ಬ್ರೇಕಿಂಗ್
◆"ಪತ್ರಕರ್ತ ಜವಾಬ್ದಾರಿಯಿಂದ ನುಣಚಿಕೊಂಡರೆ ಸತ್ಯ ಸಾಯುತ್ತದೆ" ◆ಇಮಾಮ್ ಅವರಿಗೆ ಶನಿವಾರ ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ◆ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ ◆ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ ◆ಟನ್ ಕಬ್ಬಿಗೆ 3,600 ಕಾರ್ಖಾನೆಗಳ ನಿಗದಿಗೆ ನಿಟ್ಟುಸಿರು ಬಿಟ್ಟ ರೈತರು ಹೋರಾಟದ ಬಿಸಿ ಉಸಿರು ◆ಬೆಳಗಾವಿ ಪಾಲಿಕೆಯಿಂದ ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ ◆ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ ◆ಗಣಿ ಇಲಾಖೆ ಸಿಬ್ಬಂದಿಗೆ ಅನಧಿಕೃತ ಹಣದ ವಹಿವಾಟು- ಉಪ ಲೋಕಾಯುಕ್ತ ಬಿ. ವೀರಪ್ಪ ◆ಮರು ನೋಂದಣಿ ಮಾಡದ ಶಾಲಾ ವಾಹನ, ಅನಧಿಕೃತ ವಾಹನಗಳ ಮುಲಾಜಿಲ್ಲದೆ ಜಪ್ತಿ ಮಾಡಿ- ಉಪ ಲೋಕಾಯುಕ್ತರ ಕಡಕ್ ಸೂಚನೆ ◆ಮುಚ್ಚಂಡಿ ಗ್ರಾಮ ಪಂಚಾಯತಿ: ಕರ್ತವ್ಯ ಲೋಪ, ಅನುದಾನ ದುರ್ಬಳಕೆ - ಮುಲಾಜಿಲ್ಲದೆ ಕ್ರಮ - ಉಪ ಲೋಕಾಯುಕ್ತರ ಎಚ್ಚರಿಕೆ ◆"ಪತ್ರಕರ್ತ ಜವಾಬ್ದಾರಿಯಿಂದ ನುಣಚಿಕೊಂಡರೆ ಸತ್ಯ ಸಾಯುತ್ತದೆ" ◆ಇಮಾಮ್ ಅವರಿಗೆ ಶನಿವಾರ ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ◆ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ ◆ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ ◆ಟನ್ ಕಬ್ಬಿಗೆ 3,600 ಕಾರ್ಖಾನೆಗಳ ನಿಗದಿಗೆ ನಿಟ್ಟುಸಿರು ಬಿಟ್ಟ ರೈತರು ಹೋರಾಟದ ಬಿಸಿ ಉಸಿರು ◆ಬೆಳಗಾವಿ ಪಾಲಿಕೆಯಿಂದ ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ ◆ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ ◆ಗಣಿ ಇಲಾಖೆ ಸಿಬ್ಬಂದಿಗೆ ಅನಧಿಕೃತ ಹಣದ ವಹಿವಾಟು- ಉಪ ಲೋಕಾಯುಕ್ತ ಬಿ. ವೀರಪ್ಪ ◆ಮರು ನೋಂದಣಿ ಮಾಡದ ಶಾಲಾ ವಾಹನ, ಅನಧಿಕೃತ ವಾಹನಗಳ ಮುಲಾಜಿಲ್ಲದೆ ಜಪ್ತಿ ಮಾಡಿ- ಉಪ ಲೋಕಾಯುಕ್ತರ ಕಡಕ್ ಸೂಚನೆ ◆ಮುಚ್ಚಂಡಿ ಗ್ರಾಮ ಪಂಚಾಯತಿ: ಕರ್ತವ್ಯ ಲೋಪ, ಅನುದಾನ ದುರ್ಬಳಕೆ - ಮುಲಾಜಿಲ್ಲದೆ ಕ್ರಮ - ಉಪ ಲೋಕಾಯುಕ್ತರ ಎಚ್ಚರಿಕೆ
18 ನವೆಂ 2026
ಭರವಸೆ ವಿಶ್ವಾಸಕ್ಕೆ ಸಧ್ಯ ತಣ್ಣಗಾದ ರೈತ ಹೋರಾಟ
🌾 ಕೃಷಿ
Dr. K N Doddmani · · 96 ವೀಕ್ಷಣೆಗಳು

