ಬ್ರೇಕಿಂಗ್
ನಾಡಗೀತೆಯಲ್ಲಿ ಬೌದ್ಧ ಧರ್ಮದ ಹೆಸರು ಸೇರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಮನವಿ ಹಕ್ಕಿ-ಪಿಕ್ಕಿ ಸಮುದಾಯದ ಮೂಲಭೂತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಮಟ್ಟದಲ್ಲಿ ಕ್ರಮ - ಸಿಇಓ ಬೆಳಗಾವಿ ಪಾಲಿಕೆಗೆ ಅನುದಾನ ಬಿಡುಗಡೆ ಮಾಡದಂತೆ ಗಡಿ ಕನ್ನಡ ಸೇನೆ ಆಗ್ರಹ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ ಘೋಷಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅನ್ಯರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದು ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿದೆ : ಬಿಜೆಪಿ ಬಸವ ಕಾಯಕಜೀವಿಗಳ ಸಂಘದಿಂದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಪುಸ್ತಕ ವಿತರಣೆ ಪಾಲಿಕೆಗೆ 250 ಕೋಟಿ ವಿಶೇಷ ಅನುದಾನ ಕೋರಿ ಸಿಎಂ ಗೆ ಮೇಯರ್, ಉಪಮೇಯರ್ ಮನವಿ ಮೂರು ದಿನಗಳ RSS ಬೈಟಕ್ ಮುಕ್ತಾಯ: ಶ್ರೀರಾಮ ಜನ್ಮಭೂಮಿ ಮಂದಿರದ ದಾನ ಪೆಟ್ಟಿಗೆಯ ಕಾಣಿಕೆಯ ಅಕ್ರಮಕ್ಕೆ ಖೇದ ಎಸ್‌ಐಆರ್ (SIR) ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಿದೆ ಸಚಿವ ಸತೀಶ್ ಜಾರಕಿಹೊಳಿ ವೈಜ್ಞಾನಿಕತೆ ಶಿಕ್ಷಣದಲ್ಲಿ ಬರದೆ ಹೋದರೆ ಮೌಢ್ಯಗಳು ಹಾಗೆ ಮುಂದುವರಿಯುವಂತ ಕೆಲಸಗಳು ನಡೆಯುತ್ತದೆ - ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನಾಡಗೀತೆಯಲ್ಲಿ ಬೌದ್ಧ ಧರ್ಮದ ಹೆಸರು ಸೇರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಮನವಿ ಹಕ್ಕಿ-ಪಿಕ್ಕಿ ಸಮುದಾಯದ ಮೂಲಭೂತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಮಟ್ಟದಲ್ಲಿ ಕ್ರಮ - ಸಿಇಓ ಬೆಳಗಾವಿ ಪಾಲಿಕೆಗೆ ಅನುದಾನ ಬಿಡುಗಡೆ ಮಾಡದಂತೆ ಗಡಿ ಕನ್ನಡ ಸೇನೆ ಆಗ್ರಹ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ ಘೋಷಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅನ್ಯರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದು ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿದೆ : ಬಿಜೆಪಿ ಬಸವ ಕಾಯಕಜೀವಿಗಳ ಸಂಘದಿಂದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಪುಸ್ತಕ ವಿತರಣೆ ಪಾಲಿಕೆಗೆ 250 ಕೋಟಿ ವಿಶೇಷ ಅನುದಾನ ಕೋರಿ ಸಿಎಂ ಗೆ ಮೇಯರ್, ಉಪಮೇಯರ್ ಮನವಿ ಮೂರು ದಿನಗಳ RSS ಬೈಟಕ್ ಮುಕ್ತಾಯ: ಶ್ರೀರಾಮ ಜನ್ಮಭೂಮಿ ಮಂದಿರದ ದಾನ ಪೆಟ್ಟಿಗೆಯ ಕಾಣಿಕೆಯ ಅಕ್ರಮಕ್ಕೆ ಖೇದ ಎಸ್‌ಐಆರ್ (SIR) ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಿದೆ ಸಚಿವ ಸತೀಶ್ ಜಾರಕಿಹೊಳಿ ವೈಜ್ಞಾನಿಕತೆ ಶಿಕ್ಷಣದಲ್ಲಿ ಬರದೆ ಹೋದರೆ ಮೌಢ್ಯಗಳು ಹಾಗೆ ಮುಂದುವರಿಯುವಂತ ಕೆಲಸಗಳು ನಡೆಯುತ್ತದೆ - ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ
16 ಜುಲೈ 2026
ಡಿಜಿಟಲ್‌ ವಾರಸುದಾರಿಕೆ ಮಕ್ಕಳೊಂದಿಗೆ  ಸಮನ್ವಯ ಸಾಧಿತ ಶಿಕ್ಷಣ ಅಗತ್ಯ - ಶಿಕ್ಷಣ ತಜ್ಞರಾದ ವಿಷ್ಣು ಶಿಂಧೆಯೊಂದಿಗೆ ಸಂವಾದ
🎓 ಶಿಕ್ಷಣ
Dr. K N Doddmani · · 140 ವೀಕ್ಷಣೆಗಳು

