ಬ್ರೇಕಿಂಗ್
ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ
19 ಸೆಪ್ಟೆಂ 2026
ಪದ್ಮಶ್ರೀ ಪ್ರಶಸ್ತಿ ಕೆ.ಎಲ್.ಇ ಸಂಸ್ಥೆಗೆ ಸಂದ ಗೌರವ : ಪ್ರಭಾಕರ ಕೋರೆ
🎤 ಸಂದರ್ಶನ
Dr. K N Doddmani · · 120 ವೀಕ್ಷಣೆಗಳು

ಪದ್ಮಶ್ರೀ ಪ್ರಶಸ್ತಿ ಕೆ.ಎಲ್.ಇ ಸಂಸ್ಥೆಗೆ ಸಂದ ಗೌರವ : ಪ್ರಭಾಕರ ಕೋರೆ

ಸಾಧನೆಗೆ ಸವಾಲುಗಳು ಸಹಜ. ಎದುರಿಸಿಯೇ ಮುಂದೆ ಸಾಗಬೇಕಾಗುತ್ತದೆ. ಕೆ.ಎಲ್.ಇ. ಸಂಸ್ಥೆ ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ಪ್ರಜಾಪ್ರಭುತ್ವದ ನೆಲೆಯಲ್ಲಿ ಸಾಮಾಜಿಕ ಹಿತಾಸಕ್ತಿಗೆ ಶ್ರಮಿಸುತ್ತಿದೆ. ಇದರ‌ ಮಾಲೀಕತ್ವ ವೈಯಕ್ತಿಕವಾಗಿರದೇ ಸಮಾಜವೇ ಇದರ ಮಾಲೀಕತ್ವ ವಹಿಸಿ ಬೆಳೆಸುತ್ತಿದೆ. ಈಗ ತಮಗೆ 80 ವರ್ಷ ವಯಸ್ಸು ಕೊನೆಯ ಉಸಿರು ಇರುವವರೆಗೂ ಸಾಮಾಜಿಕ ಸೇವೆ ಸಲ್ಲಿಸುತ್ತೇನೆ. ಸಂಸ್ಥೆಯ ಮೂಲಕ ಶಿಕ್ಷಣ, ಆರೋಗ್ಯ ಸೇವೆ ಮನ್ನಿಸಿ ನೀಡಿದ ಗೌರವ ಸಂತಸ ತಂದಿದೆ.

ಪದ್ಮಶ್ರೀ ಪ್ರಶಸ್ತಿ ಕೆ.ಎಲ್.ಇ ಸಂಸ್ಥೆಗೆ ಸಂದ ಗೌರವ : ಪ್ರಭಾಕರ ಕೋರೆ

ಕಳೆದ 42 ವರ್ಷಗಳಿಂದ ಕೆ.ಎಲ್.ಇ. ಬೃಹತ್ ಸಂಸ್ಥೆಯ ಕಾರ್ಯಾಧ್ಯಕ್ಷನಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ಸೇವೆ ಹಾಗೂ ಸಾಧನೆಯನ್ನು ಪರಿಗಣಿಸಿ ನನಗೆ ರಾಷ್ಟ್ರಪತಿಯವರು ಪದ್ಮಶ್ರೀ ಪ್ರಶಸ್ತಿ ಘೋಷಿಸಿರುವುದು ಅತೀವ ಸಂಸತ ತಂದಿದೆ. ಅದಕ್ಕಾಗಿ ರಾಷ್ಟ್ರಪತಿ‌ ಅವರನ್ನು ಅಭಿನಂದಿಸುವುದಾಗಿ ಕೆ.ಎಲ್.ಇ. ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ‌ ಹಾಗೂ ಹಿರಿಯ ರಾಜಕೀಯ ಧುರೀಣ ಪ್ರಭಾಕರ ಕೋರೆ ತಿಳಿಸಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಘೋಚಣೆಯಾದ ಹಿನ್ನೆಲೆಯಲ್ಲಿ ಅಸ್ಮಿತೆ ‌ಯೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ಅವರು, ಸಂಸ್ಥೆಯ ಸಾಧನೆಯ‌ ಹಿನ್ನೆಲೆಯಲ್ಲಿ ಸಂದ ಗೌರವವಾಗಿರುವದರಿಂದ ಅದು‌ ನನ್ನ ವೈಯಕ್ತಿಕತೆಗಿಂತ ಕೆ.ಎಲ್.ಇ. ಸಂಸ್ಥೆಗೆ ದೊರೆತ‌ ಗೌರವ ಎಂದು ಭಾವಿಸಿದ್ದೇನೆ ಎಂದಿದ್ದಾರೆ.