ಭರವಸೆ ವಿಶ್ವಾಸಕ್ಕೆ ಸಧ್ಯ ತಣ್ಣಗಾದ ರೈತ ಹೋರಾಟ

ಅಸ್ಮಿತೆ ವರದಿ, ೧೯:  ಪ್ರತಿ ಟನ್ ಕಬ್ಬಿಗೆ ನ್ಯಾಯಯುತ ಸೂಕ್ತ ಬೆಲೆಗೆ ಆಗ್ರಹಿಸಿ ಕಳೆದ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಹೋರಾಟದಲ್ಲಿ ಸಾವು ನೋವುಗಳೂ ಸಂಭವಿಸಿವೆ. ಬೆಳಗಾವಿಯಲ್ಲಿ ರಾಜ್ಯ ವಿಧಾನ ಮಂಡಲ ಅಧಿವೇಶನವೂ ಸಹಿತ ಹೋರಾಟದ ಕಾವು ಅನುಭವಿಸುತ್ತ ಬಂದಿದೆ. ಹೋರಾಟದ ನಾಯಕತ್ವದ ಹೊಸಬರು ಸೇರ್ಪಡೆಗೊಂಡು ಕಾವು ಏರುತ್ತಲೇ ಬಂದಿದೆ ಹೊರತು ಇಳಿಮುಖ ಕಂಡಿಲ್ಲ. ಕಬ್ಬು ಕಟಾವು ಇನ್ನೇನು ಆರಂಭವಾಗುತ್ತದೆ ಎನ್ನುತ್ತಿದ್ದಂತೆ ಬೆಲೆ ನಿಗದಿಗೆ ಕಬ್ಬು ಬೆಳೆಗಾರರು ಬೀದಿಗಿಳಿಯುವ ಅನಿವಾರ್ಯತೆ ಎನ್ನುವಂತೆ ಮುಂದುವರೆಯುತ್ತಿದೆ.

ಇದರ ಮುಂದುವರಿಕೆಯಾಗಿ ಈಸಲ ರೈತರು  ಸಣ್ಣ ಬೀದಿ ತೋರೆದು ರಾಷ್ಟ್ರೀಯ ಹೆದ್ದಾರಿಯ ಮೇಲೆ ಬಂದು ಬಂದ್ ಮಾಡಿದರು. ಉಪವಾಸ, ಸಂಕಷ್ಟಗಳ ಮಧ್ಯ ಹಲಗುರಾತ್ರಿ ಹಸಿರು ಶಾಲು ಬೀಸಿದರು, ಬಾರಕೋಲಿನ ಅವಾಜ್ ಮಾಡಿದರು. ಭಜನೆ ಮಾಡಿ ಶೋಕ ವ್ಯಕ್ತಪಡಿಸಿದರು; ಉರುಳು ಸೇವೆಯೂ ನಡೆಯಿತು.

ರಾಷ್ಟ್ರೀಯ ಹೆದ್ದಾರಿಯ ಮೇಲೆ ನಮ್ಮ ಜನವೇ ಸಂಚರಿಸುವುದು ಎಂದು ಮಮ್ಮಲ ಮರುಗಿದ ಹೋರಾಟಗಾರರು ಒಂದು ಮಾರ್ಗ ಮುಕ್ತವಾಗಿಸಿ, ಇನ್ನೊಂದು ಮಾರ್ಗದಿಂದ ರೈತರ ಕಾಲ್ನಡಿಗೆಯ ಆಕ್ರೋಶದ ಮೆರವಣಿಗೆ ಕಿತ್ತೂರು ನೆಲ ಮುಟ್ಟುತ್ತಿದ್ದಂತೆ ಮುಖ್ಯಮಂತ್ರಿಗಳು ರೈತರತ್ತ‌ ಧಾವಿಸಿದರು.