ಡಿಜಿಟಲ್‌ ವಾರಸುದಾರಿಕೆ ಮಕ್ಕಳೊಂದಿಗೆ  ಸಮನ್ವಯ ಸಾಧಿತ ಶಿಕ್ಷಣ ಅಗತ್ಯ - ಶಿಕ್ಷಣ ತಜ್ಞರಾದ ವಿಷ್ಣು ಶಿಂಧೆಯೊಂದಿಗೆ ಸಂವಾದ

ಪ್ರಾಧ್ಯಾಪಕರು, ಚಿಂತಕರು ಮತ್ತು ಸಂವೇದನಾಶೀಲ ಬರಹಗಾರರಾದ ಡಾ.ವಿಷ್ಣು ಶಿಂಧೆ ಅವರು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ಮಂಡ್ಯ ಇಲ್ಲಿ ವಿಶೇಷ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳ ಕೇಂದ್ರೀಕೃತ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮಧ್ಯ ಸಮನ್ವಯ ಸಾಧಿಸಿದರೆ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯ. ಮಕ್ಕಳನ್ನು ಸಾಮಾಜೀಕರಣಗೊಳಿಸಿ ವ್ಯಕ್ತಿತ್ವ ರೂಪಿಸಿದರೆ ಅದೇ ಕೌಶಲ್ಯ ಆಧಾರಿ ಶಿಕ್ಷಣ. ಇಂದಿನ ವಿದ್ಯಾರ್ಥಿಗಳು ಡಿಜಿಟಲ್ ವಾರಸುದಾರರರು - ಹೀಗೆ ಅಸ್ಮಿತೆಯೊಂದಿಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಶೈಕ್ಷಣಿಕ ಕೇಂದ್ರವನ್ನಾಗಿರಿಸಿ ಅಸ್ಮಿತೆ ಡಾ. ವಿಷ್ಣು ಅವರೊಂದಿಗೆ ನಡೆಸಲಾದ ಸಂದರ್ಶನದಲ್ಲಿ ಕೇಳಿದ ಎತ್ತಿದ ಪ್ರಶ್ನೆಗಳಿಗೆ ನೀಡಿದ ಉತ್ತರಗಳ ಅಂಶಗಳನ್ನು ನಿಮ್ಮೆದುರಿಗೆ ಇಡಲಾಗಿದೆ. ಜೊತೆಗೆ ಸಂದರ್ಶನದ ವಿಡಿಯೋ ಲಿಂಕ್‌ ಮೂಲಕ  ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ವರ್ಗೀಕೃತತಕ್ಕಿಂತ ಏಕರೂಪತೆ ಅಗತ್ಯ:

