ಬ್ರೇಕಿಂಗ್
ಕಾರ್ಗಿಲ್ ವಿಜಯೋತ್ಸವ : ಮರಾಠಾ ಲಘು ಪದಾತಿದಳದ ಸೈನಿಕರ ಸಾಹಸ ಸುವರ್ಣಾಕ್ಷರ ಕಾರ್ಗಿಲ್‌ ವಿಜಯೋತ್ಸವ ನಿಮಿತ್ತ ಬೈಕ್‌ ರ್ಯಾಲಿ ವಿಶ್ವದ TEDx ಭಾಷಣಗಾರ್ತಿ ಗಿನ್ನೆಸ್ ದಾಖಲೆ ಅರ್ನಾ ಜೇವನಗೌಡರಿಗೆ ಜಿಲ್ಲಾ ಆಡಳಿತ ಸನ್ಮಾನ ಮೌಂಟ್ ಎವರೆಸ್ಟ್ ಏರಿದ ಸಂತೋಷ್ ಹಾಗೂ ಚಿನ್ಮಯಿಗೆ ಗೌರವ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳನ್ನು ಕಡ್ಡಾಯವಾಗಿ ದತ್ತು ತೆಗೆದುಕೊಳ್ಳಲೇಬೇಕು, ಇಲ್ಲಂದ್ರೆ ಶುಲ್ಕ ಕಡಿತ : ಮುಖ್ಯಮಂತ್ರಿ ಎಚ್ಚರಿಕೆ ಸರ್ಕಾರಿ ಶಾಲೆಗಳನ್ನು ಉದ್ಯಮಿಗಳು ದತ್ತಕ ತೆಗೆದುಕೊಳ್ಳಬಹುದು : ಸಿಇಓ ಬೆಳಗಾವಿ ಜಿಲ್ಲೆಯ 175 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ  ಅಭಿವೃದ್ಧಿ ಪಡಿಸಲು ಸರ್ಕಾರ ನಿರ್ಧಾರ ಪ್ರೊ.  ರಮೇಶ್‌ ಮಂಗಳೇಕರ್‌  ಅಭಿನಂದನಾ ಗ್ರಂಥ ʼಇನಸ್ಪಿರಿಂಗ್‌ ಜನರೇಷನ್‌ ʼ ಲೋಕಾರ್ಪಣೆ   ಗೊತ್ತುವಳಿ ಅಂಗೀಕಾರಕ್ಕೆ ಕಾನೂನು ತೊಡಕಿಲ್ಲ, ಸ್ವೀಕಾರ ಅವಶ್ಯಕ : ನ್ಯಾಯಮೂರ್ತಿ ನಾಗಮೋಹನದಾಸ್ ಸರ್ಕಾರಕ್ಕೆ ಪತ್ರ ನಾಡಗೀತೆಯಲ್ಲಿ "ಬುದ್ಧ ನಿಲ್ಲದ ಶಾಂತಿಯ ತೋಟ" ಕಾರ್ಗಿಲ್ ವಿಜಯೋತ್ಸವ : ಮರಾಠಾ ಲಘು ಪದಾತಿದಳದ ಸೈನಿಕರ ಸಾಹಸ ಸುವರ್ಣಾಕ್ಷರ ಕಾರ್ಗಿಲ್‌ ವಿಜಯೋತ್ಸವ ನಿಮಿತ್ತ ಬೈಕ್‌ ರ್ಯಾಲಿ ವಿಶ್ವದ TEDx ಭಾಷಣಗಾರ್ತಿ ಗಿನ್ನೆಸ್ ದಾಖಲೆ ಅರ್ನಾ ಜೇವನಗೌಡರಿಗೆ ಜಿಲ್ಲಾ ಆಡಳಿತ ಸನ್ಮಾನ ಮೌಂಟ್ ಎವರೆಸ್ಟ್ ಏರಿದ ಸಂತೋಷ್ ಹಾಗೂ ಚಿನ್ಮಯಿಗೆ ಗೌರವ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳನ್ನು ಕಡ್ಡಾಯವಾಗಿ ದತ್ತು ತೆಗೆದುಕೊಳ್ಳಲೇಬೇಕು, ಇಲ್ಲಂದ್ರೆ ಶುಲ್ಕ ಕಡಿತ : ಮುಖ್ಯಮಂತ್ರಿ ಎಚ್ಚರಿಕೆ ಸರ್ಕಾರಿ ಶಾಲೆಗಳನ್ನು ಉದ್ಯಮಿಗಳು ದತ್ತಕ ತೆಗೆದುಕೊಳ್ಳಬಹುದು : ಸಿಇಓ ಬೆಳಗಾವಿ ಜಿಲ್ಲೆಯ 175 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ  ಅಭಿವೃದ್ಧಿ ಪಡಿಸಲು ಸರ್ಕಾರ ನಿರ್ಧಾರ ಪ್ರೊ.  ರಮೇಶ್‌ ಮಂಗಳೇಕರ್‌  ಅಭಿನಂದನಾ ಗ್ರಂಥ ʼಇನಸ್ಪಿರಿಂಗ್‌ ಜನರೇಷನ್‌ ʼ ಲೋಕಾರ್ಪಣೆ   ಗೊತ್ತುವಳಿ ಅಂಗೀಕಾರಕ್ಕೆ ಕಾನೂನು ತೊಡಕಿಲ್ಲ, ಸ್ವೀಕಾರ ಅವಶ್ಯಕ : ನ್ಯಾಯಮೂರ್ತಿ ನಾಗಮೋಹನದಾಸ್ ಸರ್ಕಾರಕ್ಕೆ ಪತ್ರ ನಾಡಗೀತೆಯಲ್ಲಿ "ಬುದ್ಧ ನಿಲ್ಲದ ಶಾಂತಿಯ ತೋಟ"
26 ಜುಲೈ 2026
ಹಕ್ಕಿ-ಪಿಕ್ಕಿ ಸಮುದಾಯದ ಮೂಲಭೂತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಮಟ್ಟದಲ್ಲಿ ಕ್ರಮ - ಸಿಇಓ
🏡 ಗ್ರಾಮ
Dr. K N Doddmani · · 55 ವೀಕ್ಷಣೆಗಳು

