ಬ್ರೇಕಿಂಗ್
ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ
19 ಸೆಪ್ಟೆಂ 2026
ರಾಯಬಾಗ ತಾಲ್ಲೂಕಿನ 39 ಕೆರೆ ತುಂಬಿಸುವ ಮಹತ್ವಾಕಾಂಕ್ಷೆಯ ಯೋಜನೆ ಯಶಸ್ವಿ ಅನುಷ್ಠಾನ ಪ್ರಗತಿ - ಸತೀಶ್ ಜಾರಕಿಹೊಳಿ
🌾 ಕೃಷಿ
Dr. K N Doddmani · · 54 ವೀಕ್ಷಣೆಗಳು

ರಾಯಬಾಗ ತಾಲ್ಲೂಕಿನ 39 ಕೆರೆ ತುಂಬಿಸುವ ಮಹತ್ವಾಕಾಂಕ್ಷೆಯ ಯೋಜನೆ ಯಶಸ್ವಿ ಅನುಷ್ಠಾನ ಪ್ರಗತಿ - ಸತೀಶ್ ಜಾರಕಿಹೊಳಿ

ರೈತರ ಮುಖದಲ್ಲಿ ಹೊಸ ಭರವಸೆ ಮೂಡಿಸಿದ್ದು, ಸ್ಥಳೀಯರು ಸಚಿವರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ರೈತರು ತಮ್ಮ ಶ್ರಮದ ಪ್ರತೀಕವಾಗಿ ಬೆಳೆದ ಸೌತೆಕಾಯಿ ಬೆಳೆಯನ್ನು ಸಚಿವರಿಗೆ ಪ್ರೀತಿಪೂರ್ವಕವಾಗಿ ನೀಡಿ ತಮ್ಮ ಗೌರವವನ್ನು ವ್ಯಕ್ತಪಡಿಸಿದರು

ಅಸ್ಮಿತೆ ವರದಿ, ಅ.01: ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದ ಸಮೀಪದ ಕೃಷ್ಣಾ ನದಿಯಿಂದ ರಾಯಬಾಗ ತಾಲೂಕಿನ 39 ಕೆರೆಗಳಿಗೆ ನೀರು ತುಂಬುವ ಮಹತ್ವಾಕಾಂಕ್ಷಿ ಹಾಗೂ ದೂರದೃಷ್ಟಿಯ ಯೋಜನೆ ಭರದ ರೂಪದಲ್ಲಿ ಕಾಮಗಾರಿ ಪ್ರಗತಿಯಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಯೋಜನೆಯ ಅನುಷ್ಠಾನದ ಹಿನ್ನೆಲೆಯಲ್ಲಿ ಇಂದು ರಾಯಬಾಗ ತಾಲ್ಲೂಕಿನ ಹುಬ್ಬರವಾಡಿ, ಮೇಖಳಿ, ದೇವನಕಟ್ಟಿ ಹಾಗೂ ಮಾವಿನಹೊಂಡ ಕೆರೆಗಳಿಗೆ ಭೇಟಿ ನೀಡಿ ಕಾಮಗಾರಿ ಹಾಗೂ ನೀರು ತುಂಬುವ ಪ್ರಗತಿಯನ್ನು ಪರಿಶೀಲಿಸಿ ಮಾಧ್ಯಮಕ್ಕೆ ಮಾಹಿತಿ ನೀಡಿದರು.

ಈ ಹಿಂದೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಯೋಜನೆಗೆ ಮಂಜೂರಾತಿ ದೊರೆತಿತ್ತು. ಅನೇಕ ಅಡೆತಡೆಗಳಿಂದಾಗಿ ಯೋಜನೆಯ ಅನುಷ್ಠಾನ ವಿಳಂಭವಾಗಿತ್ತು. ಪ್ರಸ್ತುತ ಮತ್ತೇ ಚಾಲನೆ ನೀಡಲಾಗಿದೆ.‌ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿದರೆ ಸುತ್ತಲಿನ ಹಳ್ಳಿಗಳ ದನ ಜಾನುವಾರ ಹಾಗೂ ಕೃಷಿ ಕಾರ್ಯಕ್ಕೆ ಹೆಚ್ಚು ಅನುಕೂಲವಾಗಲಿದೆ. ಜೊತೆಗೆ ಅಂತರ್ಜಲದ ಮಟ್ಟವೂ ಹೆಚ್ಚಾಗಲಿದೆ ಎಂದು ತಿಳಿಸಿದರು.