.

ಶಿಕ್ಷಣ ಹಾಗೂ ಆರೋಗ್ಯ ಸೇವೆಯಿಂದ‌ ವಂಚಿತಗೊಂಡ ವಿಶೇಷ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ದಕ್ಷಿಣ ಭಾಗದ ಅದನ್ನು ಪೂರೈಸಲು ಜನಿಸಿದ ಕೆ.ಎಲ್.ಇ. ಸಂಸ್ಥೆ ಇಂದು 318 ಶೈಕ್ಷಣಿಕ ಅಂಗಗಳನ್ನು ಹೊಂದಿದ್ದು, 1 ಲಕ್ಷ 48 ಸಾವಿರ ವಿದ್ಯಾರ್ಥಿಗಳು ವಿವಿಧ ಕೋರ್ಸಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಅದೇ ರೀತಿ ಆರೋಗ್ಯ ಸೇವೆಯಲ್ಲಿ ಒಂದು ಸಾವಿರ ಹಾಸಿಗೆಯ ವ್ಯವಸ್ಥೆಯಿಂದ ಆರಂಭವಾದ ಕೆ.ಎಲ್.ಇ. ಆಸ್ಪತ್ರೆ ಇಂದು 2 ಸಾವಿರ ಹಾಸಿಗೆಯ ಸಾಮರ್ಥ್ಯ ಹೊಂದಿದೆ. ಇದರ ಜೊತೆಗೆ 1 ಸಾವಿರದ 200 ಉಚಿತ ಹಾಸಿಗೆ ಸೇವೆ ಕಲ್ಪಿಸಲಾಗಿದೆ. ಅಲ್ಲದೆ  ಗೋಕಾಕ, ಚಿಕ್ಕೋಡಿ, ಅಂಕೋಲ ಮಹಾರಾಷ್ಟ್ರದ ಪುಣೆ, ಚಂದಗಡದಲ್ಲಿ‌ ಸೆಟ್ ಲೈಟ್ ಆಸ್ಪತ್ರೆಗಳನ್ನು ತೆರೆಯಲಾಗಿದೆ. ಹುಬ್ಬಳ್ಳಿಯಲ್ಲಿ 1 ಸಾವಿರ ಹಾಸಿಗೆಯುಳ್ಳ ನೂತನ ಆಸ್ಪತ್ರೆ ಸಿದ್ಧಗೊಂಡಿದೆ. ಇದರ ಭಾಗವಾಗಿ ಶಿಗ್ಗಾವಿಯಲ್ಲಿ ಸೆಟ್ ಲೈಟ್ ಆಸ್ಪತ್ರೆ ನಿರ್ಮಿಸಲಾಗಿದೆ. ಈ ಭಾಗದಲ್ಲಿ ತುರ್ತಾಗಿ ಅಗತ್ಯವಿದ್ದ ಕ್ಯಾನ್ಸರ್ ಆಸ್ಪತ್ರೆಯನ್ನು ಅತ್ಯಾಧುನಿಕ ಸೌಕರ್ಯದಿಂದ ಕೂಡಿದ್ದು ಕಳೆದ ವರ್ಷ ಆರಂಭಿಸಲಾಗಿದೆ ಎಂದು ತಿಳಿಸಿದರು.

