ಬ್ರೇಕಿಂಗ್
ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ
19 ಸೆಪ್ಟೆಂ 2026
ಸಾಹಿತಿ ದೇವನೂರು ಮಹಾದೇವರನ್ನು ಭೆಟ್ಟಿಯಾದ ಸಚಿವ ಯತೀಂದ್ರ ಸಿದ್ಧರಾಮಯ್ಯ
🏛️ ರಾಜಕೀಯ - ಆಡಳಿತ
Dr. K N Doddmani · · 103 ವೀಕ್ಷಣೆಗಳು

ಸಾಹಿತಿ ದೇವನೂರು ಮಹಾದೇವರನ್ನು ಭೆಟ್ಟಿಯಾದ ಸಚಿವ ಯತೀಂದ್ರ ಸಿದ್ಧರಾಮಯ್ಯ

ಸಚಿವನಾದ ಬಳಿಕ ಅವರನ್ನು ಭೇಟಿಯಾಗಿ ಕೆಲ ಕ್ಷಣಗಳನ್ನು ಅವರೊಂದಿಗೆ ಕಳೆಯುವ ಜೊತೆಗೆ, ಪ್ರಸ್ತುತ ವಿದ್ಯಮಾನಗಳ ಕುರಿತು ಸಕಾರಾತ್ಮಕ ವಿಚಾರ ವಿನಿಮಯ ನಡೆಸಿದ್ದು ನಿಜಕ್ಕೂ ಸಂತಸ ಮತ್ತು ತೃಪ್ತಿ ನೀಡಿತು ಎಂದಿದ್ದಾರೆ.

ಸಾಹಿತಿ ದೇವನೂರು ಮಹಾದೇವರನ್ನು ಭೆಟ್ಟಿಯಾದ ಸಚಿವ ಯತೀಂದ್ರ ಸಿದ್ಧರಾಮಯ್ಯ

**

ಹಿರಿಯ ಸಾಹಿತಿ, ಚಿಂತಕ ಹಾಗೂ ಕನ್ನಡದ ಸಾಕ್ಷಿ ಪ್ರಜ್ಞೆ ಎಂದು ಗುರುತಿಸಲ್ಪಡುವ ದೇವನೂರು ಮಹಾದೇವ ಅವರನ್ನು ನಗರಾಭಿವೃದ್ಧಿ ಖಾತೆ ಸಚಿವ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪುತ್ರ ಯತೀಂದ್ರ ಸಿದ್ಧರಾಮಯ್ಯ ಅವರು ಭೆಟ್ಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು,

ಮೈಸೂರಿನಲ್ಲಿ ಇಂದು ಹಿರಿಯ ಸಾಹಿತಿ ನನ್ನ ನೆಚ್ಚಿನ ಲೇಖಕರು ಆದ ದೇವನೂರು ಮಹಾದೇವ ಅವರನ್ನು ಭೇಟಿ ಮಾಡಿ, ಅವರ ಕುಶಲೋಪರಿ ವಿಚಾರಿಸುವ ಅವಕಾಶ ದೊರೆಯಿತು ಎಂದು ತಿಳಿಸಿದ್ದಾರೆ.

ನಮ್ಮಿಬ್ಬರ ಆತ್ಮೀಯ ಸಂಬಂಧಕ್ಕೆ ಹಲವು ವರ್ಷಗಳ ಸಾಂಗತ್ಯವಿದೆ. ಸಾಮಾಜಿಕ ನ್ಯಾಯ, ಮಾನವೀಯ ಮೌಲ್ಯಗಳು ಹಾಗೂ ಪ್ರಜಾಪ್ರಭುತ್ವದ ಆಶಯಗಳ ಕುರಿತು ಅವರಿಂದ ಪಡೆದ ಮಾರ್ಗದರ್ಶನ ನನ್ನ ಸಾರ್ವಜನಿಕ ಬದುಕಿಗೆ ಸದಾ ಪ್ರೇರಣೆಯಾಗಿದೆ.

ಸಚಿವನಾದ ಬಳಿಕ ಅವರನ್ನು ಭೇಟಿಯಾಗಿ ಕೆಲ ಕ್ಷಣಗಳನ್ನು ಅವರೊಂದಿಗೆ ಕಳೆಯುವ ಜೊತೆಗೆ, ಪ್ರಸ್ತುತ ವಿದ್ಯಮಾನಗಳ ಕುರಿತು ಸಕಾರಾತ್ಮಕ ವಿಚಾರ ವಿನಿಮಯ ನಡೆಸಿದ್ದು ನಿಜಕ್ಕೂ ಸಂತಸ ಮತ್ತು ತೃಪ್ತಿ ನೀಡಿತು ಎಂದಿದ್ದಾರೆ.

