ಬ್ರೇಕಿಂಗ್
ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ
19 ಸೆಪ್ಟೆಂ 2026
6 ರಂದು ಸಾಂಬ್ರಾದಲ್ಲಿ ಸಾರಂಗ ಹೆಲಿಕಾಪ್ಟರ್ ತಂಡದಿಂದ ಆಕಾಶದಲ್ಲಿ ಆಕರ್ಷಕ ಚಿತ್ತಾರ
📄 ರಾಷ್ಟ್ರೀಯ ಸುದ್ದಿ
Dr. K N Doddmani · · 151 ವೀಕ್ಷಣೆಗಳು

6 ರಂದು ಸಾಂಬ್ರಾದಲ್ಲಿ ಸಾರಂಗ ಹೆಲಿಕಾಪ್ಟರ್ ತಂಡದಿಂದ ಆಕಾಶದಲ್ಲಿ ಆಕರ್ಷಕ ಚಿತ್ತಾರ

ವಾಯುಪಡೆಯ ಶಾಲೆಯಲ್ಲಿ ತರಬೇತಿ ಪಡೆದ 7ನೇ ತಂಡದ 1 ಸಾವಿರದ 250 ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚನ ನಿಮಿತ್ತ ಸಾರಂಗ ತಂಡದಿಂದ ಅತ್ಯಾಕರ್ಷಕ ಹೆಲಿಕಾಪ್ಟರ್ ಪ್ರದರ್ಶನ ಜರುಗಲಿದೆ

6 ರಂದು ವಾಯಪಡೆ ಅಗ್ನಿವೀರರ ನಿರ್ಗಮನ ಪಥ ಸಂಚಲ, ರೋಮಾಂಚಕಾರಿ ಸಾರಂಗ್ ಹೆಲಿಕಾಪ್ಟರ್ ಪ್ರದರ್ಶನ

ಬೆಳಗಾವಿ ಸಾಂಬ್ರಾದಲ್ಲಿನ ಭಾರತೀಯ ವಾಯುಪಡೆಯ ತರಬೇತಿ ಶಾಲೆಯಲ್ಲಿ ಸತತ 22 ವಾರಗಳ ವರೆಗೆ ಅತ್ಯಂತ ಕಠಿಣ ಹಾಗೂ ಪರಿಣಾಮಾತ್ಮ ತರಬೇತಿ ಪಡೆದ 7ನೇ ತಂಡದ 1 ಸಾವಿರದ 250 ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚನ ಇದೆ‌ ಜೂನ್ 6 ರಂದು ಸಾಂಬ್ರಾದಲ್ಲಿ ಜರುಗಲಿದೆ.

ಅಂದಿನ ವಾಯುಪಡೆ ಅಗ್ನಿವೀರರ ನಿರ್ಗಮನ ಪಥ ಸಂಚಲನ ನಿಮಿತ್ತ ಈ ಸಲ ಕುಶಾಲಾಗ್ರ ಸಾರಂಗ ಪೈಲಟ್ ತಂಡದಿಂದ ರೋಮಾಂಚಕಾರಿ ಹೆಲಿಕಾಪ್ಟರ್ ಪ್ರದರ್ಶನ ನಡೆಯಲಿದ್ದು ಆಕಾಶದಲ್ಲಿ ಅತ್ಯಾಕರ್ಷಕ ಚಿತ್ತಾರ ಮೂಡಿಸಲಿವೆ ಎಂದು ಕಮಾಂಡಿಂಗ್ ಅಧಿಕಾರಿ ಜಿಪಿ‌ ಕ್ಯಾಪ್ಟನ್ ಅಭಿಜೀತ್ ಕುಮಾರ ತಿಳಿಸಿದ್ದಾರೆ.

ಸಾಂಬ್ರಾ ವಾಯುಪಡೆ ತರಬೇತಿ ಶಾಲೆಯಲ್ಲಿ ಇಂದು ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಸಾರಂಗ ತಂಡದ 10 ಜನ ಅನುಭವಿ ಪೈಲಟ್ ಗಳಿಂದ ಸುಸಜ್ಜಿತ 5 ಹೆಲಿಕಾಪ್ಟರ್ ಗಳ ಮೂಲಕ ವಿಭಿನ್ನ ರೀತಿಯ‌ ಪ್ರದರ್ಶನ ನಡಿಸಿ ಕೌಶಲ್ಯತೆ ಮೆರೆಯಲಿದ್ದಾರೆ. ಆಕಾಶದಲ್ಲಿನ ಹೆಲಿಕಾಪ್ಟರ್ ಗಳ ಭವ್ಯ ಪ್ರದರ್ಶನ ಸಾರಂಗ ತಂಡದ ಸೈನಿಕ ಶಿಸ್ತು, ವೃತ್ತಿಪರತೆ ಮತ್ತು ವಾಯುಪಡೆಯ ಶ್ರೇಷ್ಠತೆಯ ದ್ಯೋತಕವಾಗಲಿದೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನಿ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆ ಸ್ಥಳೀಯವಾಗಿ ವಿನ್ಯಾಸಗೊಳಿಸಿ ಆಧುನಿಕ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಿ ತಯಾರಿಸಿದ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ALH) ದೃವ ನಿರ್ವಹಿಸಲಿದೆ. ಇದು ಭಾರತದ ಬೆಳೆಯುತ್ತಿರುವ ಏರೋಸ್ಪೇಸ್ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಎಲ್ಲ ಬಗೆಯ ವಾಯುಗುಣದಲ್ಲಿ ವಿಭಿನ್ನ ಕೌಶಲ್ಯ ಸಾಮರ್ಥ್ಯ ಹೊಂದಿದೆ ಎಂದು ಕ್ಯಾಪ್ಟನ್ ಅಭಿಜೀತ್ ಕುಮಾರ ತಿಳಿಸಿದ್ದಾರೆ.

