ಬ್ರೇಕಿಂಗ್
ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ
19 ಸೆಪ್ಟೆಂ 2026
ಮಾದರಿ ಮಾವು ಬೆಳೆದ ತಜ್ಞ ವೈದ್ಯ ಡಾಕ್ಟರ್ ಸಮೀರ್ ನಾಯಿಕ  ರೈತಾಪಿಗೆ ಮಾದರಿ ಪ್ರಯೋಗ
🌾 ಕೃಷಿ
Dr. K N Doddmani · · 99 ವೀಕ್ಷಣೆಗಳು

ಮಾದರಿ ಮಾವು ಬೆಳೆದ ತಜ್ಞ ವೈದ್ಯ ಡಾಕ್ಟರ್ ಸಮೀರ್ ನಾಯಿಕ ರೈತಾಪಿಗೆ ಮಾದರಿ ಪ್ರಯೋಗ

ಮಾದರಿ ಮಾವು ಬೆಳೆದ ತಜ್ಞ ವೈದ್ಯ ಡಾಕ್ಟರ್ ಸಮೀರ್ ನಾಯಿಕ ರೈತಾಪಿಗೆ ಮಾದರಿ ಪ್ರಯೋಗ

* ಇಸ್ರೇಲ್ ಮಾದರಿಯಲ್ಲಿ ಸ್ವಾದೀಷ್ಟ ವೈಶಾಲಿ ಕೇಸರ ಹಣ್ಣುಗಳು ಬಂಗಾರಗಿಂತ ಸುಂದರ

* ಹಣ್ಣಿಗೆ ಅಮ್ಮನ ಹೆಸರು - ವೈಶಾಲಿ ಕೇಸರ ಬ್ರ್ಯಾಂಡ್

* ಬೆಳಗಾವಿ ಸಮೀಪದ ನಂದಿಹಳ್ಳಿ ಗ್ರಾಮದ ಜಮೀನಿನಲ್ಲಿ‌ ಮಾವಿನ ನೂತನ ಪ್ರಯೋಗ

ಬೆಳಗಾವಿಯ ಡಾಕ್ಟ್ರ್ ಸಮೀರ ನಾಯಿಕ ಎಂಬುವರು ವೃತ್ತಿಯಲ್ಲಿ ಆರ್ಯುವೇಧಿಕ ತಜ್ಞ ವೈದ್ಯ ಹಾಗೂ ಪ್ರಾಧ್ಯಾಪಕರಾಗಿದ್ದರೂ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಆಧುನಿಕ ವ್ಯವಸಾಯಿ ಪದ್ಧತಿಯನ್ನು ಅನುಸರಿಸಿ ಬಂಗಾರಗಿಂತ ಸುಂದರವಾದ ಸ್ವಾದೀಷ್ಟದಿಂದ ಕೂಡಿದ ಕೇಸರ ಮಾದರಿ ಹಣ್ಣು ಬೆಳೆಯುವುದರ ಮೂಲಕ ಒಬ್ಬ ಮಾದರಿ ರೈತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬೆಳಗಾವಿಯ ಹೊರವಲಯದ ನಂದಿಹಳ್ಳಿ ಸಮೀಪ ತಮ್ಮ ಐದು ಏಕರೆ ಜಮೀನಲಿನ ನಾಲ್ಕು ಎಕರೆಯಲ್ಲಿ ೨೦೧೯ರಿಂದ ಸಮೃದ್ಧವಾದ ಮಾವು ಬೆಳೆದು ಇದುವರೆಗೆ ಉತ್ತಮ ಗುಣಮಟ್ಟದ ಮಾವುಗಳ ಮೂರು ಫಸಲು ಪಡೆದು ಲಾಭ ಪಡೆದಿದ್ದಾರೆ. ಡಾಕ್ಟರ್ ಸಮೀರ ಅವರು, ಸಾಂಪ್ರದಾಯಿಕ ಮಾವು ಬೆಳೆ ಪದ್ಧತಿಯನ್ನು ಅನುಸರಿಸದೆ ಆಧುನಿಕ ವೈಜ್ಞಾನಿಕ ರೀತಿಯನ್ನು ಅನುಸರಿಸಿ, ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಪದ್ಧತಿಯನ್ನು ಅನುಸರಿಸಿ ಗಿಡಗಳಲ್ಲಿಯೇ ಮಾವುಗಳನ್ನು ಹಣ್ಣಾಗಿಸಿ ರಸಭರಿತ ಹಣ್ಣುಗಳ ಸೇವನೆಗೆ ಅವಕಾಶ ಕಲ್ಪಸಿದ್ದಾರೆ. ತಾವು ಬೆಳೆದ ಅತ್ಯಾಕರ್ಷಕ ಹಣ್ಣುಗಳಿಗೆ ತಮ್ಮ ತಾಯಿಯ ಹೆಸರು ವೈಶಾಲಿ ಎಂಬ ಹೆಸರಿನಿಂದ ಗುರುತಿಸಿ ವೈಶಾಲಿ ಬ್ಯಾçಂಡ್ ಮಾಡಿದ್ದಾರೆ.