ಈಗಿರುವ ಶಿಕ್ಷಣ ವ್ಯವಸ್ಥೆ ಶಿಕ್ಷಕರು ಹೇಳುವುದು ಮಕ್ಕಳು ಕೇಳುವ ಸಾಂಪ್ರದಾಯಿಕ ಕಲಿಕಾ ಪದ್ದತಿಯನ್ನು ಅನುಸರಿಸಲಾಗುತ್ತಿದೆ. ಶಿಕ್ಷಣ ಜ್ಞಾನದ ಜೊತೆಗೆ ಬದುಕು ನಿರ್ಮಿಸಿಕೊಳ್ಳುವ ಮೌಲ್ಯಯುತ ಸಮಾಜ ನಿರ್ಮಿತಿಯ ಆನ್ವಯಿಕಗೊಳಿಸಬೇಕಾಗಿದೆ ಖಾಸಗಿ – ಸರ್ಕಾರಿ, ಉತ್ತಮ – ಕೆಟ್ಟದು, ಸ್ಟೇಟ್‌, ಕೇಂದ್ರೀಯ, ಸಿಬಿಎಸ್‌ಸಿ ಮೊದಲಾದ ವರ್ಗೀಕೃತ ವ್ಯವಸ್ಥೆಯ ಬದಲಾಗಿ  ಏಕರೂಪ ಶಿಕ್ಷಣ ಪದ್ದತಿ ಜಾರಿಗೊಳ್ಳಬೇಕು.  ಸಾಮಾಜಿ ಛಿದ್ರತೆಗಿಂತ ಜ್ಞಾನ ಮತ್ತು ಮೌಲ್ಯಗಳ ಕೇಂದ್ರೀಕೃತ    ಶಿಕ್ಷಣ ಗುಣಮಟ್ಟ ಸಾಧಿಸಲು ಸಾಧ್ಯವಾಗುತ್ತದೆ ಎಂಬುದು ವಿಷ್ಣು ಅವರ ಗ್ರಹಿಕೆಯಾಗಿದೆ.

ಕಲಿಕೆ – ಕಲಿಸುವಿಕೆ ಸಮನ್ವಯ  ಅಗತ್ಯ :

ಪಾಶ್ಚಿಮಾತ್ಯ ಶಿಕ್ಷಣ ಮಾದರಿಯನ್ನು ಅನುಸರಿಸುತ್ತ ಬರಲಾಗಿದ್ದು, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಸಮನ್ವಯ ಸಾಧಿತ ಪಠ್ಯಕ್ರಮ ಮರುಸೃಷ್ಟಿಯಾಗಬೇಕು. ಮಕ್ಕಳ ವಿಕಾಸ ಪ್ರಧಾನವಾದ ಗ್ರಹಿಕೆ ಆದ್ಯತೆಬೇಕು. ಇದಕ್ಕಾಗಿ  ಪಠ್ಯದ ಅಮೂಲಾಗ್ರಹ ಬದಲಾವಣೆಯೊಂದಿಗೆ್  ಶಿಕ್ಷಕರನ್ನು ಅದರನ್ವಯ ಸಜ್ಜುಗೊಳಿಸುವಿಕೆ  ಆಗಬೇಕು ಎನ್ನುತ್ತಾರೆ.

ವೈದ್ಯಕೀಯ ಎಂಜನಿಯರಿಂಗ್‌ ಸೇರಿದಂತೆ ಆಧುನಿಕ ವೃತ್ತಿಪರ ಕೇಂದ್ರಿತ ಕೌಶಲ್ಯ ಶಿಕ್ಷಣಕ್ಕಿಂತ, ಇಲ್ಲಿ  ಕೃಷಿ, ಗುಡಿಕೈಗಾರಿಕೆ ಸೇರಿದಂತೆ ಹಲವಾರು ಉದ್ಯೋಗಗಳಿವೆ. ಅವುಗಳ ಸಾಧಿತ ರೂಪದಲ್ಲಿ ಶಿಕ್ಷಣ ರೂಪಗೊಂಡು  ಸ್ವತಂತ್ರವಾಗಿ ಹೊಸ ಬದುಕು ನಿರ್ಮಿಸಿಕೊಳ್ಳುವ ಮನೋಬಲ ಹೆಚ್ಚಿಸುವ ಕೌಶಲ್ಯ ನೀಡಬೇಕಾಗಿದೆ ಎಂದು ಕೌಶಲ್ಯತೆ ವ್ಯಾಖ್ಯಾಸಿದ್ದಾರೆ.

