ಬ್ರೇಕಿಂಗ್
ಸಾಮರಸ್ಯ ಕೆಡಿಸುವ ಎಂಇಎಸ್‌, ಶಿವಸೇನೆ ನಿಷೇಧಕ್ಕೆ ಕರವೇ ಆಗ್ರಹ ಸುವರ್ಣ ಸೌಧದ ಎದುರು ಅಂತರಾಷ್ಟ್ರೀಯ ಯೋಗ‌ ದಿನಾಚರಣೆ ಸೈಬರ್ ವಂಚನೆಯಿಂದ ಹಣ ಕಳೆದುಹೋಗದಂತೆ ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನದ ಬಿಗಿಕ್ರಮ - ಪ್ರಿಯಾಂಕ ಖರ್ಗೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಲು ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬಿಳಿಮಲೆ ಆಗ್ರಹ ರಕ್ಷಣಾ ಭದ್ರತಾ ದಳಕ್ಕೆ (ಡಿಎಸ್‌ಸಿ) ಮಾಜಿ ಸೈನಿಕರ ನೇಮಕಾತಿ ಮಂಗಾವತಿ :   ಸೇವಾ ನಿವೃತ್ತ ಹಾಗೂ ಪ್ರತಿಭಾ ಸಾಧಕರಿಗೆ ಗೌರವ ಸನ್ಮಾನ 232 ಗ್ರೇಡ್-2 ತಹಶೀಲ್ದಾರ್‌ಗಳಿಗೆ ಗ್ರೇಡ್-1 ತಹಶೀಲ್ದಾರ್ ಹುದ್ದೆಗೆ ಬಡ್ತಿ ಮಹಾದಾಯಿ, ಕೃಷ್ಣೆ, ಕಾವೇರಿ ಜಲ ವಿವಾದ ನಿವಾರಣೆಗೆ ರಾಜ್ಯ ಸರ್ಕಾರದ ಹೆಚ್ಚಿನ ಮುತವರ್ಜಿ ಅಗತ್ಯ : ನ್ಯಾಯವಾದಿ ಮೋಹನ ಕಾತರಕಿ ಸಂವಿಧಾನ ಹಾಗೂ ಬಾಬಾಸಾಹೇಬರ ಸಿದ್ಧಂತಕ್ಕೆ ಅನುಸಾರ ರಾಜಕೀಯ ಮಾಡುತ್ತ ಬಂದಿದ್ದೇನೆ - ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಸ್ಪಷ್ಟನೆ ಅಭಿವೃದ್ಧಿಯ ಸ್ಪಷ್ಟವಾದ ಗುರಿಯೊಂದಿಗೆ ನರೇಂದ್ರ ಮೋದಿ ಸರ್ಕಾರ ಸಾಧನೆ : ಕೇಂದ್ರ ಸಚಿವ ಭೂಪತಿರಾಜ್ ಶ್ರೀನಿವಾಸ ವರ್ಮಾ ಸಾಮರಸ್ಯ ಕೆಡಿಸುವ ಎಂಇಎಸ್‌, ಶಿವಸೇನೆ ನಿಷೇಧಕ್ಕೆ ಕರವೇ ಆಗ್ರಹ ಸುವರ್ಣ ಸೌಧದ ಎದುರು ಅಂತರಾಷ್ಟ್ರೀಯ ಯೋಗ‌ ದಿನಾಚರಣೆ ಸೈಬರ್ ವಂಚನೆಯಿಂದ ಹಣ ಕಳೆದುಹೋಗದಂತೆ ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನದ ಬಿಗಿಕ್ರಮ - ಪ್ರಿಯಾಂಕ ಖರ್ಗೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಲು ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬಿಳಿಮಲೆ ಆಗ್ರಹ ರಕ್ಷಣಾ ಭದ್ರತಾ ದಳಕ್ಕೆ (ಡಿಎಸ್‌ಸಿ) ಮಾಜಿ ಸೈನಿಕರ ನೇಮಕಾತಿ ಮಂಗಾವತಿ :   ಸೇವಾ ನಿವೃತ್ತ ಹಾಗೂ ಪ್ರತಿಭಾ ಸಾಧಕರಿಗೆ ಗೌರವ ಸನ್ಮಾನ 232 ಗ್ರೇಡ್-2 ತಹಶೀಲ್ದಾರ್‌ಗಳಿಗೆ ಗ್ರೇಡ್-1 ತಹಶೀಲ್ದಾರ್ ಹುದ್ದೆಗೆ ಬಡ್ತಿ ಮಹಾದಾಯಿ, ಕೃಷ್ಣೆ, ಕಾವೇರಿ ಜಲ ವಿವಾದ ನಿವಾರಣೆಗೆ ರಾಜ್ಯ ಸರ್ಕಾರದ ಹೆಚ್ಚಿನ ಮುತವರ್ಜಿ ಅಗತ್ಯ : ನ್ಯಾಯವಾದಿ ಮೋಹನ ಕಾತರಕಿ ಸಂವಿಧಾನ ಹಾಗೂ ಬಾಬಾಸಾಹೇಬರ ಸಿದ್ಧಂತಕ್ಕೆ ಅನುಸಾರ ರಾಜಕೀಯ ಮಾಡುತ್ತ ಬಂದಿದ್ದೇನೆ - ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಸ್ಪಷ್ಟನೆ ಅಭಿವೃದ್ಧಿಯ ಸ್ಪಷ್ಟವಾದ ಗುರಿಯೊಂದಿಗೆ ನರೇಂದ್ರ ಮೋದಿ ಸರ್ಕಾರ ಸಾಧನೆ : ಕೇಂದ್ರ ಸಚಿವ ಭೂಪತಿರಾಜ್ ಶ್ರೀನಿವಾಸ ವರ್ಮಾ
21 ಜೂನ್ 2026
ಬೆಳಗಾವಿ ಪಾಲಿಕೆ ಗೊತ್ತುವಳಿ : ಸಂಘಟಣೆಗಳ ಕನ್ನಡಪರ  ಸಂಕಲ್ಪ ನಿರ್ಣಾಯಕ ಹಂತ
📄 ಕರ್ನಾಟಕ ಸುದ್ದಿ
Dr. K N Doddmani · · 37 ವೀಕ್ಷಣೆಗಳು

