ಪಿ.ಕೆ. ಬಡಗೇರ ಅವರಿಗೆ ಕರ್ನಾಟಕ ಛಾಯಾರತ್ನ ಪ್ರಶಸ್ತಿ ಪ್ರದಾನ
ಕರ್ನಾಟಕ ವಿಡಿಯೋ ಮತ್ತು ಪೋಟೋ ಅಸೋಸಿಯೇಷನ್ ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ಛಾಯಾಗ್ರಾಹಕರ ಸಹಯೋಗದಲ್ಲಿ ಕಾರ್ಯಕ್ರಮ
ಪಿ.ಕೆ. ಬಡಗೇರ ಅವರಿಗೆ ಕರ್ನಾಟಕ ಛಾಯಾರತ್ನ ಪ್ರಶಸ್ತಿ ಪ್ರದಾನ
--
ಬೆಳಗಾವಿ: ಇಲ್ಲಿನ ಪತ್ರಿಕಾ ಹಿರಿಯ ಛಾಯಾಗ್ರಾಹಕ ಪಿ.ಕೆ. ಬಡಗೇರ ಅವರಿಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ "ಕರ್ನಾಟಕ ಛಾಯಾರತ್ನ ಪ್ರಶಸ್ತಿ" ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ವಿಡಿಯೋ ಮತ್ತು ಪೋಟೋ ಅಸೋಸಿಯೇಷನ್ ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ಛಾಯಾಗ್ರಾಹಕರ ಸಹಯೋಗದಲ್ಲಿ ಸಮಾರಂಭ ಆಯೋಜಿಸಲಾಗಿತ್ತು.
ಪಿ.ಕೆ. ಬಡಗೇರ ಅವರೊಂದಿಗೆ ಬೆಂಗಳೂರಿನ ಪೂರ್ಣಿಮಾ, ವಿಶ್ವೇಶ್ವರಪ್ಪ ಎಸ್, ಅಕ್ರಮ್, ಕೊಪ್ಪಳದ ನಾಗರಾಜ್ ದಸ್ತಾನ ನವರ್, ರುದ್ರಸ್ವಾಮಿ, ಬಳ್ಳಾರಿಯ ರುದ್ರಸ್ವಾಮಿ, ಮೈಸೂರಿನ ಪ್ರಗತಿ ಗೋಪಾಲಕೃಷ್ ಅವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಂ.ಎಸ್.ಎಂ.ಇ.ಡೇವಲ್ ಮೆಂಟ್ ಅಧಿಕಾರಿ ದೇವರಾಜ್ ಕೆ. ಬಿ.ಬೆಂಜಮಿನ್ ಭಾಸ್ಕರ್, ಸೆಲ್ವಮುತ್ತು, ಶ್ರೀನಾಥ್, ಎಸ್.ಕೆ.ಹುಸೇನ್, ಜಾನ್ ಅಮರ್ ರಾಜ್, ರಿನಿ ರಾವಲ್, ದಿವ್ಯರವಿ , ಹೆಚ್.ವಿ.ಕೃಷ್ಣಪ್ಪ, ಎ.ಜಗದೀಶ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
***
ಈ ಲೇಖನ ಹಂಚಿಕೊಳ್ಳಿ