ರೈತರು ಹಾಗ ಕಾರ್ಖಾನೆ ಮಾಲೀಕರರೊಂದಿಗಿನ ಸಂವಾದ ಸುಖಾಂತ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ
"ಕಳೆದ 10 ವರ್ಷಗಳಿಂದ ಕೇಂದ್ರ ಸರ್ಕಾರ ಕಬ್ಬಿನ ಬೆಲೆ ನಿಗದಿ ಮಾಡದೇ ಇರುವುದರಿಂದ ಸಮಸ್ಯೆ ತೀವ್ರಗೊಂಡಿದೆ. ಈ ಬಗ್ಗ ಸೂಕ್ತ ತೀಮಾರ್ಣ ತೆಗೆದುಕೊಳ್ಳುವ ಬಗ್ಗೆ ಕರ್ನಾಟಕದವರೇ ಆದ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಇವರು ಭರವಸೆ ನೀಡಿದ್ದಾರೆ. ಅವರು ಕಬ್ಬಿಗೆ ಸೂಕ್ತ ಬೆಲೆ ನಿಗದಿಗೊಳಿಸುವ ಬಗ್ಗೆ ಸರ್ಕಾರ, ರೈತರು ಹಾಗೂ ಕಾರ್ಖಾನೆಯವರು ವಿಶ್ವಾಸ ಹೊಂದಿದ್ದಾರೆ"
ರೈತರು ಹಾಗ ಕಾರ್ಖಾನೆ ಮಾಲೀಕರರೊಂದಿಗಿನ ಸಂವಾದ ಸುಖಾಂತ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ
ಅಸ್ಮಿತೆ ವರದಿ, ಅ.೨೭: ಕಬ್ಬು ಬೆಳೆಯ ಬೆಲೆ ನಿಗದಿ ಕುರಿತಂತೆ ನಿನ್ನೆ ಮುಂಜಾನೆಯಿಂದ ಮಧ್ಯ ರಾತ್ರಿಯವರಿಗೆ ರೈತರು ಹಾಗೂ ಸಕ್ಕರೆ ಕಾರ್ಖಾನೆಯ ಮಾಲೀಕರೊಂದಿಗೆ ನಡೆಸಲಾದ ಸರಣಿಗೆ ಚರ್ಚೆ ಒಮ್ಮದ ನಿರ್ಧಾರಕ್ಕೆ ಬಂದಿದ್ದು ಸುಖಾಂತಗೊಂಡಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತಿಳಿಸಿದ್ದಾರೆ.
ಬೆಳಗಾವಿಯಲ್ಲಿಇಂದು ಮುಂಜಾನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರೊಂದಿಗೆ ಜಂಟಿ ಸಭೆ ನಡೆಸಲಾಗಿದೆ. ಇಬ್ಬರೂ ಒಮ್ಮತ ನಿರ್ಧಾರಕ್ಕೆ ಬಂದಿದ್ದಾರೆ. ರೈತರು ಪ್ರತಿಭಟನೆ, ಬಂದ್ ಹಿಂತೆಗೆದುಕೊಳ್ಳುವುದಾಗಿ ತಿಳಿಸಿರುವುದು ಒಳ್ಳೆಯ ಬೆಳವಣಿಗೆ ಬೆಗೆ ಕಾರ್ಖಾನೆಗಳು ಆರಂಭಗೊಂಡರೆ ಇಬ್ಬರಿಗೂ ಅನುಕೂಲವಾಗುತ್ತದೆ. ಸರ್ಕಾರ ಇಬ್ಬರ ಹಿತಾಸಕ್ತಿ ಕಾಪಾಡಲು ಬಂದ್ದವಾಗಿದೆ. ರೈತರ ಅನುಕೂಲತೆಯ ದೃಷ್ಟಿ ರಾಜ್ಯ ಸರ್ಕಾರ ಉಚಿತ ವಿದ್ಯುತ್ ಹಾಗೂ ಸಹಾಯ ಧನ ನೀಡುತ್ತ ಬಂದಿರುವ ಬಗ್ಗೆ ರೈತರು ಅರಿತುಕೊಂಡಿದ್ದಾರೆ ಎಂದು ತಿಳಿಸಿದರು.
ಕಳೆದ 10 ವರ್ಷಗಳಿಂದ ಕೇಂದ್ರ ಸರ್ಕಾರ ಕಬ್ಬಿನ ಬೆಲೆ ನಿಗದಿ ಮಾಡದೇ ಇರುವುದರಿಂದ ಸಮಸ್ಯೆ ತೀವ್ರಗೊಂಡಿದೆ. ಈ ಬಗ್ಗ ಸೂಕ್ತ ತೀಮಾರ್ಣ ತೆಗೆದುಕೊಳ್ಳುವ ಬಗ್ಗೆ ಕರ್ನಾಟಕದವರೇ ಆದ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಇವರು ಭರವಸೆ ನೀಡಿದ್ದಾರೆ. ಅವರು ಕಬ್ಬಿಗೆ ಸೂಕ್ತ ಬೆಲೆ ನಿಗದಿಗೊಳಿಸುವ ಬಗ್ಗೆ ಸರ್ಕಾರ, ರೈತರು ಹಾಗೂ ಕಾರ್ಖಾನೆಯವರು ವಿಶ್ವಾಸ ಹೊಂದಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.
ರಾಜ್ಯದ ಬಯಲು ಸೀಮೆ ರೈತರು, ದ್ರಾಕ್ಷಿ ಬೆಳೆಗಾರರು, ಹೂವು, ತೆಂಗು, ಅಡಿಕೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ರೈತರ ಸಮಸ್ಯೆಗಳು ಇವೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಎಲ್ಲರ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಾಗುವುದು. ಮೈಸೂರು ದಸರಾ ಉತ್ಸವದ ಸಂದರ್ಭದಲ್ಲಿ ಸಣ್ಣ ಪುಟ್ಟ ದೋಷಗಳಾಗಿದ್ದರೆ ಪುನರಾವರ್ತನೆಯಾಗದಂತೆ ತಿದ್ದಿಕೊಳ್ಳಲಾಗುವುದು. ನಾಡಿಗೆ ಮೈಸೂರು ಅರಸರ ಕೊಡಗೆ ಅಪಾರವಾಗಿದ್ದು, ಸರ್ಕಾರಕ್ಕೆ ಈ ಬಗ್ಗೆ ಗೌರವವಿದೆ. ದಸರಾ ಉತ್ಸವವನ್ನು ಸತ್ ಸಂಪ್ರದಾಯದಂತೆ ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಮುಖ್ಯಮಂತ್ರಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
**
ಈ ಲೇಖನ ಹಂಚಿಕೊಳ್ಳಿ