ಬೆಳಗಾವಿ ಪಾಲಿಕೆ ಗೊತ್ತುವಳಿ : ಸಂಘಟಣೆಗಳ ಕನ್ನಡಪರ  ಸಂಕಲ್ಪ ನಿರ್ಣಾಯಕ ಹಂತ

ಶಾಸಕ ಆಸೀಫ್‌ ಸೇಠ ಅವರು ನಾಮ ನಿರ್ದೇಶಿತ ಸದಸ್ಯರು ಠರಾವು ಮಂಡಿಸಲು ಅವಕಾಶವಿದ್ದರೆ ಪಾಲಿಕೆಯ ಮುಂದಿನ ಸಭೆಯಲ್ಲಿ ನಾನೇ “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂದು ಠರಾವು ಮಂಡಿಸುವುದಾಗಿ ಘೋಷಿಸಿದ್ದಾರೆ.

ಬೆಳಗಾವಿ ಪಾಲಿಕೆ ಗೊತ್ತುವಳಿ : ಸಂಘಟಣೆಗಳ ಕನ್ನಡಪರ  ಸಂಕಲ್ಪ ನಿರ್ಣಾಯಕ ಹಂತ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಸರ್ವಸಾಧಾರಣಾ ಸಭೆಯಲ್ಲಿ ಕರ್ನಾಟಕ ಪರವಾದ, “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ”, “ಗಡಿ ವಿವಾದ ಪರಿಹಾರಕ್ಕೆ ಮಹಾಜನ ಆಯೋಗದ ವರದಿಯೇ ಅಂತಿಮ” ಎಂಬ ಗೊತ್ತುವಳಿಯನ್ನು ಅಂಗೀಕರಿಸಲೇಬೇಕೆಂದು ಬೆಳಗಾವಿ ಜಿಲ್ಲಾ ಕನ್ನಡಪರ ವಿವಿಧ ಸಂಘಟನೆಗಳು ಕಳೆದ ಮೂರ್ನಾಲ್ಕು ತಿಂಗಳಿಂದ ನಡೆಸುತ್ತಿರುವ ಹೋರಾಟ ತೀವ್ರಗೊಳ್ಳುತ್ತ ನಡೆದಿದ್ದು, ಸಭೆಯಲ್ಲಿ ಗೊತ್ತುವಳಿ ಪಾಸಾಗಲೇಬೇಕೆಂದು ದೃಢ ಸಂಕಲ್ಪದೊಂದಿಗೆ ಹೋರಾಟ  ನಡೆಸುತ್ತಿದ್ದು, ಇಂದು ಸಂಜೆ ನಡೆದ ಸಚಿವರ ನೇತೃತ್ವದ ಸಭೆ ನಿರ್ಣಾಯಕ ಹಂತಕ್ಕೆ ತೆಗೆದುಕೊಂಡು ಹೋಗಿದೆ.