ಸರ್ಕಾರವೇ ರೈತರ ಬಳಿ ಬಂತು. ಕೇಂದ್ರ ಸರ್ಕಾರವಾದರೂ ರೈತರ ಬಳಿ ಬಂದು ಮಾತನಾಡಬೇಕಾದ ಸಂದರ್ಭದಲ್ಲಿ ರೈತರನ್ನು ದೆಹಲಿಗೆ ಕರೆಯಿಸಿಕೊಂಡಾಗ ಬೇಡಿಕೆ ಈಡೇರುವ ಭರವಸೆ ಹೊಂದಿರಲಿಲ್ಲ. ಹಿಂದಿನ ದಿನವೇ ಮುಖಂಡರು ರಾಷ್ಟ್ರೀಯ ಹೆದ್ದಾರಿಗೆ ಇಳಿಯುವುದಾಗಿ ಎಚ್ಚರಿಕೆ ನೀಡಿದ್ದರು. ಎಥಾ ಪ್ರಕಾರ ಸಮಿತಿ ರಚಿಸಿ ಕ್ರಮ ತೆಗೆದುಕೊಳ್ಳುವ ಕೇಂದ್ರದ ಭರವಸೆಗೆ ಮಣೆಯದ‌ ರೈತರು ಎಚ್ಚರಿಕೆ ನೀಡಿದಂತೆ ಹೆದ್ದಾರಿ ಆಕ್ರಮಿಸಿದರು.

ಪರಿಸ್ಥಿತಿ ಬಿಗಡಾಯಿಸುತ್ತ ಹೋದಂತೆ ಮುಖ್ಯಮಂತ್ರಿ‌ ಕಿತ್ತೂರಿನಲ್ಲಿ ರೈತರಿಗೆ ಕೈಮುಗಿದು ಬೇಡಿಕೊಂಡು ಶಾಶ್ವತ ಪರಿಹಾರಕ್ಕೆ ಉನ್ನತ ಮಟ್ಟದ ಸಭೆ ನಡೆಸಿ, ಪ್ರಧಾನಿಯವರನ್ನು ಕಂಡು ಆಗ್ರಹಿಸಲಾಗುವುದು ಎಂದು ಭರವಸೆ ನೀಡಿದರು.

ಆದರೆ, ರೈತರು 5500/ ರೂ ಬೆಲೆಗೆ ಆಗ್ರಹಿಸಿ ಕೇಂದ್ರದ ಸಚಿವ ಮನೆಯತ್ತ ಮುಖಮಾಡಿ ಮುನ್ನಡೆದರು. ಮನೆಗೆ ಮುತ್ತಿಗೆ ಹಾಕುವುದಾಗಿ ಹೇಳಿ ಮುನ್ನುಗಿದ ರೈತರು ಪೊಲೀಸ್ ಬೇಲಿಯನ್ನು ಭೇದಿಸುವ ಪ್ರಯತ್ನ ಮಾಡಿದರು.

ಈ ಎಲ್ಲ ಬೆಳವಣಿಗೆಯ ಮಧ್ಯ ಕೇಂದ್ರ ಮತ್ತಷ್ಟು ಎಚ್ಚರಗೊಂಡು ನಡುರಾತ್ರಿಯಲ್ಲಿ ಸಭೆ ನಡೆಸಿ ಮನವರಿಕೆ ಮಾಡುವ ಪ್ರಯತ್ನ ಸಧ್ಯ ಹೊರಾಟದ ಸ್ಥಗೀತಕ್ಕೆ ಕಾರಣವಾಗಿದೆ.

ನಿನ್ನೆಯ ದಿನ ತಡರಾತ್ರಿ ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಕೇಂದ್ರ ಸಚಿವರಾದ  ಪ್ರಲ್ಹಾದ ಜೋಶಿಯವರ ನೇತೃತ್ವದಲ್ಲಿ ಹೋರಾಟ ನಿರತ ಕಬ್ಬು ಬೆಳೆಗಾರ ರೈತರೊಂದಿಗೆ ಸಭೆ ನಡೆಸಿ ರೈತರ ಬೇಡಿಕೆಗಳ ಕುರಿತು ಸಮಿತಿಯ ತಜ್ಞರೊಂದಿಗೆ ಚರ್ಚಿಸಿ ಶೀಘ್ರದಲ್ಲಿಯೇ ಉತ್ತಮ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಲಾಯಿತು.