ಹಕ್ಕಿ-ಪಿಕ್ಕಿ ಸಮುದಾಯದ ಮೂಲಭೂತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಮಟ್ಟದಲ್ಲಿ ಕ್ರಮ - ಸಿಇಓ

ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಅವರಲ್ಲಿರುವ ಕೌಶಲ್ಯಗಳನ್ನು ಗುರುತಿಸಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಕೌಶಲ್ಯ ತರಬೇತಿ ಹಾಗೂ ಸ್ವಉದ್ಯೋಗದ ಅವಕಾಶಗಳನ್ನು ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು

ಅಸ್ಮಿತೆ ವರದಿ, ಜು.14: ಹಕ್ಕಿ-ಪಿಕ್ಕಿ ಸಮುದಾಯದ ಜನರಿಗೆ ಶಾಶ್ವತ ಪರಿಹಾರ ಒದಗಿಸಲು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಹಾಗೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ  ಭರವಸೆ ನೀಡಿದ್ದಾರೆ.

 ಖಾನಾಪೂರ ತಾಲೂಕಿನ ಹಲಕರ್ಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಇಂದಿರಾ ನಗರದಲ್ಲಿನ ಹಕ್ಕಿ-ಪಿಕ್ಕಿ ಸಮುದಾಯದವರು ವಾಸವಿರುವ ಸ್ಥಳಕ್ಕೆ ಇಂದು ಭೇಟಿ ನೀಡಿ ಅವರ  ಸಮಸ್ಯೆಗಳನ್ನು ಆಲಿಸಿ ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.

ಸಮುದಾಯದ ಎಲ್ಲ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ದಾಖಲಿಸಿ, ಉತ್ತಮ ಶಿಕ್ಷಣ ಕೊಡಬೇಕು. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ಕ್ರಮವಹಿಸಬೇಕು ಎಂದು ಸ್ಥಳದಲ್ಲಿ ಹಾಜರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು. ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳನ್ನು ಗುರುತಿಸಿ ಶೇ.೧೦೦ರಷ್ಟು ದಾಖಲಾತಿ ಖಚಿತಪಡಿಸಿಕೊಳ್ಳುವಂತೆ ನಿರ್ದೇಶನ ನೀಡಿದರು.

ಸಮುದಾಯದ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿ ಒದಗಿಸಲು ಕ್ರಮವಹಿಸುವಂತೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದ ಅವರು, ಅಗತ್ಯವಿದ್ದಲ್ಲಿ ಆಧಾರ್ ನೋಂದಣಿ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಸೇವೆ ಒದಗಿಸುವಂತೆ ಸೂಚಿಸಿದರು. ಚಿಕ್ಕ ಮಕ್ಕಳನ್ನು ಅಂಗನವಾಡಿಗೆ ದಾಖಲಿಸಿ ಪೌಷ್ಠಿಕ ಆಹಾರ ಹಾಗೂ ಅಗತ್ಯ ಸೇವೆಗಳನ್ನು ಒದಗಿಸಲು ತಾಲೂಕಾ ಶಿಶು ಅಭಿವೃದ್ಧಿ ಅಧಿಕಾರಿಗೆ ನಿರ್ದೇಶನ ನೀಡಿದರು.

 ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಮೇತ್ರಿ, ಪಂಚಾಯತ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜೇಂದ್ರ ಜಾಧವ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಹತ್ತಿ, ತಾಪಂ ಸಹಾಯಕ ನಿರ್ದೇಶಕರಾದ ವಿಜಯ ಕೋತಿನ, ಶಶಿಧರ ಬಳ್ಳಾರಿ, ಹಲಕರ್ಣಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ರೇಶ್ಮಾ ಪಾನೀವಾಲೆ ಸೇರಿ ವಿವಿಧ ಇಲಾಖೆಯ ತಾಲೂಕಾಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಹಕ್ಕಿ-ಪಿಕ್ಕಿ ಸಮುದಾಯದ ಮುಖಂಡರು ಹಾಗೂ ತಾಲೂಕಿನ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.

****

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ಜಿಲ್ಲಾ ಪಂಚಾಯತ ಮತ್ತು ಗೋಗಟೆ ಇನಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಒಡಂಬಡಿಕೆ ಗ್ರಾಮ

ಜಿಲ್ಲಾ ಪಂಚಾಯತ ಮತ್ತು ಗೋಗಟೆ ಇನಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಒಡಂಬಡಿಕೆ

ವೃತ್ತಿಪರ ಅಧ್ಯಯನ ವಿದ್ಯಾರ್ಥಿಗಳು ಮಾಡಿದ ಅಧ್ಯಯನ, ಕೈಗೊಂಡ ಸಂಶೋಧನೆ ಯಶಸ್ಸು ಸಾಧಿಸಬೇಕಾದರೆ ಪ್ರಾಯೋಗಿಕವಾಗಿ ಸಾರ್ವಜನಿಕ ಸಂಪರ್ಕ ಸಾಧಿಸುವುದು ಅಗತ್ಯ. ಅದರಲ್ಲೂ ವಿಶೇಷವಾಗಿ ಬದಲಾಗುತ್ತಿರುವ ಗ್ರಾಮಗಳ ಸ್ಥಿತಿಗತಿಗಳ ಅರಿವಿನ ಜೊತೆಗೆ ಅವುಗಳ ಸಕಾರಾತ್ಮಕ ಅಭಿವೃದ್ಧಿ ಯತ್ತ ಯುವ ಸಮುದಾಯ ಮುಂದಾಗಬೇಕಾದ ತುರ್ತು ಅಗತ್ಯದ ಸಂದರ್ಭದಲ್ಲಿ ಒಂದು ಸರ್ಕಾರಿ ಇಲಾಖೆ, ಖಾಸಗಿ ಶಿಕ್ಷಣ ಸಂಸ್ಥೆಯೊಂದಿಗೆ ಕೈಜೋಡಿಸಿರುವುದು ಸ್ವಾಗತಾರ್ಹ ಬೆಳವಣಿಗೆ

Admin
ಮಂಗಾವತಿ :   ಸೇವಾ ನಿವೃತ್ತ ಹಾಗೂ ಪ್ರತಿಭಾ ಸಾಧಕರಿಗೆ ಗೌರವ ಸನ್ಮಾನ ಗ್ರಾಮ

ಮಂಗಾವತಿ :   ಸೇವಾ ನಿವೃತ್ತ ಹಾಗೂ ಪ್ರತಿಭಾ ಸಾಧಕರಿಗೆ ಗೌರವ ಸನ್ಮಾನ

ಕಬ್ಬಿನಿಂದ ಕಬ್ಬಿಗೆ ನಿರ್ಧಿಷ್ಟ ಅಂತರ ಕಾಯ್ದುಕೊಂಡು ಬೆಳೆಯಲ್ಲಿ ಸಾಕಷ್ಟು ಗಾಳಿಯಾಡುವಂತೆ ಮಾಡಿದರೆ, ಕಬ್ಬು ಪೂರ್ಣ ಪ್ರಮಾಣದಲ್ಲಿ ಬೆಳೆದು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಸಾವಯವ ಮಾದರಿಯಿಂದ ಒಂದ ಎಕರೆಗೆ ಒಂದು ನೂರರಿಂದ 120 ಟನ್‌ ಇಳುವರಿ ಪಡೆಯಲು ಸಾಧ್ಯವಿದೆ. ಕಬ್ಬು ಕಟಾವ್‌ ಮಾಡಿದ ಮೇಲೆ ಅದರ ರವದಿ ಸುಡದೆ ಅಲ್ಲಿಯೇ ಬಿಟ್ಟು ಸಾವಯವ ಗೊಬ್ಬರವನ್ನಾಗಿಸಬೇಕು - ತಳಿ ತಜ್ಞರಿಂದ ವಿಶೇಷ ಉಪನ್ಯಾಸ

Admin