರಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದ್ದಾರೆ.

ಈ ಬಗ್ಗೆ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಕೂಡಲೇ ಕ್ರಮವಹಿಸಬೇಕೆಂದು ಆಗ್ರಹಿಸಿರುವ ಬಿಳಿಮಲೆ, ಇಂತಹ ಸಾರ್ವಜನಿಕ ದಾಖಲೆಗಳನ್ನು ಕನ್ನಡದಲ್ಲಿಯೂ ಪ್ರಕಟಿಸಲು ಮುಂದಾಗಬೇಕೆಂದು ಸೂಚಿಸಿದ್ದಾರೆ.

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ಫುಟ್ ಪಾತ್ ಪಾದಚಾರಿಗಳ ಹಕ್ಕು; ಹಾದಿಮ್ಯಾಲಿನವರ ಬದುಕಿನ ಹಕ್ಕಿನ ದಿಕ್ಕು? ಕರ್ನಾಟಕ ಸುದ್ದಿ

ಫುಟ್ ಪಾತ್ ಪಾದಚಾರಿಗಳ ಹಕ್ಕು; ಹಾದಿಮ್ಯಾಲಿನವರ ಬದುಕಿನ ಹಕ್ಕಿನ ದಿಕ್ಕು?

ಪದಚಾರಿಗಳ ಹಕ್ಕು ಸ್ಥಾಪಿಸಲು ಹೊರಟಿರುವ ಸಂದರ್ಭದಲ್ಲಿ ಸಚಿವ  ಕೃಷ್ಣ ಬೈರೇಗೌಡರು ಹಾಗು ಜನಪ್ರತಿನಿಧಿತ್ವದ ಸರ್ಕಾರ, ಕಾರ್ಯರೂಪಕ್ಕಾಗಿ ಕ್ಷೇತ್ರಕ್ಕೆ ಇಳಿಯುವ ಆಡಳಿತ ವ್ಯವಸ್ಥೆ  ಬೀದಿ ಬದಿ ವ್ಯಾಪಾರಿಗಳು ಯಾಕಿದ್ದಾರೆ ಎಂಬುದನ್ನೂ ಗಮನಿಸಬೇಕಿದೆ. ಭಾರತದ ಜನರ ದುಡಿಮೆಯ ಅವಕಾಶ, ಆದಾಯ, ಕುಟುಂಬ ನಿರ್ವಹಣೆಯ ಕನಿಷ್ಟ ಖರ್ಚುಗಳು, ಸಾಮಾಜಿಕ ಸಮೀಕರಣಗಳನ್ನೂ ಗಮನಿಸಬೇಕಿದೆ ಎಂದು ನಾಗರಿಕ ಸಮಾಜ ಮಾತನಾಡಿಕೊಳ್ಳುತ್ತಿದೆ.

Admin
ಪೊಲೀಸ್ ಇಲಾಖೆಯ ಮಾಹಿತಿ ಹಂಚಿಕೆಗೆ ಏಕೀಕೃತ ಮಾರ್ಗಸೂಚಿ ಬಿಡುಗಡೆಗೊಳಿಸಿದ ಗೃಹ ಸಚಿವರು ಕರ್ನಾಟಕ ಸುದ್ದಿ

ಪೊಲೀಸ್ ಇಲಾಖೆಯ ಮಾಹಿತಿ ಹಂಚಿಕೆಗೆ ಏಕೀಕೃತ ಮಾರ್ಗಸೂಚಿ ಬಿಡುಗಡೆಗೊಳಿಸಿದ ಗೃಹ ಸಚಿವರು

ಗೃಹ ಇಲಾಖೆಯ ಹೊಸ ಮಾರ್ಗಸೂಚಿಗಳ ಮೂಲಕ, ಪೊಲೀಸ್ ಇಲಾಖೆಯ ವಿವಿಧ ಹಂತಗಳಲ್ಲಿ ಮಾಧ್ಯಮಗಳಿಗೆ ನೀಡಲಾಗುವ ಮಾಹಿತಿ, ಅಪರಾಧ ಪ್ರಕರಣಗಳ ತನಿಖಾ ವಿವರಗಳು ಹಾಗೂ ಸಾರ್ವಜನಿಕ ಪ್ರಕಟಣೆಗಳ ಕುರಿತು ಸ್ಪಷ್ಟ ನಿಯಮಾವಳಿ ಜಾರಿಗೆ ತರಲಾಗಿದೆ

Admin
ಬೆಳಗಾವಿ  ಗಡಿ ವಿಷಯ ಕಾನೂನಾತ್ಮಕವಾಗಿ ಸರ್ಕಾರ   ಗಂಭೀರವಾಗಿ ಪರಿಗಣಿಸಲು ಕನ್ನಡ ಮನಸ್ಸುಗಳ ಒಕ್ಕೊರಲ ಆಗ್ರಹ ಕರ್ನಾಟಕ ಸುದ್ದಿ

ಬೆಳಗಾವಿ  ಗಡಿ ವಿಷಯ ಕಾನೂನಾತ್ಮಕವಾಗಿ ಸರ್ಕಾರ ಗಂಭೀರವಾಗಿ ಪರಿಗಣಿಸಲು ಕನ್ನಡ ಮನಸ್ಸುಗಳ ಒಕ್ಕೊರಲ ಆಗ್ರಹ

ಗಡಿ ದಾವೆಯನ್ನು ಪ್ರಾಥಮಿಕ ಹಂತದಲ್ಲಿಯೇ ನ್ಯಾಯಾಲಯವು ತಿರಸ್ಕರಿಸುವಂತೆ ಸೂಕ್ತ ಕಾನೂನು ಕ್ರಮವನ್ನು ರಾಜ್ಯ ಸರಕಾರ ಕೈಕೊಳ್ಳಬೇಕು. ಬೆಳಗಾವಿ ಗಡಿಗೆ ಸಂಬಂಧಿಸಿದಂತೆ ರಚಿಸಲಾದ ಗಡಿ ಸಂರಕ್ಷಣಾ ಆಯೋಗ ಬೆಂಗಳೂರಿನ ಬಹುಮಹಡಿ ಕಟ್ಟಡದಲ್ಲಿದ್ದು ಅದನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರಿಸಬೇಕು - ಆಗ್ರಹ

Admin