ವಿಷ್ಣು ಶಿಂಧೆ

ಶಿಕ್ಷಕರ ಬೌದ್ಧಿಕ ಉತ್ಸಾಹ ಬತ್ತದಿರಲಿ:

ಶಿಕ್ಷಕರು ವೃತ್ತಿ ಪ್ರವೇಶದ ಸಂದರ್ಭದಲ್ಲಿ  ಪಡೆಯುವ ತರಬೇತಿಯಲ್ಲಿ ತೋರ್ಪಡಿಸುವ  ಬೌದ್ಧಿಕ ಉತ್ಸಾಹ- ಹುಮ್ಮಸ್ಸು  ವೃತ್ತಿಗೆ ಸೇರಿದ ಮೇಲೆ ಬಹಳಷ್ಟು ಜನರು ಉಳಿಸಿಕೊಳ್ಳುವುದಿಲ್ಲ. ಹಾಗಾಗದೆ ಆ ಆರಂಭದ ಉತ್ಸವ ಸೇವೆಯ  ಕೊನೆಯ ದಿನಗಳ ವರೆಗೂ ಉಳಿಸಿಕೊಳ್ಳಬೇಕು. ಹೊಸ ತಲೆಮಾರಿನ ಮಕ್ಕಳ ಬೌದ್ಧಿಕತೆಗೆ ಅನುಗುಣವಾಗಿ ಶಿಕ್ಷಣಕರು ತಮ್ಮ ಬೌದ್ಧಿಕತೆಯನ್ನು ಬೆಳೆಸಿಕೊಳ್ಳುತ್ತ ಮತ್ತು ಅದನ್ನು ಪ್ರಯೋಗಶೀಲಗೊಳಿಸುತ್ತ ಹೋದರೆ ಬೋಧನೆಯ ಉತ್ಸಾಹ  ಬತ್ತುವುದಿಲ್ಲ ಎಂದಿದ್ದಾರೆ.

ಇಂದಿನ ಮಕ್ಕಳು ಡಿಜಿಟಲ್‌ ಮೂಲ ನಿವಾಸಿಗಳು:

ಆಧುನಿಕ  ತಂತ್ರಜ್ಞಾನದೊಂದಿಗೆ ವೇಗವಾಗಿ ಬೆಳೆಯುತ್ತಿರುವ ಇಂದಿನ ಮಕ್ಕಳು ಶಿಕ್ಷಕರಗಿಂತ ಜಾಣರಿದ್ದಾರೆ; ಹೊಸತನದ ಗ್ರಹಿಕಾಶಕ್ತಿ ಹೊಂದಿರುವ ಭರವಸೆದಾಯಕರಾಗಿರುವುದನ್ನು ಒಪ್ಪಿಕೊಳ್ಳಬೇಕು.  ಕಲಿಸುವ ಹಳೆ ತಲೆಮಾರು ಅಥವಾ ಹೊಸತನಕ್ಕೆ ಸ್ಪಂದಿಸದ ಶಿಕ್ಷಕರು ಡಿಜಿಟಿಲ್‌ ಯುಗಕ್ಕೆ ವಲಿಸಿಗರು.  ಡಿಜಿಟಿಲ್‌ ಮೂಲ ನಿವಾಸಿಗಳೊಂದಿಗೆ ಈ ವಲಸಿಗರು ಸಮನ್ವಯ ಸಾಧಿಸಬೇಕು. ಈ ಮಕ್ಕಳಲ್ಲಿ ವರ್ಗ, ಜಾತಿ, ಶ್ರೇಷ್ಠ – ಕನಿಷ್ಠತೆಯ ತಾರತಮ್ಯೆತೆ, ಬಡವ- ಬಲ್ಲಿದ, ಸ್ಪರ್ಶ – ಅಸ್ಪರ್ಶ ಇಂಥ ಮಾನಸಿಕ ಏರಿಳಿತಗಳು ಅವರಲ್ಲಿ ಇಲ್ಲ.  ಅವರ ಚಿಂತನೆ ಮತ್ತು ಗ್ರಹಿಕೆ ವಿಶಾಲವಾಗಿರುವುದನ್ನು ಶಿಕ್ಷಕರಾದವರು ಅರ್ಥೈಯಿಸಿಕೊಂಡು ಅವರ ಮನೋಬಲಕ್ಕೆ ಸ್ಪಂದಿಸಿಬೇಕಾಗಿದೆ.