ನಾನು ಜನಿಸಿದ ಕೌಟುಂಬಿಕ ಪರಿಸರ ಮೊದಲಿನಿಂದಲೂ ಶಿಕ್ಷಣ, ಆರೋಗ್ಯ ಮತ್ತು ಸಹಕಾರ ಪರಂಪರೆ ಹೊಂದಿದ್ದರಿಂದ ಅದರ ಪ್ರೇರಣೆಯಿಂದ ‌ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ. ತಂದೆ ಶಾಲೆಯೊಂದನ್ನು ತೆರೆದಿದ ಪರಿಣಾಮ, ಹಿರಿಯ ಅಣ್ಣ ಹೃದಯಾಘಾತದಿಂದ ನಿಧನರಾದ ಕಾರಣದಿಂದ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಮೂಲ ಕಾರಣವಾಯಿತು ಎಂದು ಕುಟುಂಬದ ಪ್ರಭಾವದ ಬಗ್ಗೆ ಸ್ಮರಿಸಿಕೊಂಡರು.

ಸಹಕಾರ ತತ್ವದ ಅಡಿಯಲ್ಲಿ ಚಿಕ್ಕೋಡಿಯಲ್ಲಿ ರೈತರ ಹಿತಾಸಕ್ತಿಯೊಂದಿಗೆ ಸಕ್ಕರೆ ಕಾರ್ಖಾನೆ ಉತ್ತಮ ಸೇವೆಯಲ್ಲಿ ತೊಡಗಿದೆ. ಕಬ್ಬಿಗೆ ಉತ್ತಮ ಬೆಲೆ ನೀಡುವುದರ‌ ಜೊತೆಗೆ ರೈತರ ಹಾಗೂ ಕಾರ್ಮಿಕರ ಹಿತದ ದೃಷ್ಟಿಯಿಂದ ವಿಮಾ ಯೋಜನೆಯ ಸೌಲಭ್ಯ ಕಲ್ಪಿಸಲಾಗಿದೆ. ಇದೇ ಸಹಕಾರದ ತತ್ವದ ಅಡಿ ಬ್ಯಾಂಕಗಳನ್ನೂ ಆರಂಭಿಸಲಾಗಿದೆ. ಮಹಿಳಾ ಬ್ಯಾಂಕ್ ರಾಜ್ಯದಲ್ಲಿಯೇ ಹೆಸರು ಮಾಡಿದೆ ಎಂದು ಪ್ರಭಾಕರ ಕೋರೆ ತಿಳಿಸಿದ್ದಾರೆ.

ಸಾಧನೆಗೆ ಸವಾಲುಗಳು ಸಹಜ. ಎದುರಿಸಿಯೇ ಮುಂದೆ ಸಾಗಬೇಕಾಗುತ್ತದೆ. ಕೆ.ಎಲ್.ಇ. ಸಂಸ್ಥೆ ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ಪ್ರಜಾಪ್ರಭುತ್ವದ ನೆಲೆಯಲ್ಲಿ ಸಾಮಾಜಿಕ ಹಿತಾಸಕ್ತಿಗೆ ಶ್ರಮಿಸುತ್ತಿದೆ. ಇದರ‌ ಮಾಲೀಕತ್ವ ವೈಯಕ್ತಿಕವಾಗಿರದೇ ಸಮಾಜವೇ ಇದರ ಮಾಲೀಕತ್ವ ವಹಿಸಿ ಬೆಳೆಸುತ್ತಿದೆ ಎಂದು ತಿಳಿಸಿದ ಪ್ರಭಾಕರ ಕೋರೆ ಅವರು, ಈಗ ತಮಗೆ 80 ವರ್ಷ ವಯಸ್ಸು ಕೊನೆಯ ಉಸಿರು ಇರುವವರೆಗೂ ಸಾಮಾಜಿಕ ಸೇವೆಯಲ್ಲಿ ನಿರತನಾಗಿರುತ್ತೇನೆ ಎಂದಿದ್ದಾರೆ.

***

ಈ ಲೇಖನ ಹಂಚಿಕೊಳ್ಳಿ