ಬ್ರೇಕಿಂಗ್
ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ
19 ಸೆಪ್ಟೆಂ 2026
ಪದ್ಮಶ್ರೀ ಪ್ರಶಸ್ತಿ:  ಪ್ರಭಾಕರ ಕೋರೆಯವರಿಗೆ ಅದ್ದೂರಿ ಸನ್ಮಾನ; ಕೆ.ಎಲ್.ಇ. ಸಂಸ್ಥೆಯ110 ವರ್ಷಗಳ ಇತಿಹಾಸದಲ್ಲಿ ಸಾಮಾಜಿಕ ಅಗಮ್ಯೆ ಕಾಳಜಿ ಅಡಗಿದೆ : ಪ್ರಭಾಕರ ಕೋರೆ
📄 ಬೆಳಗಾವಿ ಜಿಲ್ಲೆಯ ಸುದ್ದಿ
Dr. K N Doddmani · · 87 ವೀಕ್ಷಣೆಗಳು

ಪದ್ಮಶ್ರೀ ಪ್ರಶಸ್ತಿ: ಪ್ರಭಾಕರ ಕೋರೆಯವರಿಗೆ ಅದ್ದೂರಿ ಸನ್ಮಾನ; ಕೆ.ಎಲ್.ಇ. ಸಂಸ್ಥೆಯ110 ವರ್ಷಗಳ ಇತಿಹಾಸದಲ್ಲಿ ಸಾಮಾಜಿಕ ಅಗಮ್ಯೆ ಕಾಳಜಿ ಅಡಗಿದೆ : ಪ್ರಭಾಕರ ಕೋರೆ

ಅಸ್ಮಿತೆ ವರದಿ , ಜು.17: ಹಿರಿಯ ರಾಜಕೀಯ ಧುರೀಣ, ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರೂವಾರಿ ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಕಾರಣ ಇಂದು ಬೆಳಗಾವಿಯಲ್ಲಿ ಗೋಗಟೆ ಸಮೂಹ ಸಂಸ್ಥೆ, ಸ್ಪೋಟ್ಸ್‌ ಕ್ಲಬ್‌, ಬಾಡಿ ಬಾಲ್ಡರ್ಸ್‌ ಸಂಸ್ಥೆ, ಬೆಳಗಾವಿ ಶೈಕ್ಷಣಿಕ ಸಂಸ್ಥೆ ಮತ್ತು ರೋಟರಿ ಕ್ಲಬ್‌ ಸಹಯೋಗದಲ್ಲಿ ಸ್ವರೂಪ ನರ್ತಕಿ ಚಿತ್ರ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅದ್ದೂರಿಯಾದ ಗೌರವ ಸನ್ಮಾನ ನೆರವೇರಿಸಲಾಯಿತು.

ಬೆಳಗಾವಿ ಮರಾಠಾ ಲಘು ಪದಾತಿದಳದ ಕಮಾಂಡರ್‌ ಬ್ರಿಗೇಡಿಯರ್‌ ಗಿರೀಶ್‌ ಉಪಾಧ್ಯಾಯ, ಅವಿನಾಷ ಪೋತದಾರ, ಶಿರೀಶ್‌ ಗೋಗಟೆ ಹಾಗೂ ಪ್ರಭಾಕ ಕೋರೆ ಅವರ ಪತ್ನಿ ಆಶಾ ಕೋರೆ, ಮಗಳು ಪ್ರೀತಿ ಕೋರೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಭಾಕರ ಕೋರೆ ಅವರು, 110 ವರ್ಷಗಳ ಹಿಂದೆ ಸಾಮಾಜಿಕ ಅಗಮ್ಯೆ ಕಾಳಜಿಯಿಂದ ತುಂಬಾ ಕಷ್ಟಪಟ್ಟು ಕೆ.ಎಲ್.ಇ. ಸಂಸ್ಥೆಯನ್ನು  ಆರಂಭಿಸಿದ್ದು ಇಂದು ಶೈಕ್ಷಣಿಕ ಹಾಗೂ ಆರೋಗ್ಯದ ಗಮನಾರ್ಹ ಸೇವೆಯೊಂದಿಗೆ ನಾಡಿನ ಪ್ರಮುಖ ಸಂಸ್ಥೆಯಾಗಿ ಬೆಳೆದ 12 ಸಾವಿರ ಜನರು ಸದಸ್ಯರಿದ್ದಾರೆ. ತಂದೆಯ ಶೈಕ್ಷಣಿಕ ಕಾಳಜಿಯ ಪ್ರೇರಣೆ ಹಾಗೂ ಅಣ್ಣನ ಸಾವಿನಿಂದ ನೊಂದ ನಾನು ಕೆ.ಎಲ್.‌ ಇ. ಸಂಸ್ಥೆಯ ಮೂಲಕ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಆರೋಗ್ಯ ಸೇವೆ ಒದಗಿಸಬೇಕೆಂಬ ಮಹದ್ದೇಶದೊಂದಿಗೆ ನಿರಂತರ ಶ್ರಮದ ಕಾರಣ ಸಂಸ್ಥೆ ಬೆಳೆಸಲು ಸಾಧ್ಯವಾಗಿದೆ. ಇಂದು ನೆರೆಯ ರಾಜ್ಯಗಳನ್ನು ಒಳಗೊಂಡು ಕರ್ನಾಟಕದಲ್ಲಿ ಸಂಸ್ಥೆ 320 ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿದ್ದು, ಇದರಲ್ಲಿ ಪ್ರತಿಶತ 40 ರಷ್ಟು ಗ್ರಾಮೀಣ ಭಾಗದಲ್ಲಿವೆ. ರೈತರ ಶ್ರೇಯೋಭಿವೃದ್ಧಿ ಪ್ರಧಾನ ಆಶಯ ಹೊಂದಿದ ಸಹಕಾರಿ ಸಕ್ಕರೆ ಕಾರ್ಖಾನೆ ನಿತ್ತ 12 ಸಾವಿರ ಟನ್‌ ಕಬ್ಬು ನುರಿಸುತ್ತಿದ್ದೆ. ಅತ್ಯಾಧುನಿಕ ಸೌಕರ್ಯದೊಂದಿನ ಆಸ್ಪತ್ರೆ ಎಲ್ಲ ವರ್ಗದವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುತ್ತಿದೆ ಎಂದು ತಿಳಿಸಿದರು.

ಬ್ರಿಗೇಡಿಯರ್‌ ಗಿರೀಶ್‌ ಉಪಾಧ್ಯಾಯ, ಉತ್ತಮ ವಾತಾರಣ ಹೊಂದಿರುವ ಬೆಳಗಾವಿ ಜಿಲ್ಲೆ  ಎಲ್ಲ ಬಗೆಯ ಅನುಕೂಲತೆಗಳನ್ನು  ಹೊಂದಿದೆ. ಜಿಲ್ಲೆಯಲ್ಲಿ ಆಧುನಿಕ ಸೌಕರ್ಯಗಳನ್ನು ಒದಗಿಸುವಲ್ಲಿ ಕೆ.ಎಲ್.ಇ ಸಂಸ್ಥೆಯ ಪಾತ್ರ ಪ್ರಮುಖವಾಗಿದೆ.  ಸಾಮಾಜಿಕ ಸೇವೆಯಲ್ಲಿ ವಿಶೇಷ ತೊಡಗಿಸಿಕೊಂಡಿರುವ ಸಂಸ್ಥೆಯ ಉಚಿತ ಶಿಕ್ಷಣ ಹಾಗೂ ಆರೋಗ್ಯ ಸೇವೆಯನ್ನು ಒದಗಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