ಬ್ರೇಕಿಂಗ್
◆"ಪತ್ರಕರ್ತ ಜವಾಬ್ದಾರಿಯಿಂದ ನುಣಚಿಕೊಂಡರೆ ಸತ್ಯ ಸಾಯುತ್ತದೆ" ◆ಇಮಾಮ್ ಅವರಿಗೆ ಶನಿವಾರ ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ◆ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ ◆ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ ◆ಟನ್ ಕಬ್ಬಿಗೆ 3,600 ಕಾರ್ಖಾನೆಗಳ ನಿಗದಿಗೆ ನಿಟ್ಟುಸಿರು ಬಿಟ್ಟ ರೈತರು ಹೋರಾಟದ ಬಿಸಿ ಉಸಿರು ◆ಬೆಳಗಾವಿ ಪಾಲಿಕೆಯಿಂದ ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ ◆ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ ◆ಗಣಿ ಇಲಾಖೆ ಸಿಬ್ಬಂದಿಗೆ ಅನಧಿಕೃತ ಹಣದ ವಹಿವಾಟು- ಉಪ ಲೋಕಾಯುಕ್ತ ಬಿ. ವೀರಪ್ಪ ◆ಮರು ನೋಂದಣಿ ಮಾಡದ ಶಾಲಾ ವಾಹನ, ಅನಧಿಕೃತ ವಾಹನಗಳ ಮುಲಾಜಿಲ್ಲದೆ ಜಪ್ತಿ ಮಾಡಿ- ಉಪ ಲೋಕಾಯುಕ್ತರ ಕಡಕ್ ಸೂಚನೆ ◆ಮುಚ್ಚಂಡಿ ಗ್ರಾಮ ಪಂಚಾಯತಿ: ಕರ್ತವ್ಯ ಲೋಪ, ಅನುದಾನ ದುರ್ಬಳಕೆ - ಮುಲಾಜಿಲ್ಲದೆ ಕ್ರಮ - ಉಪ ಲೋಕಾಯುಕ್ತರ ಎಚ್ಚರಿಕೆ ◆"ಪತ್ರಕರ್ತ ಜವಾಬ್ದಾರಿಯಿಂದ ನುಣಚಿಕೊಂಡರೆ ಸತ್ಯ ಸಾಯುತ್ತದೆ" ◆ಇಮಾಮ್ ಅವರಿಗೆ ಶನಿವಾರ ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ◆ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ ◆ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ ◆ಟನ್ ಕಬ್ಬಿಗೆ 3,600 ಕಾರ್ಖಾನೆಗಳ ನಿಗದಿಗೆ ನಿಟ್ಟುಸಿರು ಬಿಟ್ಟ ರೈತರು ಹೋರಾಟದ ಬಿಸಿ ಉಸಿರು ◆ಬೆಳಗಾವಿ ಪಾಲಿಕೆಯಿಂದ ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ ◆ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ ◆ಗಣಿ ಇಲಾಖೆ ಸಿಬ್ಬಂದಿಗೆ ಅನಧಿಕೃತ ಹಣದ ವಹಿವಾಟು- ಉಪ ಲೋಕಾಯುಕ್ತ ಬಿ. ವೀರಪ್ಪ ◆ಮರು ನೋಂದಣಿ ಮಾಡದ ಶಾಲಾ ವಾಹನ, ಅನಧಿಕೃತ ವಾಹನಗಳ ಮುಲಾಜಿಲ್ಲದೆ ಜಪ್ತಿ ಮಾಡಿ- ಉಪ ಲೋಕಾಯುಕ್ತರ ಕಡಕ್ ಸೂಚನೆ ◆ಮುಚ್ಚಂಡಿ ಗ್ರಾಮ ಪಂಚಾಯತಿ: ಕರ್ತವ್ಯ ಲೋಪ, ಅನುದಾನ ದುರ್ಬಳಕೆ - ಮುಲಾಜಿಲ್ಲದೆ ಕ್ರಮ - ಉಪ ಲೋಕಾಯುಕ್ತರ ಎಚ್ಚರಿಕೆ
18 ನವೆಂ 2026
ಕಾರ್ಖಾನೆ ಮಾಲಿಕರು, ಅಧಿಕಾರಿಗಳು ಕೇಂದ್ರದೊಂದಿಗೆ ಸಮಾಲೋಚಿಸಿ ಕ್ರಮ - ಸಿಎಂ ಭರವಸೆ
📄 ಕರ್ನಾಟಕ ಸುದ್ದಿ
Dr. K N Doddmani · · 31 ವೀಕ್ಷಣೆಗಳು