ಸಚಿವ ಸತೀಶ್‌ ಜಾರಕಿಹೊಳಿ ನೇತೃತ್ವದಲ್ಲಿ ಜಿಲ್ಲಾ ಆಡಳಿತ ಸಭೆ

ನಿರಂತರ ಒತ್ತಾಯಿಸುತ್ತ ಬಂದ ಸಂಘಟನೆಗಳು ತೀವ್ರ ಹೋರಾಟದ ಎಚ್ಚರಿಕೆ ನೀಡಿದ್ದವು.   ಇಂದಿನ ಗುರುತರ ಬೆಳವಣಿಗೆಯಲ್ಲಿ  ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಭೆಟ್ಟಿ ಮಾಡಿದ ಸಂಘಟನೆ ನಾಯಕರು ಮನವಿ ಸಲ್ಲಿಸಿ  ಗೊತ್ತುವಳಿ ಸ್ವೀಕರಿಸದ ಪಾಲಿಕೆಯ ನಾಡದ್ರೋಹಿ, ಕನ್ನಡ ದ್ರೋಹಿ  ವರ್ತನೆ ಮೇಲೆ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದರು.

ಸ್ವಾಮೀಜಿಗಳ ಬೆಂಬಲ:

ಈ ಮಧ್ಯ ಕನ್ನಡ ಅಸ್ಮಿತೆಯ ಪರಂಪರೆ ಹೊತ್ತ ನಾಗನೂರ ರುದ್ರಾಕ್ಷಿ ಮಠದ  ಶ್ರೀ ಅಲ್ಲಮಪ್ರಭು ಸ್ವಾಮೀಜಿ ಅವರು ಹೋರಾಟಗಾರರಿಗೆ ಶಕ್ತಿ ಸಂವಧರ್ನೆ ಒದಗಿಸಿದರು. ಶ್ರೀ   ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಜಿಲ್ಲೆಯ 20ಕ್ಕೂ ಅಧಿಕ ಸಂಖ್ಯೆಯ ಕನ್ನಡಪರ ಸಂಘಟನೆಗಳು ಪಾಲಿಕೆ ವಿರುದ್ದ ಹೋರಾಟ ನಡೆಸುವ ಬಗ್ಗೆ ಸಭೆ  ನಡೆಸಿ ಗಂಭೀರ ನಿರ್ಧಾರ ತೆಗೆದುಕೊಳ್ಳಲಾಯಿತು.  ಸರ್ವೋಚ್ಛ ನ್ಯಾಯಾಲಯದ ನೆಪ ಹೇಳಿ ನುಚಿಕೊಂಡರೆ ಬಿಡುವುದಿಲ್ಲ. ವ್ಯಾಪಕ ಚಳವಳಿ ನಡೆಸಲಾಗುವುದು. ಬೆಳಗಾವಿಯನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳಲು ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಅಲ್ಲಮಪ್ರಭು ಸ್ವಾಮಿಜಿ ತುಂಬಾ ಗಂಭೀರವಾದ ಹೇಳಿಕೆ ನೀಡಿ, ಸಂಘಟನೆಗಳಿಗೆ ಶಕ್ತಿ ತುಂಬಿದ್ದಾರೆ. ಈ ಮಧ್ಯ ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಗೊತ್ತುವಳಿ ಸ್ವೀಕರಿಸಲು ಪಾಲಿಕೆಗೆ ಗಡುವ ನೀಡಿ ಎಚ್ಚರಿಸಿದ್ದಾರೆ.

