ಬ್ರೇಕಿಂಗ್
ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ
19 ಸೆಪ್ಟೆಂ 2026
ಹಳ್ಳಿಗಳಲ್ಲಿ ವರ್ಷಕ್ಕೆ ನೂರು ಕೋಟಿ ವೆಚ್ಚಮಾಡಿ 18 ಸಾವಿರ ನಾಟಕಗಳನ್ನು ಮಾಡಲಾಗುತ್ತದೆ : ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ
🎭 ಸಾಂಸ್ಕೃತಿಕ
Dr. K N Doddmani · · 290 ವೀಕ್ಷಣೆಗಳು

ಹಳ್ಳಿಗಳಲ್ಲಿ ವರ್ಷಕ್ಕೆ ನೂರು ಕೋಟಿ ವೆಚ್ಚಮಾಡಿ 18 ಸಾವಿರ ನಾಟಕಗಳನ್ನು ಮಾಡಲಾಗುತ್ತದೆ : ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ

ಇವರು ಒಂದು ನಾಟಕ ಪ್ರದರ್ಶನಕ್ಕೆ ಸ್ವತಃ ೩.೫ ರಿಂದ ೫ ಲಕ್ಷ ರೂಪಾಯಿಗಳಷ್ಟು ಖರ್ಚು ಮಾಡುತ್ತಾರೆ. ತಾವೇ ನಾಟಕ ಬರೆದು, ತಾವೇ ನಿರ್ದೇಶನ ಮಾಡಿ, ತಾವೇ ದುಡ್ಡು ಹಾಕಿ ನಾಟಕಗಳನ್ನು ಮಾಡುತ್ತಾರೆ.

ಅಸ್ಮಿತೆ ವಿಶೇಷ ವರದಿ, ಅ.09:

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಾವಣಗೆರೆ ವೃತ್ತಿ ರಂಗಭೂಮಿ ಸಹಯೋಗದಲ್ಲಿ ಬೆಳಗಾವಿಯಲ್ಲಿ ಇದೇ ತಿಂಗಳಲ್ಲಿ ೧೫ ದಿನಗಳವರೆಗೆ ಅಭಿನಯ ಸಹಿತ ರಂಗಸಂಗೀತ ಮಹಿಳಾ ತರಬೇತಿ ಕಾರ್ಯಾಗಾರ ನಡೆಸಲಾಯಿತು. ಕಾರ್ಯಗಾರದ ಸಮಾರೋಪ ಸಮಾರಂಭ  ಕನ್ನಡ ಭವನದಲ್ಲಿ ಜರುಗಿದಾಗ ಪ್ರಾಸ್ತಾವಿಕವಾಗಿ ಮಾತನಾಡಿದ ದಾವಣಗೆರೆ ರಂಗಾಯಣ ನಿರ್ದೇಶಕರಾದ ಮಲ್ಲಿಕಾರ್ಜುನ ಕಡಕೋಳ ಅವರು ವೃತ್ತಿ ರಂಗಭೂಮಿಯ ಬಗ್ಗೆ ಕೈಗೊಂಡ ಅಧ್ಯಯನ ಹಾಗೂ ರಂಗಾಯಣದ ಮೂಲಕ ಕೈಗೊಳ್ಳುತ್ತಿರುವ ಕ್ರಿಯಾಶೀಲತೆ ಹಿನ್ನೆಲೆಯಲ್ಲಿ ಕೆಲ ಮಹತ್ವದ ವಿಚಾರಗಳನ್ನು ಹಂಚಿಕೊಂಡದ್ದು ವಿಶೇಷವಾಗಿತ್ತು. ಅದು‌ ಅವರ ವೃತ್ತಿ ರಂಗಭೂಮಿಯ ಬಗ್ಗೆ ಹೊಂದಿರುವ ಕಾಳಜಿಯೂ ಆಗಿದೆ. ಅವರಾಡಿದ ಮಾತುಗಳಲ್ಲಿ ವಿಚಾರಗಳನ್ನು ಅಸ್ಮಿತೆ ವಿಡಿಯೋ ಸಹಿತ ರಂಗಾಸಕ್ತರಿಗಾಗಿ ನೀಡಿದೆ.

