ಬ್ರೇಕಿಂಗ್
◆ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕದ ಸೂಕ್ತ ಸ್ಪಂದನೆಗೆ ಆಗ್ರಹಿಸಿ ಸರ್ಕಾರಿ ಸೌಲಭ್ಯ ‌ನಿರಾಕರಿಸಿದ ಶಾಸಕ ಶರಣಗೌಡ ◆"ಪತ್ರಕರ್ತ ಜವಾಬ್ದಾರಿಯಿಂದ ನುಣಚಿಕೊಂಡರೆ ಸತ್ಯ ಸಾಯುತ್ತದೆ" ◆ಇಮಾಮ್ ಅವರಿಗೆ ಶನಿವಾರ ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ◆ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ ◆ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ ◆ಟನ್ ಕಬ್ಬಿಗೆ 3,600 ಕಾರ್ಖಾನೆಗಳ ನಿಗದಿಗೆ ನಿಟ್ಟುಸಿರು ಬಿಟ್ಟ ರೈತರು ಹೋರಾಟದ ಬಿಸಿ ಉಸಿರು ◆ಬೆಳಗಾವಿ ಪಾಲಿಕೆಯಿಂದ ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ ◆ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ ◆ಗಣಿ ಇಲಾಖೆ ಸಿಬ್ಬಂದಿಗೆ ಅನಧಿಕೃತ ಹಣದ ವಹಿವಾಟು- ಉಪ ಲೋಕಾಯುಕ್ತ ಬಿ. ವೀರಪ್ಪ ◆ಮರು ನೋಂದಣಿ ಮಾಡದ ಶಾಲಾ ವಾಹನ, ಅನಧಿಕೃತ ವಾಹನಗಳ ಮುಲಾಜಿಲ್ಲದೆ ಜಪ್ತಿ ಮಾಡಿ- ಉಪ ಲೋಕಾಯುಕ್ತರ ಕಡಕ್ ಸೂಚನೆ ◆ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕದ ಸೂಕ್ತ ಸ್ಪಂದನೆಗೆ ಆಗ್ರಹಿಸಿ ಸರ್ಕಾರಿ ಸೌಲಭ್ಯ ‌ನಿರಾಕರಿಸಿದ ಶಾಸಕ ಶರಣಗೌಡ ◆"ಪತ್ರಕರ್ತ ಜವಾಬ್ದಾರಿಯಿಂದ ನುಣಚಿಕೊಂಡರೆ ಸತ್ಯ ಸಾಯುತ್ತದೆ" ◆ಇಮಾಮ್ ಅವರಿಗೆ ಶನಿವಾರ ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ◆ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ ◆ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ ◆ಟನ್ ಕಬ್ಬಿಗೆ 3,600 ಕಾರ್ಖಾನೆಗಳ ನಿಗದಿಗೆ ನಿಟ್ಟುಸಿರು ಬಿಟ್ಟ ರೈತರು ಹೋರಾಟದ ಬಿಸಿ ಉಸಿರು ◆ಬೆಳಗಾವಿ ಪಾಲಿಕೆಯಿಂದ ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ ◆ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ ◆ಗಣಿ ಇಲಾಖೆ ಸಿಬ್ಬಂದಿಗೆ ಅನಧಿಕೃತ ಹಣದ ವಹಿವಾಟು- ಉಪ ಲೋಕಾಯುಕ್ತ ಬಿ. ವೀರಪ್ಪ ◆ಮರು ನೋಂದಣಿ ಮಾಡದ ಶಾಲಾ ವಾಹನ, ಅನಧಿಕೃತ ವಾಹನಗಳ ಮುಲಾಜಿಲ್ಲದೆ ಜಪ್ತಿ ಮಾಡಿ- ಉಪ ಲೋಕಾಯುಕ್ತರ ಕಡಕ್ ಸೂಚನೆ
19 ನವೆಂ 2026
ವಾಯುವ್ಯ ಸಾರಿಗೆ ಸಂಸ್ಥೆಗೆ ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ ನಾಮಕರಣ; ಚನ್ನಮ್ಮ ಫ್ರೀಡಂ ಪಾರ್ಕ್ ನಿರ್ಮಾಣ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ
📄 ಕರ್ನಾಟಕ ಸುದ್ದಿ
Dr. K N Doddmani · · 55 ವೀಕ್ಷಣೆಗಳು