ಮಾವು ಬೆಳೆಯ ವೈಜ್ಞಾನಿಕ ತಿಳುವಳಿಕೆ ಸಂಪಾಧಿಸಿಕೊAಡ ಸಮೀರ್ ನಾಯಿಕ ಅವರು, ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್ ಹತ್ತಿರದ ಸಾಯಿ ಸಸಿಗಳ ಬೆಳೆವಣಿಗೆಯ ಕೇಂದ್ರದಿAದ ಸಸಿಗಳನ್ನು ತಂದು, ಗಿಡದಿಂದ ಗಿಡಕ್ಕೆ ೫ ಅಡಿ ಅಂತರ ಕಾಯ್ದುಕೊಂಡು, ಸಾಲದಿಂದ ಸಾಲಕ್ಕೆ ೧೨ ಅಡಿ ಅಂತರದಲ್ಲಿ ಎಕರೆಗೆ ೭೦೦ ಸಸಿಗಳನನ್ನು ನೆಟ್ಟು ಬೆಳೆಸಿದ್ದಾರೆ. ಮಧ್ಯಾಹ್ನದವರೆಗೆ ಪ್ರಾಧ್ಯಾಪಕ ವೃತ್ತಿ ನಿರ್ವಹಿಸಿ, ನಂತರ ಕತ್ತಲೆ ಆವರಿಸುವವರೆಗೆ ಕೃಷಿ ಕಾರ್ಮಿಕರೊಂದಿಗೆ ತಾವೂ ಬೆರೆತು ತುಂಬಾ ಆರೈಕೆಯಿಂದ ಕೃಷಿ ಕೆಲಸ ನಿರ್ವಹಿಸುವ ಇವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಏಕಕಾಲದಕ್ಕೆ ೨ ಸಾವಿರ ೮೦೦ ಮಾವಿನ ಗಿಡಗಳನ್ನು ಬೆಳೆಸಿದ್ದಾರೆ. ಗಿಡಗಳಲ್ಲಿ ಸುಮಾರು ೯೦ ಗ್ರಾಮದಷ್ಟು ಮಾವು ಬೆಳೆದಾಗ ಪ್ರತಿಯೊಂದು ಕಾಯಿಗೂ ಯಾವುದೇ ರೀತಿ ಕೀಟಬಾದೆ ಉಂಟಾಗಿ ಹಣ್ಣು ಕೆದಿರಲಿ ಎಂದು ಸುಮಾರು ೫೦ ರಿಂದ ೫೫ ದಿನಗಳ ವರೆಗೆ ಕಾಗದ ಚೀಲಗಳಿಂದ ಮುಚ್ಚಿ ಕಟ್ಟಲಾಗುತ್ತದೆ. ಮಾಗುವಿಕೆಯ ಕೊನೆ ಹಂತು ತಲುಪಿದಾಗ ಚೀಲ ತೆಗೆದು ಕಟಾವು ಮಾಡಿ ಕಾಗದಲ್ಲಿಯೇ ಆರೈಕೆಯಲ್ಲಿ ಬಾಕ್ಸ್ ಮಾಡಿ ರವಾನಿಸಲಾಗುತ್ತದೆ. ಹೀಗೆ ರವಾನಿಸಿದ ಹಣ್ಣುಗಳು ಎಂಟು ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಹಣ್ಣಾಗಿ ಮತ್ತೆ ೧೦ ದಿನಗಳ ವರೆಗೆ ಬಾಳಿಕೆ ಬರುತ್ತವೆ. ನೋಡಲು ಬಂಗಾರಗಿAತಲೂ ಸುಂದರವಾದ ಸಮೀರ ನಾಯಿಕ ಅವರ ವೈಶಾಲಿ ಬ್ರಾö್ಯಂಡ್ ಮಾವು ಎಂಥವರ ಬಾಯಿಯಲ್ಲೂ ನೀರು ತರಿಸುತ್ತವೆ.

ಸಸಿಗಳನ್ನು ನೆಟ್ಟ ಮೂರನೇ ವರ್ಷದಲ್ಲಿ ಸುಮಾರು ಮೂರುವರೆ ಟನ್ ಬೆಳೆದು, ನಂತರ ೮ಟನ್, ಮೂರನೇ ಫಸಲು ೧೬ ಟನ್ ಮಾವು ಪಡೆದು ಈ ವರ್ಷ ಸುಮಾರು ೨೫ ಟನ್ ಫಲು ಪಡೆದುಕೊಂಡಿದ್ದಾರೆ. ಈ ವರ್ಷ ಸುಮಾರು ೧೦ ಲಕ್ಷ ರೂಪಾಯಿಗಳ ಬೆಳೆಗೆ ಖರ್ಚು ಮಾಡಿದ್ದು, ೨೫ ಲಕ್ಷ ರೂಪಾಯಿಗಳ ಆದಾಯ ನಿರೀಕ್ಷಿಸಿದ್ದಾರೆ. ಸುಮಾರು ೧೫ ಲಕ್ಷ ಲಾಭ ಈ ವರ್ಷ ಸಿಗಬಹುದು ಎನ್ನುತ್ತಾರೆ. ಮಾರಾಟಗಾರರೇ ಸ್ವತಃ ತೋಟಕ್ಕೆ ಆಗಮಿಸಿ ಹಣ್ಣುಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ. ವೈಶಾಲಿ ಬ್ರಾö್ಯಂಡ್ ಮಾವು ವಿದೇಶದಲ್ಲೂ ಸ್ವಾಧ ಪಡೆದುಕೊಂಡಿದೆ.