ಯಂತ್ರಗಳ ಮೂಲಕ ಸಂವೇದನಾಶೀಲತೆ:

ಅತಿಯಾದ ಯಂತ್ರಗಳ ಅವಲಂಬನೆಯಿಂದ  ಸಂವೇದನೆಗಳ  ಕೊರತೆ ಉಂಟಾಗುವುದು ಸಹಜ. ಆದರೆ, ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಕರು ಯುಂತ್ರಗಳ ಮೂಲಕ ಹೊರ ಜಗತ್ತಿನೊಂದಿಗೆ ತೆರೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿ ಸಮಕಾಲೀನ ಸಂವೇದಕರನ್ನಾಗಿ ಮಾಡುವುದು ಅಗತ್ಯವಿದೆ.

ವಿದ್ಯಾರ್ಥಿಗಳ ಗ್ರಹಿಕೆಗೆ ಅಭಿವ್ಯಕ್ತಿಯ ವೇದಿಕೆ ಅಗತ್ಯ:

ಕೊಟ್ಟ ಪ್ರಶ್ನೆಗಳಿಗೆ ಉತ್ತರಿಸುವ, ತಾನು ಹೇಳಿರುವುದನ್ನು ಮಾತ್ರ ಕೇಳಬೇಕು ಎನ್ನುವ, ತಾನು ಕೊಟ್ಟ ಆಕರಗಳನ್ನು ಮಾತ್ರ ಬಳಸಿಕೊಳ್ಳಬೇಕು ಎಂಬ ಶಿಕ್ಷಕ  ಬೆರಳು ತೋರಿಕೆ ಕೇಂದ್ರಿತ  ಶೈಕ್ಷಣಿಕ ವ್ಯವಸ್ಥೆಯಿಂದ ಹೊರಬರಲಾಗಿದೆ. ಅಂಕಗಳ ಆಧಾರಿತ  ಪರೀಕ್ಷಾ ಪ್ರಾಧಾನ್ಯತೆಗಿಂತ ವಿದ್ಯಾರ್ಥಿಗಳ ಗ್ರಹಿಕಾ ಶಕ್ತಿ ಅಭಿವ್ಯಕ್ತಿಯ ವೇದಿಕೆ ಕೇಂದ್ರಿತ ಪ್ರಾಯೋಗಿಕ ಶಿಕ್ಷಣಕ್ಕೆ ಪ್ರಾಮುಖ್ಯತೆ ದೊರೆಯಬೇಕಾಗಿದೆ.

ಶಿಕ್ಷಕರಿಗೆ ಜೀವನ ಭದ್ರತೆ ಅಗತ್ಯ :

ಶಿಕ್ಷಣದ  ಆನ್ವಯಿಕ ಹೊಸ ಹೊಸ ಪ್ರಯೋಗಗಳು ಪರಿಣಾಮಕಾರಿ ಅನುಷ್ಠಾನಗೊಂಡು ಮಕ್ಕಳ ಮನೋವಿಕಾಶ ಆಗಬೇಕಾದರೆ, ಅವರನ್ನು ಸಜ್ಜುಗೊಳಿಸುವ ಶಿಕ್ಷಕರ ಜೀವನ ಕ್ರಮಕ್ಕೆ  ಭದ್ರತೆ ದೊರೆತರೆ ಮಾತ್ರ ಸಾಧ್ಯವಿದೆ. ಇಂದು ಬಹುಸಂಖ್ಯಾತ ಶಿಕ್ಷಕರು ಜೀವನದ ಅಭದ್ರತೆಯಲ್ಲಿ ಜೀವಿಸುತ್ತಿದ್ದಾರೆ. ಶಿಕ್ಷಕರು ಶಾರೀರಿಕ ಮತ್ತು ಮಾನಸಿಕವಾಗಿ ಸದೃಢತೆ ಸಾಧಿಸಬೇಕಾದರೆ ಅವರ ವೃತ್ತಿ ಹಾಗೂ ಆರ್ಥಿಕ ಭದ್ರತೆ ಒದಗಿಸುವುದು ತುಂಬಾ ಮುಖ್ಯವಾಗಿದೆ.