ಈ ಹಿಂದಿ ಸಿದ್ಧರಾಮಯ್ಯ ಸಹಿತ ತಾವು ಮುಖ್ಯಮಂತ್ರಿಯಾದಾಗ ದೇವನೂರು ಮಹಾದೇವ ಅವರನ್ನು ಕಂಡು ಮಾತನಾಡಿಸಿದ್ದರು. ರೈತ ಹೋರಾಟಗಾರ ಎಂ.ಡಿ.‌ನಂಜುಂಡಸ್ವಾಮಿ ಅವರ ಗರಡಿಯಲ್ಲಿ ಪಳಗಿದ ಇವರು ಮೈಸೂರು ಸೇರಿದಂತೆ ರಾಜ್ಯದ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಹೀಗಾಗಿ ಸಿದ್ಧರಾಮಯ್ಯನವರ ಪುತ್ರ ಯತೀಂದ್ರ ಅವರೂ ದೇವನೂರು ಅವರೊಂದಿಗೆ ಒಡನಾಟ ಹೊಂದಿದ್ದು, ಪ್ರಸ್ತುತ ಸಚಿವ ಸ್ಥಾನ ವಹಿಸಿಕೊಂಡ ನಂತರ ತಮ್ಮ ಕಾರ್ಯತತ್ಪರತೆಯ ಮಾರ್ಗದರ್ಶನದ ಹಿನ್ನೆಲೆಯಲ್ಲಿ ಭೆಟ್ಟಿಯಾದ ಹೊಸ ತಲೆಮಾರಿನ ರಾಜಕಾರಣಿ. ಈ ಹಿಂದೆ ಮಧು ಬಂಗಾರಪ್ಪ, ಸಚಿವ ಎಚ್.ಸಿ. ಮಹಾದೇವಪ್ಪ, ಸತೀಶ್ ಜಾರಕಿಹೊಳಿ ಅವರೂ ದೇವರ ಮಹಾದೇವರನ್ನು ಅವರ ಮನೆಗೆ ತೆರಳಿ ಸಮಾಲೋಚನೆ ನಡೆಸಿದ್ದಾರೆ.

ಸಾಹಿತಿಗಳು ರಾಜಕಾರಣಿಗಳೊಂದಿಗೆ ಸಂಬಂಧ ಇಂದು ಸಾಮಾನ್ಯವಾಗಿದ್ದು, ಬಹಳಷ್ಟು ಬರಹಗಾರರು ರಾಜಕಾರಣಿಗಳೊಂದಿಗೆ ಬಹಿರಂಗವಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ಉಳಿದವರಂತೆ ದೇವನೂರು ಪ್ರಭುತ್ವದ ಬಾಲಂಗೂಜಿ ಆಗದ ಜನಪರ ಅಸ್ಮಿತೆ ಹೊಂದಿದ ಸ್ವಾಭಿಮಾನಿ ಎಂದು ಸಾಹಿತಿ - ಸಾಂಸ್ಕೃತಿಕ ವಲಯದಲ್ಲಿ ಗುರುತಿಸಲಾಗುತ್ತದೆ.‌ ಪ್ರಭುತ್ವದ ಒಡನಾಟವಿದ್ದರೂ ವೈಯಕ್ತಿಕ ಸ್ಥಾನ -ಮಾನದ ಅವಕಾಶವಾದಕ್ಕೆ ಹಪಹಪಿಸಿದವರಲ್ಲ. ಜನಪರ ವಿಚಾರಗಳಿಗೆ ಪ್ರಾಧಾನ್ಯತೆ ಹೊಂದಿರುವದರಿಂದ ಪ್ರಗತಿಪರ ವಿಚಾರಧಾರೆ ರಾಜಕಾರಣಿಗಳು ಸಹಜ ದೇವನೂರು ಭೆಟ್ಟಿ ಸಹಜವಾಗಿರುತ್ತದೆ.

**

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

 ಅನ್ಯರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದು ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿದೆ : ಬಿಜೆಪಿ ರಾಜಕೀಯ - ಆಡಳಿತ

ಅನ್ಯರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದು ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿದೆ : ಬಿಜೆಪಿ

ವಿವಿಧ ರಾಜ್ಯ ಪ್ರಯೋಜನಗಳು, ಸರ್ಕಾರಿ ದಾಖಲೆಗಳು, ಶೈಕ್ಷಣಿಕ ಪ್ರವೇಶಗಳು, ಉದ್ಯೋಗಾವಕಾಶಗಳು ಮತ್ತು ಇತರ ಅರ್ಹತೆಗಳನ್ನು ಪಡೆಯಲು ಇದನ್ನು ಅವಲಂಬಿಸುವ ಅಪಾಯವಿದೆ -ಎ ಕಳವಳ

Admin