ವಾಯುವ್ಯ ಸಾರಿಗೆ ಸಂಸ್ಥೆಗೆ ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ ನಾಮಕರಣ; ಚನ್ನಮ್ಮ ಫ್ರೀಡಂ ಪಾರ್ಕ್ ನಿರ್ಮಾಣ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ

ಜನರು ಅಧಿಕಾರ ನೀಡಿದ್ದಾರೆ; ಅವರ ಋಣವನ್ನು ತೀರಿಸಲು ಪ್ರಾಮಾಣಿಕ ಪ್ರಯತ್ನ‌ ಮಾಡಲಾಗುವುದು. ಕಿತ್ತೂರು ಚನ್ನಮ್ಮ ಎಲ್ಲರ ಬದುಕಿಗೆ ಮಾದರಿಯಾಗಲಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾರೈಯಿಸಿದರು

ಮೂರು ದಿನಗಳ‌ ವಿಜೃಂಭನೆಯ  ಕಿತ್ತೂರು ಉತ್ಸವಕ್ಕೆ ತೆರೆ

ವಾಯುವ್ಯ ಸಾರಿಗೆ ಸಂಸ್ಥೆಗೆ ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ ನಾಮಕರಣ; ಚನ್ನಮ್ಮ ಫ್ರೀಡಂ ಪಾರ್ಕ್ ನಿರ್ಮಾಣ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ

***

ಕಳೆದ ಮೂರು ದಿನಗಳಿಂದ ಅತ್ಯಂತ ವಿಜೃಂಭಣೆಯಿಂದ ‌ಜರುಗಿದ ಕಿತ್ತೂರು ಉತ್ಸವಕ್ಕೆ‌ ಇಂದು ಸಂಜೆ ತೆರಿಬಿದ್ದಿತು.

 ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಉಪಸ್ಥಿತಿಯಲ್ಲಿ ‌ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದ ಜರುಗಿತು.ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.   ಹಿರಿಯ ಲೇಖಕಿ  ಪ್ರೊಫೆಸರ  ಸವಿತಾ ಬನ್ನಾಡಿ , ಸಕ್ಕರೆ ಹಾಗೂ ಜವಳಿ ಖಾತೆ  ಸಚಿವ ರುದ್ರಪ್ಪ ಲಮಾಣಿ,  ಸಚಿವ ಮಲ್ಲಿಕಾರ್ಜುನ,  ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕರಾದ ಲಕ್ಷ್ಮೀ ಹೆಬ್ಬಾಕರ, ಮಹಾಂತೇಶ ಕೌಜಲಗಿ, ರಾಜು ಸೇಠ, ಕೋನರೆಡ್ಡಿ , ವಿಶ್ವಾಸ ವೈದ್ಯ, ಚೆನ್ನರಾಜ ಹಟ್ಟಿಹೊಳಿ, ಕಿತ್ತೂರು ರಾಜಗುರುಮಠದ ಮಡಿವಾಳ ರಾಜೇಂದ್ರ ಸ್ವಾಮಿಜಿ,  ನಿಚ್ಚಾಣಕಿ ಮಠದ ಪಂಚಾಕ್ಷರಿ ಸ್ವಾಮಿಜಿ, ಬೈಲೂರಿನ ನಿಜಗುಣಾನಂದ ಸ್ವಾಮಿಜಿ , ಕಾದರೊಳ್ಳಿಯ ಡಾ. ಪಾಲಾಕ್ಷಿ ಶಿವಯೋಗಿಶ್ವರ, ಸೇರಿದಂತೆ ಹಿರಿಯ ಅಧಿಕಾರಿಗಳು ಅನೇಕ ಗಣ್ಯರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, "ಕಿತ್ತೂರು ಪ್ರವಾಸಿ ಕೇಂದ್ರವನ್ನಾಗಿ ಪರಿವರ್ತಿಸುವ ಹಿನ್ನೆಲೆಯಲ್ಲಿ  ಕೋಟೆಯ ಆವರಣದಲ್ಲಿ ಇತಿಹಾಸದ ಮಹತ್ವ ಸಾರಲು ಅನಾವರಣಗೊಳಿಸಲು ದೃಶ್ಯಕಾವ್ಯ ರೂಪದ "ಫ್ರೀಡಂ ಪಾರ್ಕ್" ನಿರ್ಮಿಸಲು ತಕ್ಷಣ ಆದೇಶ ಹೊರಡಿಸಲಾಗುವುದು. ಹಾಗೂ ಪಾರ್ಕ್ ನಿರ್ಮಾಣಕ್ಕೆ ವೆಚ್ಚಕ್ಕಾಗಿ ಮುಂಬರುವ ವಾರ್ಷಿಕ ಬಜೆಟ್‌ನಲ್ಲಿ  40 ಕೋಟಿ ರೂಪಾಯಿ  ಅನುದಾನ ನೀಡಲಾಗುವುದು" ಎಂದು  ಭರವಸೆ ನೀಡಿದ್ದಾರೆ.