ಕಾರ್ಖಾನೆ ಮಾಲಿಕರು, ಅಧಿಕಾರಿಗಳು ಕೇಂದ್ರದೊಂದಿಗೆ ಸಮಾಲೋಚಿಸಿ ಕ್ರಮ - ಸಿಎಂ ಭರವಸೆ

ಸಕ್ಕರೆ ಬೆಲೆ ಹೆಚ್ಚಾಗುವವರೆಗೆ  ಕಬ್ಬಿನ ಬೆಲೆ ಹೆಚ್ಚಾಗುವುದಿಲ್ಲ. ಹಣಕಾಸಿನ ಕೊರತೆ , ಬರಗಾಲ ಪರಿಸ್ಥಿತಿ ; ಫ್ಯಾಕ್ಟಿರಿಯವರು ಮೈಗೆ ಎಣ್ಣೆ ಹಚ್ಚಿಕೊಂಡಿರುತ್ತಾರೆ; ಕೇಂದ್ರದಿಂದ ಬೆಲೆ ನಿಗದಿಗೆ ಸರ್ಕಾರ ರೈತರೊಂದಿಗಿದೆ- ಸಭೆಯಲ್ಲಿ ಮುಖ್ಯಮಂತ್ರಿ ಹೇಳಿಕೆ

ಕಬ್ಬು ಬೆಲೆ ನಿಗದಿಗಾಗಿ  ರೈತರೊಂದಿಗೆ ಮುಖ್ಯಮಂತ್ರಿ ದೀರ್ಘ ಸಭೆ:

ಕಾರ್ಖಾನೆ ಮಾಲಿಕರು, ಅಧಿಕಾರಿಗಳು ಕೇಂದ್ರದೊಂದಿಗೆ ಸಮಾಲೋಚಿಸಿ ಕ್ರಮ - ಸಿಎಂ ಭರವಸೆ

ಅಸ್ಮಿತೆ ವರದಿ,ಅ.೨೬: ಕಬ್ಬು ಬೆಳೆಗೆ ಸೂಕ್ತ ಬೆಲೆ ನಿಗದಿಗೆ ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತರೊಂದಿಗೆ ಇಂದು ದಿನವಿಡೀ ಸರಣಿ ಸಭೆ ನಡೆಸಿದರು.

ಸಚಿವರಾದ ಸತೀಶ ಜಾರಕಿಹೊಳಿ,  ರುದ್ರಪ್ಪ ಲಮಾಣಿ, ಎಸ್. ಎಸ್. ಮಲ್ಲಿಕಾರ್ಜುನ, ಎನ್.‌ ಚೆಲುವರಾಯಸ್ವಾಮಿ, ಲಕ್ಷ್ಮೀಣ ಸವದಿ, ಎಂ.ಬಿ. ಪಾಟೀಲ, ಸಂತೋಷ ಲಾಡ, ಶಿವಾನಂದ ಪಾಟೀಲ, ಮಾಜಿ ಸಚಿವ ಎಚ್.ಕೆ. ಪಾಟೀಲ, ಅನೇಕ ಶಾಸಕರು, ಸಂಸದರು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ರೈತ ಮುಖಂಡರಾದ, ನಾಗೇಂದ್ರ, ಚೂನಪ್ಪ ಪೂಜಾರಿ, ಚುಕ್ಕಿ ನಂಜುಂಡ್ವಾಮಿ, ಕುರುಗೂರು ಶಾಂತಕುಮಾರ, ದರ್ಶನ ಪುಟ್ಟಣ್ಣಯ್ಯ, ಸುಭಾಷ ಶರಬೂರ,ಬಸವಂತಪ್ಪ ಕಾಂಬಳೆ ಸೇರಿದಂತೆ ವಿವಿಧ ಜಿಲ್ಲೆಗಳ ಮುಖಂಡರು ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಎಸ್. ಎ.ಪಿ. ಅಡಿಯಲ್ಲಿ ರಾಜ್ಯ ಸರ್ಕಾರ ಒಂದು ಟನ್‌ ಗೆ ಒಂದು ಸಾವಿರ ರೂಪಾಯಿಗಳನ್ನು ನೀಡಬೇಕು. ಕಾರ್ಖಾನೆಯವರು ನಾಲ್ಕುವರಿ ಸಾವಿರ ರೂಪಾಯಿಗಳನ್ನು ಕೊಡಿಸಬೇಕು. ತೂಕದಲ್ಲಿ ಮೋಸ ಆಗುತ್ತಿದೆ. ಸಕಾರದ ವತಿಯಿಂದ ಉದ್ದಕ್ಕೂ ತೂಕದ ಕೇಂದ್ರಗಳನ್ನು ಸ್ಥಾಪಿಸಬೇಕು. ಇಲಾಖೆ ಸದೃಢಗೊಳಿಸಿ ಕ್ರಿಯಾಶೀಲಗೊಳಿಸಿ. ರಾಜ್ಯ ವ್ಯಾಪಿ ಒಂದೇ ರೀತಿ ಬೆಲೆ ನಿಗದಿಯಾಗಬೇಕು. ತ್ವರಿತವಾಗಿ ಬೆಲೆ ನಿಗದಿಗೊಳಿಸಿ ಕಾರ್ಖಾನೆ ಆರಂಭಿಸಬೇಕೆಂದು ರೈತರು ಬೇಡಿಕೆಗಳನ್ನು ಮುಂದಿಟ್ಟರು.