ಆಧುನಿಕ ಕೃಷಿ ಪದ್ಧತಿ ಅನುಸರಿಸಿ ರೈತ ಮಣ್ಣಲ್ಲಿ ಪ್ರೀತಿಯಿಂದ ದುಡಿದರೆ ಒಳ್ಳೆಯ ಲಾಭ ಪಡೆಯಬಹುದು ಎನ್ನುವುದಕ್ಕೆ ಡಾಕ್ಟರ್ ಸಮೀರ ನಾಯಿಕ ಮಾದರಿ ರೈತರಿಗೆ ನಿದರ್ಶನ ಒದಗಿಸಿದ್ದಾರೆ.

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ರಾಯಬಾಗ ತಾಲ್ಲೂಕಿನ 39 ಕೆರೆ ತುಂಬಿಸುವ ಮಹತ್ವಾಕಾಂಕ್ಷೆಯ ಯೋಜನೆ ಯಶಸ್ವಿ ಅನುಷ್ಠಾನ ಪ್ರಗತಿ - ಸತೀಶ್ ಜಾರಕಿಹೊಳಿ ಕೃಷಿ

ರಾಯಬಾಗ ತಾಲ್ಲೂಕಿನ 39 ಕೆರೆ ತುಂಬಿಸುವ ಮಹತ್ವಾಕಾಂಕ್ಷೆಯ ಯೋಜನೆ ಯಶಸ್ವಿ ಅನುಷ್ಠಾನ ಪ್ರಗತಿ - ಸತೀಶ್ ಜಾರಕಿಹೊಳಿ

ರೈತರ ಮುಖದಲ್ಲಿ ಹೊಸ ಭರವಸೆ ಮೂಡಿಸಿದ್ದು, ಸ್ಥಳೀಯರು ಸಚಿವರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ರೈತರು ತಮ್ಮ ಶ್ರಮದ ಪ್ರತೀಕವಾಗಿ ಬೆಳೆದ ಸೌತೆಕಾಯಿ ಬೆಳೆಯನ್ನು ಸಚಿವರಿಗೆ ಪ್ರೀತಿಪೂರ್ವಕವಾಗಿ ನೀಡಿ ತಮ್ಮ ಗೌರವವನ್ನು ವ್ಯಕ್ತಪಡಿಸಿದರು

Admin
ತುಂಬಿದ ಜೀವಜಲ : ಹಸಿರಾದ ಇಳೆ, ಖುಷಿಗೊಂಡ ರೈತ ಕೃಷಿ

ತುಂಬಿದ ಜೀವಜಲ : ಹಸಿರಾದ ಇಳೆ, ಖುಷಿಗೊಂಡ ರೈತ

ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿಯಮಿತ ಮಳೆಯಾಗುತ್ತಿದ್ದಂತೆ ಕೃಷ್ಣಾ ಹಾಗೂ ಅದರ ಉಪ ನದಿಗಳಾದ ವೇದಗಂಗಾ, ದೂದಗಂಗಾ ನದಿಗಳು ಮೈದುಂಬಿಕೊಂಡು ಹರಿಯಲು ಪ್ರಾರಂಭಿಸುವುದು ಪ್ರಕೃತಿಕ ಸಹಜ ಕ್ರಿಯೆ. ಇದರಿಂದ ಬೆಳಗಾವಿ ಜಿಲ್ಲೆಯ ಕೆಳಹಂತದ ಸಣ್ಣ ಪುಟ್ಟ ಸೇತುವೆಗಳು ನೀರಿನಲ್ಲಿ ಮುಳುಗುತ್ತವೆ. ನದಿಪಾತ್ರದಲ್ಲಿರುವ ದೇವಾಲಯಗಳಲ್ಲೂ ನೀರು ಪ್ರವೇಶಿಸುತ್ತದೆ. ಇದು ಪ್ರತಿ ವರ್ಷ ನಡೆಯುವ ಸಹಜತೆ. ಅನ್ನ ನೀಡುವ ರೈತರ ಜೀವಕಳೆ ತುಂಬಿ ಕ್ರಿಯೆಯನ್ನು ಸಂಭ್ರಮಿಸಿದರೆ ರೈತ ಇನ್ನಷ್ಟು ಉತ್ಸಾಭರಿತನಾಗುತ್ತಾನೆ.

Admin