"ವಾಯವ್ಯ ಸಾರಿಗೆ ಸಂಸ್ಥೆಯ ಹೆಸರನ್ನು ಮುಂಬರವ ದಿನಗಳಲ್ಲಿ "ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ" ನಿಗಮ ಎಂದು ನಾಮಕರಣ ಮಡಲಾಗುವುದು ಎಂದು ತಿಳಿಸಿದ ಅವರು, ಕಿತ್ತೂರು ಭಾಗಕ್ಕೆ ಅನುಕೂಲವಾಗುವಂತೆ 520 ಕೋಟಿ ರೂಪಾಯಿ ವೆಚ್ಚದ ಚನ್ನವೃಷಭೇಂದ್ರ ನೀರಾವರಿ ಯೋಜನೆಗೂ ಅಗತ್ಯ ಅನುದಾನ ನೀಡಲಾಗುವುದು" ಎಂದು ಹೇಳಿದರು.

ಕಿತ್ತೂರು ರಾಣಿ  ಚನ್ನಮ್ಮ ಕನ್ನಡನಾಡಿನ‌ ದಿಟ್ಟ ಹೋರಾಟಗಾರ್ತಿ. ಚನ್ನಮ್ಮಳ ಸಾಹಸ ನಮಗೆಲ್ಲ ಸ್ಫೂರ್ತಿ. ಚನ್ನಮ್ಮಳ ತ್ಯಾಗ ಅಜರಾಮರವಾಗಿದ್ದು, ಅವಳ ಧೈರ್ಯ ಇತಿಹಾಸ ಅಲ್ಲ; ಭವಿಷ್ಯದ ನವಪೀಳಿಗೆಗೆ ಸ್ವಾಭಿಮಾನದ ಪಾಠವಾಗಿದೆ.ಕಿತ್ತೂರು ರಾಣಿ ಚನ್ನಮ್ಮಳ ಸ್ವಾಭಿಮಾನ, ಶೌರ್ಯ ಸಾಹಸದ‌ ಪರಂಪರೆ ಈ ನೆಲದಲ್ಲಿ ಮುಂದುವರಿದಿದೆ. ಜನರು ಅಧಿಕಾರ ನೀಡಿದ್ದಾರೆ; ಅವರ ಋಣವನ್ನು ತೀರಿಸಲು ಪ್ರಾಮಾಣಿಕ ಪ್ರಯತ್ನ‌ ಮಾಡಲಾಗುವುದು. ಕಿತ್ತೂರು ಚನ್ನಮ್ಮ ಎಲ್ಲರ ಬದುಕಿಗೆ ಮಾದರಿಯಾಗಲಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾರೈಯಿಸಿದರು.

ದೇಶಿ ಸಂಸ್ಥಾನಗಳು ಒಗ್ಗಟ್ಟಾಗಿದ್ದರೆ, ಬ್ರಿಟಿಷ್ ರಿ ಸ್ವಾಭಿಮಾನ ಒತ್ತೆ ಇಡದಿದ್ದರೆ ಬ್ರಿಟಿಷ್ ಆಡಳಿತ ಎಂದೋ ಕೊನೆಗೊಳ್ಳುತ್ತಿತ್ತು: ಸಬಿತಾ ಬನ್ನಾಡಿ :      

ಸಬಿತಾ ಬನ್ನಾಡಿ ಮಾತನಾಡಿ, ದಾಸ್ಯದ ನರಕ್ಕಿಂತ ಸ್ವಾತಂತ್ರ್ಯದ ಸ್ವರ್ಗ ಲೇಸು ಎಂಬ ಸತ್ಯ ಕಂಡುಕೊಂಡು  ಕಿತ್ತೂರು ರಾಣಿ ಚೆನ್ನಮ್ಮ ಜನಪರ ನ್ಯಾಯ, ನೀತಿ, ಸ್ವಾಭಿಮಾನ, ಸ್ವಾತಂತ್ರ್ಯ ಉಳಿಸಿಕೊಳ್ಳುವದ ಸಲುವಾಗಿ  ಬ್ರಿಟಿಷರ ವಿರುದ್ದ  ಒಬ್ಬ ಮಹಿಳೆಯಾಗಿ ಹೋರಾಟ ನಡೆಸಿ ವೀರತ್ವ ಮೆರೆದಿದ್ದಾಳೆ.  ರಾಣಿ ಚೆನ್ನಮ್ಮ, ಅಬ್ಬಕ್ಕ, ರುದ್ರಮ್ಮ, ವೀರಮ್ಮ ಮಹಿಳೆಯರು ಅಂದು ಪಡೆದ ವಿದ್ಯೆ, ತರಬೇತಿಯ ಜ್ಞಾನಶಕ್ತಿಯಿಂದ ಆತ್ಮವಿಶ್ವಾಸ ಹೊಂದಿದ ಕಾರಣ ಬ್ರಿಟಿಷರನ್ನು ಎದುರಿಸುವ ಸಾಮರ್ಥ್ಯ ಹೊಂದಿದ್ದರು. ದೇಶಿ ಸಂಸ್ಥಾನಗಳು ಒಗ್ಗಟ್ಟಾಗಿದ್ದರೆ ಬ್ರಿಟಿಷರು ದೀರ್ಘ  ಕಾಲದವರೆ ಆಡಳಿತ ನಡೆಸಲು ಸಾಧ್ಯವಾಗುತ್ತಿರಲಿಲ್ಲ.  ದೇಶದ ಎಲ್ಲ ಬಗೆಯ ಸಂಪತ್ತು ಲೂಟಿ ಆಗುತ್ತಿರಲಿಲ್ಲ. ರಾಣಿ ಚೆನ್ನಮ್ಮನ ಹೋರಾಟಕ್ಕೆ ದೇಶಿ ಸಂಸ್ಥಾನಗಳ ಬೆಂಬಲ ಅಂದು ದೊರಕಿದ್ದರೆ  ಚೆನ್ನಮ್ಮ ಹೋರಾಟ ಹೊಸ ಇತಿಹಾಸ ಸೃಷ್ಟಿಯಾಗುತ್ತಿತ್ತು.  ಬ್ರಿಟಿಷರ ಎಂಜಲು ಕಾಸುಕ್ಕಾಗಿ ಸ್ವಾಭಿಮಾನ ಮಾರಿಕೊಂಡವರಿಂದ ಕೆಲವರ ಕುತಂತ್ರದ ಕಾರಣ ರಾಣಿ ಚೆನ್ನಮ್ಮನಂಥ ಹೋರಾಟಗಾರರು ಬ್ರಿಟಿಷರಿಂದ ಸೋಲು ಅನುಭವಿಸಬೇಕಾಯಿತು ಎಂದು ತಿಳಿಸಿದರು.