ನೇಮಕಾತಿಯ ಮಾನದಂಡಗಳು ಕಠಿಣವಾಗಬೇಕು:

ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ಅರ್ಹ ಶಿಕ್ಷಕರ ನೇಮಕಾತಿ ನಡೆಯುವಾಗ ಭ್ರಷ್ಟತೆಗೆ ಅವಕಾಶ ಕಲ್ಪಿಸದೆ ಸರ್ಕಾರದ ನೇಮಕಾತಿ ನಿಯಮಗಳನ್ನು ಪ್ರಾಮಾಣಿಕವಾಗಿ ಪಾಲಿಸಿ ಪಾರದರ್ಶಕತೆ ಆದ್ಯತೆ ನೀಡಬೇಕು. ಅರ್ಹ ಶಿಕ್ಷಕರು ನೇಮಕಾತಿಗೊಂಡಾಗ ವೃತ್ತಿ ಗೌರವ ಪಾಲಿಸಬೇಕು ಎಂದು  ಡಾ. ವಿಷ್ಣು ಶಿಂಧೆ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸಂದರ್ಶನ : ಡಾ. ಕೆ.ಎನ್.‌ ದೊಡ್ಡಮನಿ

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ಎಂಜನಿಯರಿಂಗ್ ಪರೀಕ್ಷೆ ಮುಗಿಸಿ ಹೊರಬರುವಷ್ಟರಲ್ಲಿ ಫಲಿತಾಂಶ ಲಭ್ಯ - ವಿಟಿಯು ಸಾಧನೆ  ಶಿಕ್ಷಣ

ಎಂಜನಿಯರಿಂಗ್ ಪರೀಕ್ಷೆ ಮುಗಿಸಿ ಹೊರಬರುವಷ್ಟರಲ್ಲಿ ಫಲಿತಾಂಶ ಲಭ್ಯ - ವಿಟಿಯು ಸಾಧನೆ

6ನೇ ಸೆಮಿಸ್ಟರ್ ಪರೀಕ್ಷೆಗೆ ರಾಜ್ಯದ ವಿವಿಧ ಕಾಲೇಜುಗಳಲ್ಲಿ  60 ಸಾವಿರದ 856 ವಿದ್ಯಾರ್ಥಿಗಳು ಹಾಜರಿದ್ದರು. ಈ ಪೈಕಿ 46 ಸಾವಿರದ 762 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಪ್ರತಿಶತ 76.84 ಫಲಿತಾಂಶ ದಾಖಲಾಗಿದೆ. ಇತ್ತೀಚಿಗೆ 8 ನೇ ಸೆಮಿಸ್ಟರ್ ಫಲಿತಾಂಶವನ್ನು ಕೇವಲ 10 ನಿಮಿಷದಲ್ಲಿ ಪ್ರಕಟಿಸಲಾಗಿತ್ತು. ಈ ಮೂಲದ  ಫಲಿತಾಂಶ ಪ್ರಕಟಿಸಲು 10 ರಿಂದ 12 ದಿನಗಳ ತೆಗೆದುಕೊಳ್ಳಲಾಗುತ್ತಿತ್ತು. ಪ್ರಸ್ತುತ 5 ನಿಮಿಷದಲ್ಲಿ ಫಲಿತಾಂಶ ನೀಡಲಾಗಿದೆ.

Admin