ರೈತರ ಸಮಸ್ಯೆಗಳನ್ನು ಆಲಿಸಿದ  ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಜೊತೆಗೂಡಿ ಕ್ರಮಕ್ಕೆ ಮುಂದಾಗಬೇಕು. ಹಣಕಾಸು ಅಧಿಕಾರಿಗಳು, ಕಾರ್ಖಾನೆ ಮಾಲಿಕರೊಂದಿಗೆ, ನೆರೆಯ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಮಾತನಾಡಬೇಕು, ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಸೂಕ್ತಕ್ರಮಕ್ಕೆ ಕಾಲಾವಕಾಶ ನೀಡಿಬೇಕು. ಎಂ.ಎಸ್.ಪಿ. ಕ್ರಮಕ್ಕೆ ಕೇಂದ್ರ ಮುಂದಾಗಿದೆ. ಅದುವರೆಗೆ ರೈತರು ತಾಳ್ಮೆ ವಹಿಸಬೇಕೆಂದು ಹೇಳಿದರು.

ಎಫ್.ಆರ್.ಪಿ. ಅನುಷ್ಠಾನಕ್ಕೆ ನಿಮ್ಮ ಪರವಾಗಿ ಕೇಂದ್ರದ ಜೊತೆ ವಾದ ಮಾಡಲು ಸಿದ್ದವಿದ್ದೇವೆ.  ಕೇಂದ್ರದಿಂದ ಸೂಕ್ತ ಬೆಲೆ ನಿಗದಿ ಪಡಿಸಿ ರೈತರಗೆ ನ್ಯಾಯ ಒದಗಿಸಲು ಪ್ರಯತ್ನ. ಕಾರ್ಖಾನೆಯ ಮೂಲಕ ತೂಕ, ಹಣ ನೀಡುವಿಕೆಗೆ ಕ್ರಮ ತೆಗೆದುಕೊಳ್ಳಲಾಗುವುದು.  ರಾಜ್ಯದಲ್ಲಿ ಬರಗಾಲವಿದೆ. ಸರ್ಕಾರದ ಹಣಕಾಸಿನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಕೇಂದ್ರದ ರಚಿಸಿ ಬೆಲೆ ಸಮೀಕ್ಷೆ ಸಮಿತಿ  29 ರಂದು ರಾಜ್ಯಕ್ಕೆ ಆಗಮಿಸಲಿದೆ ಎಂದು ತಿಳಿಸಿದರು.

ಸರ್ಕಾರ ಎಂ.ಎಸ್.ಪಿ ಬಗ್ಗೆ ಮಾತನಾಡಿದರೆ, ರೈತರು ಎ.ಎಸ್.ಪಿ. ಜೀವಂತಗೊಳಿಸಿ,  ತೆರೆಗೆ ಹಣದಲ್ಲಿ ಸರ್ಕಾರ ಸಾವಿರ ರೂಪಾಯಿಗಳ ಹಾಗೂ ಕಾರ್ಖಾನೆಯವರಿಂದ ನಾಲ್ಕುವರಿ ಸಾವಿರ ಕೊಡಿಸಿ ಎಂದು ಒತ್ತಾಯದ ಮಧ್ಯ ಸಭೆ ಮುಕ್ತಾಯಗೊಂಡಿತು

***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ರೈತರು ಹಾಗ ಕಾರ್ಖಾನೆ ಮಾಲೀಕರರೊಂದಿಗಿನ ಸಂವಾದ ಸುಖಾಂತ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕರ್ನಾಟಕ ಸುದ್ದಿ

ರೈತರು ಹಾಗ ಕಾರ್ಖಾನೆ ಮಾಲೀಕರರೊಂದಿಗಿನ ಸಂವಾದ ಸುಖಾಂತ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ

"ಕಳೆದ 10 ವರ್ಷಗಳಿಂದ ಕೇಂದ್ರ ಸರ್ಕಾರ ಕಬ್ಬಿನ ಬೆಲೆ ನಿಗದಿ ಮಾಡದೇ ಇರುವುದರಿಂದ ಸಮಸ್ಯೆ ತೀವ್ರಗೊಂಡಿದೆ. ಈ ಬಗ್ಗ ಸೂಕ್ತ ತೀಮಾರ್ಣ ತೆಗೆದುಕೊಳ್ಳುವ ಬಗ್ಗೆ ಕರ್ನಾಟಕದವರೇ ಆದ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಇವರು ಭರವಸೆ ನೀಡಿದ್ದಾರೆ. ಅವರು ಕಬ್ಬಿಗೆ ಸೂಕ್ತ ಬೆಲೆ ನಿಗದಿಗೊಳಿಸುವ ಬಗ್ಗೆ ಸರ್ಕಾರ, ರೈತರು ಹಾಗೂ ಕಾರ್ಖಾನೆಯವರು ವಿಶ್ವಾಸ ಹೊಂದಿದ್ದಾರೆ"

Admin