ಸಚಿವರ ವಿಶೇಷ ಕಾಳಜಿಯಿಂದಾಗಿ ಯೋಜನೆ ಯಶಸ್ಸು ಸಾಧಿಸಿ ಕೆರೆಗಳು ನೀರಿನಿಂದ ಭರ್ತಿಯಾಗುತ್ತಿರುವುದು ರೈತರ ಮುಖದಲ್ಲಿ ಹೊಸ ಭರವಸೆ ಮೂಡಿಸಿದ್ದು, ಸ್ಥಳೀಯರು ಸಚಿವರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ರೈತರು ತಮ್ಮ ಶ್ರಮದ ಪ್ರತೀಕವಾಗಿ ಬೆಳೆದ ಸೌತೆಕಾಯಿ ಬೆಳೆಯನ್ನು ಸಚಿವರಿಗೆ ಪ್ರೀತಿಪೂರ್ವಕವಾಗಿ ನೀಡಿ ತಮ್ಮ ಗೌರವವನ್ನು ವ್ಯಕ್ತಪಡಿಸಿದರು.

ರೈತರ ಸಮೃದ್ಧಿ, ನೀರಿನ ಭದ್ರತೆ ಮತ್ತು ಶಾಶ್ವತ ಅಭಿವೃದ್ಧಿಯತ್ತ ನಮ್ಮ ಬದ್ಧತೆ ನಿರಂತರವಾಗಿರಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ತುಂಬಿದ ಜೀವಜಲ : ಹಸಿರಾದ ಇಳೆ, ಖುಷಿಗೊಂಡ ರೈತ ಕೃಷಿ

ತುಂಬಿದ ಜೀವಜಲ : ಹಸಿರಾದ ಇಳೆ, ಖುಷಿಗೊಂಡ ರೈತ

ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿಯಮಿತ ಮಳೆಯಾಗುತ್ತಿದ್ದಂತೆ ಕೃಷ್ಣಾ ಹಾಗೂ ಅದರ ಉಪ ನದಿಗಳಾದ ವೇದಗಂಗಾ, ದೂದಗಂಗಾ ನದಿಗಳು ಮೈದುಂಬಿಕೊಂಡು ಹರಿಯಲು ಪ್ರಾರಂಭಿಸುವುದು ಪ್ರಕೃತಿಕ ಸಹಜ ಕ್ರಿಯೆ. ಇದರಿಂದ ಬೆಳಗಾವಿ ಜಿಲ್ಲೆಯ ಕೆಳಹಂತದ ಸಣ್ಣ ಪುಟ್ಟ ಸೇತುವೆಗಳು ನೀರಿನಲ್ಲಿ ಮುಳುಗುತ್ತವೆ. ನದಿಪಾತ್ರದಲ್ಲಿರುವ ದೇವಾಲಯಗಳಲ್ಲೂ ನೀರು ಪ್ರವೇಶಿಸುತ್ತದೆ. ಇದು ಪ್ರತಿ ವರ್ಷ ನಡೆಯುವ ಸಹಜತೆ. ಅನ್ನ ನೀಡುವ ರೈತರ ಜೀವಕಳೆ ತುಂಬಿ ಕ್ರಿಯೆಯನ್ನು ಸಂಭ್ರಮಿಸಿದರೆ ರೈತ ಇನ್ನಷ್ಟು ಉತ್ಸಾಭರಿತನಾಗುತ್ತಾನೆ.

Admin