ಗಂಭೀರತೆ ಅರಿತ ಸಚಿವರು – ಜಿಲ್ಲಾ ಆಡಳಿತ:

ಗೊತ್ತುವಳಿ ಸ್ವೀಕರಿಸಲು ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಹೋರಾಟದ ಗಂಭೀರತೆಯನ್ನು ಅರಿತ ಸಚಿವ ಸತೀಶ ಜಾರಕಿಹೊಳಿ ಅವರು ಶಾಸಕ ಆಸೀಫ್‌ ಸೇಠ, ಜಿಲ್ಲಾಧಿಕಾರಿ ಮೊಹಮ್ಮದ ರೋಷ್‌, ಪೊಲೀಸ್‌ ಆಯುಕ್ತ ಭೂಷಣ ಗುಲಾಬರಾವ್‌ ಬೋರಸೆ, ಜಿಲ್ಲಾ ಪೊಲೀಸ್‌ ವರಿಷ್ಠಧಿಕಾರಿ ಡಾ. ಕೆ. ರಾಮರಾಜನ್‌, ಪಾಲಿಕೆ ಆಯುಕ್ತ ಕಾರ್ತಿಕ ಎಂ ಮತ್ತು ಕನ್ನಡಪರ ಸಂಘಟನೆಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಗೊತ್ತುವಳಿ ಹಿನ್ನಲೆಯಲ್ಲಿ ಆದ ಬೆಳವಣಿಗೆ ಚರ್ಚೆ ನಡೆದಾಗ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌, ವಿಷಯ ಸರ್ಕಾರದ ಮಟ್ಟಿಗೆ ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಪಾಲಿಕೆ ಮಟ್ಟದಲ್ಲಿಯೇ ಬಗೆಹರಿಸಬಹುದು ಎಂದು ಸೂಚಿಸಿದರು. ವಿಷಯ ಅರಿತ ಶಾಸಕ ಆಸೀಫ್‌ ಸೇಠ ಅವರು ನಾಮ ನಿರ್ದೇಶಿತ ಸದಸ್ಯರು ಠರಾವು ಮಂಡಿಸಲು ಅವಕಾಶವಿದ್ದರೆ ಪಾಲಿಕೆಯ ಮುಂದಿನ ಸಭೆಯಲ್ಲಿ ನಾನೇ “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂದು ಠರಾವು ಮಂಡಿಸುವುದಾಗಿ ಘೋಷಿಸಿದ್ದಾರೆ.

ಶಾಸಕರ ಬೆಳಗಾವಿಪರ ಗಟ್ಟಿ ನಿರ್ಧಾರದಿಂದ ಕನ್ನಡಪರ ಸಂಘಟನೆಗಳು ಸದ್ಯ ನಿರಾಳವಾಗಿದ್ದು, ಮುಂದಿನ ಬೆಳವಣಿಗೆ  ಕಾಯ್ದು ನೋಡಬೇಕಾಗಿದೆ.

ಕನ್ನಡಕ್ಕಿಂತ ರಾಜಕೀಯ ಅಸ್ತಿತ್ವ ಮುಖ್ಯ:

ಬೆಳಗಾವಿ ಪಾಲಿಕೆಯ ಹಿಂದಿನ ಸಭೆಯಲ್ಲಿ ಸದಸ್ಯ ರಮೇಶ ಸೊಂಟಕ್ಕಿ ಅವರು ಠರಾವು ಮಂಡಿಸಲು ಮುಂದಾದಗ ಮಹಾಪೌರರು ತಡೆದು ವಿಷಯ ಸರ್ವೋಚ್ಛ ನ್ಯಾಯಾಲಯದಲ್ಲಿದೆ ಎಂದು ಸೂಚಿಸಿ, ಸರ್ಕಾರಕ್ಕೆ ಪತ್ರ ಬರೆಯುವ ಬಗ್ಗೆ ತಿಳಿಸಿ ನಿಲ್ಲಿಸಿದರು. ಪಾಲಿಕೆಯಲ್ಲಿರುವ  ಬಹುಸಂಖ್ಯಾತ ಕನ್ನಡದ ಸದಸ್ಯರೇ ಇದ್ದು ಅವರಿಗೂ ಗೊತ್ತುವಳಿ ಪಾಸು ಮಾಡುವ ಆಸಕ್ತಿ ಇದೆ. ಆದರೆ,  ಚುನಾವಣೆಯ ಸಂದರ್ಭದಲ್ಲಿ ಈ ಬೆಳವಣಿಗೆಯಿಂದ ಮತ ಕಳೆದು ಹೋದಾವು ಎಂಬ ಆತಂಕ ತುಂಬಲಾಗಿದೆ. ನಿಮ್ಮ ರಾಜಕೀಯ ಬೆಳವಣಿಗೆಯ ಮೇಲೆ ಯಾವುದೇ ಪ್ರತಿಕೂಲ ಬೀರುವುದಿಲ್ಲ, ಗಟ್ಟಿ ನಿರ್ಧಾರ ತೆಗೆದುಕೊಳ್ಳುವಂತೆ  ಕನ್ನಡಪರ ಸಂಘಟನೆಗಳು ಧೈರ್ಯ ತುಂಬುತ್ತ ಬಂದಿವೆ.  ಕನ್ನಡದ ಈ ಸದಸ್ಯರು ಮುಂಬರುವ ಸಭೆಯಲ್ಲಿ ರಾಜಕೀಯ ಬದಿಗಿಟ್ಟು ದೊರೆತ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುತ್ತಾರೆ ಎಂಬ ವಿಶ್ವಾಸವನ್ನು ಕನ್ನಡಪರ ಸಂಘಟನೆಗಳು ಆಶಾಭಾವ ವ್ಯಕ್ತಪಡಿಸಿವೆ.