ಭಾರತ ಹಾಗೂ ವಿದೇಶಗಳಲ್ಲಿ ತನ್ನ ಅತ್ಯಾಕರ್ಷಕ ಪ್ರದರ್ಶನದ ಮೂಲಕ ಅಪಾರ ಮೆಚ್ಚುಗೆಗೆ ಪಾತ್ರವಾಗಿರುವ ಸಾರಂಗ ತಂಡ 2004 ರಲ್ಲಿ ಸಿಂಗಾಪುರ್ ನಲ್ಲಿ ನಡೆದ ಏಷ್ಯನ್ ಏರೋಸ್ಪೇಸ್ ಅಂತರಾಷ್ಟ್ರೀಯ ಪ್ರದರ್ಶನದಲ್ಲಿ ಮೊದಲು ಪಾದಾರ್ಪಣೆ ಮಾಡಿ ಪ್ರದರ್ಶನ ನೀಡಿದೆ. ಅಂದಿನಿಂದ ಇಲ್ಲಿಯವರೆಗೆ ಪ್ರಪಂಚದಾದ್ಯಂತ 390 ಹೆಚ್ಚಿನ ಸ್ಥಳಗಳಲ್ಲಿ 1 ಸಾವಿರದ 200 ಕ್ಕೂ ಹೆಚ್ಚು ಪ್ರದರ್ಶನ ನೀಡಿ ಗಮನ ಸೆಳೆದಿದೆ ಎಂದು ಕ್ಯಾಪ್ಟನ್ ಅಭಿಜೀತ್ ಕುಮಾರ ಮಾಹಿತಿ ನೀಡಿದ್ದಾರೆ.

ಎಂಜನೀಯರಿಂಗ್ ಅಧಿಕಾರಿ ವಿಜಿ ಕ್ಯಾಪ್ಟನ್ ಪ್ರಿಯಾಂಶು, ಪೈಲಟ್ ಮುಖ್ಯಸ್ಥರಾದ ಬುದ್ಧಿ ಸಾಗರ, ಅಂಕಿತಾ ಸಿಂಗ್ ಹಾಗೂ ವಿಷ್ಣು ಮಾಧ್ಯಮ ಸಂವಾದದಲ್ಲಿ ಉಪಸ್ಥಿತರಿದ್ದರು.

****

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ಸಾಂಪ್ರದಾಯಿಕ ಆಯುಷ್ ಔಷಧಿ ಗುಣಮಟ್ಟದ  ಸುಧಾರಣೆಗಾಗಿ ICMR ದಲ್ಲಿ ‌ತಜ್ಞರ ಕಾರ್ಯಾಗಾರ ರಾಷ್ಟ್ರೀಯ ಸುದ್ದಿ

ಸಾಂಪ್ರದಾಯಿಕ ಆಯುಷ್ ಔಷಧಿ ಗುಣಮಟ್ಟದ ಸುಧಾರಣೆಗಾಗಿ ICMR ದಲ್ಲಿ ‌ತಜ್ಞರ ಕಾರ್ಯಾಗಾರ

ದಿನವಿಡೀ ನಡೆದ ಕಾರ್ಯಾಗಾರದಲ್ಲಿ ಸಾಂಪ್ರದಾಯಿಕ  ಔಷಧಿಗಳ ಗುಣಮಟ್ಟ ಹಾಗೂ  ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಕುರಿತು ಚರ್ಚಿಸಲಾಯಿತು. 20 ಕ್ಕೂ ಅಧಿಕ ತಜ್ಞರು ಭಾಗವಹಿಸಿದ್ದರು

Admin
ಮೂರು ದಿನಗಳ RSS ಬೈಟಕ್ ಮುಕ್ತಾಯ: ಶ್ರೀರಾಮ ಜನ್ಮಭೂಮಿ ಮಂದಿರದ ದಾನ ಪೆಟ್ಟಿಗೆಯ ಕಾಣಿಕೆಯ  ಅಕ್ರಮಕ್ಕೆ ಖೇದ ರಾಷ್ಟ್ರೀಯ ಸುದ್ದಿ

ಮೂರು ದಿನಗಳ RSS ಬೈಟಕ್ ಮುಕ್ತಾಯ: ಶ್ರೀರಾಮ ಜನ್ಮಭೂಮಿ ಮಂದಿರದ ದಾನ ಪೆಟ್ಟಿಗೆಯ ಕಾಣಿಕೆಯ ಅಕ್ರಮಕ್ಕೆ ಖೇದ

ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ತೀರ್ಥಕ್ಷೇತ್ರ ನ್ಯಾಸ ಖಚಿತಪಡಿಸಿಕೊಳ್ಳಬೇಕು. ಇದರಿಂದ ಸಮಸ್ತ ರಾಮಭಕ್ತರು ರಾಮ ಮಂದಿರದ ಮೇಲೆ ಹೊಂದಿರುವ ಶ್ರದ್ಧೆ ಮತ್ತು ಆಳವಾದ ನಂಬಿಕೆಗೆ ಧಕ್ಕೆಯಾಗಬಾರದು ಎಂದು ಸೂಚನೆ

Admin