***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕದ ಸೂಕ್ತ ಸ್ಪಂದನೆಗೆ ಆಗ್ರಹಿಸಿ ಸರ್ಕಾರಿ ಸೌಲಭ್ಯ ‌ನಿರಾಕರಿಸಿದ ಶಾಸಕ ಶರಣಗೌಡ ಕರ್ನಾಟಕ ಸುದ್ದಿ

ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕದ ಸೂಕ್ತ ಸ್ಪಂದನೆಗೆ ಆಗ್ರಹಿಸಿ ಸರ್ಕಾರಿ ಸೌಲಭ್ಯ ‌ನಿರಾಕರಿಸಿದ ಶಾಸಕ ಶರಣಗೌಡ

ಗುರುಮಿಟ್ಕಲ್ ಶಾಸಕ ಶರಣಗೌಡ ಕಂದಕೂರು ಅವರ ನಿರ್ಧಾರದ ಹಿಂದಿರುವ ಕಾಳಜಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಇನ್ನೂಳಿದ ಜನಪ್ರತಿನಿಧಿಗಳಿಗೆ ಈ ಭಾಗದ ಸಮಸ್ಯೆಗಳ ಸ್ಪಂದನೆಗೆ ಸರ್ಕಾರದ ಮೇಲೆ ಒತ್ತಡ ತರುವ ಪ್ರಬಲವಾದ ನಿರ್ಧಾರಕ್ಕೆ ಕಾರಣವಾಗಬಹುದೇ ಕಾಯ್ದು ನೋಡಬೇಕಾಗಿದೆ!

Admin
ರೈತರು ಹಾಗ ಕಾರ್ಖಾನೆ ಮಾಲೀಕರರೊಂದಿಗಿನ ಸಂವಾದ ಸುಖಾಂತ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕರ್ನಾಟಕ ಸುದ್ದಿ

ರೈತರು ಹಾಗ ಕಾರ್ಖಾನೆ ಮಾಲೀಕರರೊಂದಿಗಿನ ಸಂವಾದ ಸುಖಾಂತ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ

"ಕಳೆದ 10 ವರ್ಷಗಳಿಂದ ಕೇಂದ್ರ ಸರ್ಕಾರ ಕಬ್ಬಿನ ಬೆಲೆ ನಿಗದಿ ಮಾಡದೇ ಇರುವುದರಿಂದ ಸಮಸ್ಯೆ ತೀವ್ರಗೊಂಡಿದೆ. ಈ ಬಗ್ಗ ಸೂಕ್ತ ತೀಮಾರ್ಣ ತೆಗೆದುಕೊಳ್ಳುವ ಬಗ್ಗೆ ಕರ್ನಾಟಕದವರೇ ಆದ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಇವರು ಭರವಸೆ ನೀಡಿದ್ದಾರೆ. ಅವರು ಕಬ್ಬಿಗೆ ಸೂಕ್ತ ಬೆಲೆ ನಿಗದಿಗೊಳಿಸುವ ಬಗ್ಗೆ ಸರ್ಕಾರ, ರೈತರು ಹಾಗೂ ಕಾರ್ಖಾನೆಯವರು ವಿಶ್ವಾಸ ಹೊಂದಿದ್ದಾರೆ"

Admin