ಸೂಪರ್‌ ಸೀಡ್‌ :

ಗೊತ್ತುವಳಿ ಪಾಸ್‌ ಒತ್ತಾಯವನ್ನು ಅರಿತ ಎಂಈಎಸ್‌ ಕಾರ್ಯಕರ್ತರು ತಳಮಳಕ್ಕೆ ಒಳಗಾಗಿ, ಪಾಲಿಕೆಯನ್ನು ಸರ್ಕಾರ ಸೂಪರ್‌ ಸೀಡ್‌ ಮಾಡುತ್ತದೆ ಎಂದು  ಹೇಳಿಕೆ ನೀಡಿ ತೃಪ್ತಿ ಪಟ್ಟುಕೊಂಡಿದ್ದಾರೆ.

**

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ಸೈಬರ್ ವಂಚನೆಯಿಂದ ಹಣ ಕಳೆದುಹೋಗದಂತೆ ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನದ ಬಿಗಿಕ್ರಮ - ಪ್ರಿಯಾಂಕ ಖರ್ಗೆ ಕರ್ನಾಟಕ ಸುದ್ದಿ

ಸೈಬರ್ ವಂಚನೆಯಿಂದ ಹಣ ಕಳೆದುಹೋಗದಂತೆ ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನದ ಬಿಗಿಕ್ರಮ - ಪ್ರಿಯಾಂಕ ಖರ್ಗೆ

ತಂತ್ರಜ್ಞಾನ ಹಾಗೂ ದಕ್ಷ ಅಧಿಕಾರಿಗಳ ಸಮಯೋಚಿತ ಕ್ರಮದಿಂದಾಗಿ ಕರ್ನಾಟಕವು ಸೈಬರ್ ವಂಚಕರ ಜಾಲವನ್ನು ಭೇದಿಸುವಲ್ಲಿ ಮತ್ತು ಸಾರ್ವಜನಿಕರ ದುಡಿಮೆಯ ಹಣವನ್ನು ರಕ್ಷಿಸುವಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿ ನಿಂತಿದೆ. ರಾಜ್ಯದ ಪೊಲೀಸರು ಬಳಸುತ್ತಿರುವ ವೈರ್‌ಲೆಸ್‌ ವ್ಯವಸ್ಥೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಮತ್ತಷ್ಟು ಸದೃಢಗೊಳಿಸುವುದು ನಮ್ಮ ಉದ್ದೇಶವಾಗಿದೆ.

Admin
ಕನ್ನಡಕ್ಕೆ ಮೊದಲ ಆದ್ಯತೆ ನೀಡಲು ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬಿಳಿಮಲೆ ಆಗ್ರಹ ಕರ್ನಾಟಕ ಸುದ್ದಿ

ಕನ್ನಡಕ್ಕೆ ಮೊದಲ ಆದ್ಯತೆ ನೀಡಲು ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬಿಳಿಮಲೆ ಆಗ್ರಹ

ಸಂಸ್ಥೆಯ ಪ್ರತಿನಿಧಿಗಳು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾಗರಿಕರಿಗೆ ಸಂಬಂಧಿಸಿದ ಯಾವುದೇ ಮಾಹಿತಿ, ಅರ್ಜಿ ಅಥವಾ ದಾಖಲೆಗಳನ್ನು ಆಂಗ್ಲ ಭಾಷೆಯಲ್ಲಿ ನಿರೀಕ್ಷಿಸಿದಾಗ ನಾಗರಿಕರು ಅದನ್ನು ಕನ್ನಡದಲ್ಲಿಯೇ ಒದಗಿಸಲು ಆಗ್ರಹಿಸಬೇಕೆಂದು ನಾಡಿನ ಜನರಿಗೆ ಕರೆ

Admin