ಕರ್ನಾಟಕದ ಹಳ್ಳಿಗಳಲ್ಲಿ ಇಂದಿಗೂ ಹಳ್ಳಿಯ ಕಲಾವಿದರು ತಮ್ಮ ಊರುಗಳಲ್ಲಿ  ವರ್ಷಕ್ಕೆ ಎರಡ್ಮೂರು ನಾಟಕಗಳನ್ನು ಆಡುತ್ತಾರೆ. ಈ ನಾಟಕಗಳು ವೃತ್ತಿ ರಂಗಭೂಮಿಯ ಸ್ವರೂಪ ಹಾಗೂ ಕಾರ್ಯ ಚಟುವಟಿಕೆಗಳ ದೃಷ್ಟಿಯಿಂದ ಹೆಚ್ಚುಕಡಿಮೆ ತದ್ರೂಪವಾಗಿರುತ್ತವೆ. ಹೀಗಾಗಿ ಇವು ವೃತ್ತ ರಂಗಭೂಮಿಯ ವ್ಯಾಪ್ತಿಯೊಳಗೆ ಒಳಪಡುತ್ತವೆ.  ದಕ್ಷಿಣ ಕರ್ನಾಟಕದಲ್ಲಿ ೧೪ ಜಿಲ್ಲೆಗಳಲ್ಲಿ ತಲಾ ೧೦ ರಂತೆ ಅಂದಾಜು ಹಾಕಿದರೂ ವರ್ಷಕ್ಕೆ ೯ ಸಾವಿರ ನಾಟಕಗಳು ಆಗುತ್ತವೆ.  ಇಡೀ ಕರ್ನಾಟಕದಲ್ಲಿ ಹಳ್ಳಿಗಳಲ್ಲಿ ವರ್ಷಕ್ಕೆ ೧೬ ರಿಂದ ೧೮ ಸಾವಿರ ನಾಟಕಗಳು ಪ್ರದರ್ಶನವಾಗುತ್ತವೆ. ಇವರಾರೂ ಸರ್ಕಾರದಿಂದ ಯಾವುದೇ ರೀತಿಯ ಅನುದಾನ ಪಡೆಯುವುದಿಲ್ಲ. ಇವರು ಒಂದು ನಾಟಕ ಪ್ರದರ್ಶನಕ್ಕೆ ಸ್ವತಃ ೩.೫ ರಿಂದ ೫ ಲಕ್ಷ ರೂಪಾಯಿಗಳಷ್ಟು ಖರ್ಚು ಮಾಡುತ್ತಾರೆ. ತಾವೇ ನಾಟಕ ಬರೆದು, ತಾವೇ ನಿರ್ದೇಶನ ಮಾಡಿ, ತಾವೇ ದುಡ್ಡು ಹಾಕಿ ನಾಟಕಗಳನ್ನು ಮಾಡುತ್ತಾರೆ. ಈ ಕಲಾವಿದರಿಂದ ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ನಾಟಕಗಳು ಪ್ರದರ್ಶನವಾದರೆ, ದಕ್ಷಿಣ ಕರ್ನಾಟಕದಲ್ಲಿ ಪೌರಾಣಿಕ ನಾಟಕಗಳನ್ನು ಮಾಡಲಾಗುತ್ತದೆ.  ೧೮ ಸಾವಿರ ನಾಟಕ ಪ್ರದರ್ಶನಕ್ಕೆ ಈ ಹಳ್ಳಿಗರು ೮೦ ಕೋಟಿ ರಿಂದ ನೂರು ಕೋಟಿ ಖರ್ಚು ಮಾಡುತ್ತಾರೆ.

ವಿಡಿಯೋ

ವೃತ್ತಿ ರಂಗಭೂಮಿಯ ಕಂಪನಿ ನಾಟಕಗಳಿಗೆ ಕರ್ನಾಟಕದಲ್ಲಿ ೧೫೦ ವರ್ಷಗಳ ಚಾರಿತ್ರಿಕ ಇತಿಹಾಸವಿದೆ. ಈ ಚರಿತ್ರೆಯ ಉದ್ದಕ್ಕೂ ಕಂಪನಿ ನಾಟಕಗಳು ತನ್ನದೇ ಆದ ವೈಭವದೊಂದಿಗೆ ಜೀವಂತಿಕೆ ಉಳಿಸಿಕೊಂಡು ಬಂದಿವೆ.

ಸದ್ಯ ಕರ್ನಾಟಕದಲ್ಲಿ ೨೬ ಕಂಪನಿ ನಾಟಕಗಳು ಕ್ರಿಯಾಶೀಲವಾಗಿದ್ದು, ಇದರಲ್ಲಿಯ ಬಹುತೇಕ ಕಂಪನಿಗಳು ಉತ್ತರ ಕರ್ನಾಟಕದವೇ ಆಗಿವೆ. ಚಿತ್ರದುರ್ಗ ಭಾಗದಲ್ಲಿ ಕಂಪನಿ ನಾಟಕಗಳು ಇಲ್ಲ.  ಆದರೆ, ನಾಡಿನ ಪ್ರತಿಯೊಂದು ಊರುಗಳಲ್ಲಿ ವೃತ್ತಿ ರಂಗಭೂಮಿ ಸಂವೇದನೆಗಳನ್ನು ಹೊಂದಿರುವ  ನಾಟಕಗಳನ್ನು ಆಡುತ್ತಾರೆ.

ಕರ್ನಾಟಕದಲ್ಲಿ  ೨೭ ಸಾವಿರ ಗ್ರಾಮಗಳನ್ನು ಒಳಗೊಂಡ ೬ ಸಾವಿರ ಗ್ರಾಮ ಪಂಚಾಯಿತಗಳಿವೆ. ಜನ ಸಾಮಾನ್ಯರ ವಿಶ್ವವಿದ್ಯಾಲಯವಾಗಿ ಹೃದಯ ಸ್ಪರ್ಶಿ ಹಾಗೂ ತಲಸ್ಪರ್ಶಿಯಾದ  ಹಳ್ಳಿಯ ನಾಟಕಗಳು  ಜನಸಾಮಾನ್ಯರ ವಿಶ್ವವಿದ್ಯಾಲಯಗಳಾಗಿದ್ದು, ವರ್ಷಕ್ಕೆ ೧೮ ಸಾವಿರ ಪ್ರದರ್ಶನವಾಗುತ್ತವೆ.

ವೈಭವದ ಪರಂಪರೆ ಮೆರೆದಿರುವ ವೃತ್ತಿ ರಂಗಭೂಮಿಯ ಕಂಪನಿ ನಾಟಕಗಳ ಕಳೆದ ೭೦ ವರ್ಷಗಳ ಬದಲಾವಣೆಯಾದ ಸಂದರ್ಭದಲ್ಲಿ ಅಭಿನಯಕ್ಕೆ, ರಂಗಸಂಗೀತಕ್ಕೆ, ರಂಗಸಜ್ಜಿಕೆಗೆ ಧಕ್ಕೆ ಬಂದಿದೆ. ಆದರೆ, ಈ ಹಿಂದೆ ಇದ್ದ ವೃತ್ತಿರಂಗಭೂಮಿಯ ಪರಂಪರೆಯನ್ನು ರಂಗಸಂಗೀತದ ಮೂಲಕ ಆಧುನಿಕರಣಗೊಳಿಸಿ, ಸಮಕಾಲೀನ ಪ್ರಜ್ಞೆಯೊಂದಿಗೆ ಮರು ಸೃಷ್ಟಿ ಮಾಡಬೇಕಾಗಿದೆ. ದಾವಣಗೆರೆ ರಂಗಾಯಣ ಈ  ಮಾರ್ಗದಲ್ಲಿ ಪ್ರಯತ್ನ ಮುಂದುವರೆಸಿದೆ.

***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