 ಮನವಿಗೆ ಸ್ಪಂದಿಸಿ ಸಹಕರಿಸಿದ ರೈತ ಮುಖಂಡರಾದ  ಚೂನಪ್ಪ ಪೂಜಾರಿ ಹಾಗೂ  ಶಶಿಕಾಂತ ಗುರೂಜಿ ಅವರ ನಿಯೋಗಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ, ಮಾಜಿ ಸಚಿವರು ಹಾಗೂ ಶಾಸಕರ ಸಿ. ಸಿ. ಪಾಟೀಲ್, ಶಾಸಕ ಮಹೇಶ್ ತಂಗಿನಕಾಯಿ, ಬೆಳಗಾವಿ ಹಾಗೂ ಧಾರವಾಡ ಜಿಲ್ಲಾಧಿಕಾರಿಗಳು, ಹುಬ್ಬಳ್ಳಿ  ಧಾರವಾಡ ಪೊಲೀಸ್ ಆಯುಕ್ತ  ಭೂಷಣ ಬೊರಸೆ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ, ರಚಿಸಲಾಗುವ ಸಮಿತಿ, ಕರ್ನಾಟಕ ಸೇರಿದಂತೆ ಕಬ್ಬು ಬೆಳೆಯುವ ವಿವಿಧ ರಾಜ್ಯಗಳ ಕಬ್ಬು ಅರಿಯುವ ಪ್ರಕ್ರಿಯೆ, ಸಕ್ಕರೆ ಹಾಗೂ ಇತರೆ ಉತ್ಪಾದನೆಗಳ ಮಟ್ಟ, ಗುಣಮಟ್ಟ ಮತ್ತು ಮಾರುಕಟ್ಟೆ ವ್ಯವಸ್ಥೆ ಎಲ್ಲವುಗಳ ಅಧ್ಯಯನ ಮಾಡಿ, ವರದಿ ಸಲ್ಲಿಸಲು ಒಂದು ತಿಂಗಳು ಕಾಲಾವಕಾಶ ಬೇಕಾಗುತ್ತದೆ ಎಂದು ರೈತರಿಗೆ ಮನವರಿಕೆ ಮಾಡಲಾಗಿದೆ.

ಸಮಿತಿಯ ವರದಿಯ ನಂತರ, ಸಕಾರಾತ್ಮಕವಾದ ನಿಲುವು ತೆಗೆದುಕೊಂಡು ರೈತರಿಗೆ ಅನ್ಯಾಯ ಆಗದಂತೆ ನ್ಯಾಯ ಒದಗಿಸಲಾಗುವುದು ಎಂದು ತಿಳಿಸಿ, ಸಹಕರಿಸಲು ಕೇಳಿದಾಗ, ರೈತರು ಒಪ್ಪಿಗೆ ಸೂಚಿಸಿ ತಣ್ಣದಾದ ಅನುಮತಿ ನೀಡಿ ಪ್ರತಿಭಟನೆ ಕೈಬಿಟ್ಟಿದ್ದಾರೆ.

ರೈತ ಮುಖಂಡರು ಮಾಧ್ಯಮಗಳಿಗೆ ನೀಡಿದ ಹೇಳಿಕೆಗಳನ್ನು ಗಮನಿಸಿದಾಗ ನ್ಯಾಯ ಸಿಗದಿದ್ದರೆ ಹೋರಾಟ ಮತ್ತೇ ಚೇತರಿಸಿಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕಾಲ್ನಡಿಗೆಯ ದಣಿವು, ಕೂಗಾಟ, ಆಕ್ರೋಶದ ಎದೆ ಉಸಿರಿಗೆ ಬಿಡುವು ನೀಡಿದಂತೆ ರೈತರು ದಸರೆ ಹಬ್ಬದ ಸಂಭ್ರಮಕ್ಕೆ ತಮ್ಮ ಹೊಲ ಮನೆಗಳಿಗೆ ತಲುಪಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಬಿಡುವಿನ ಕಾಲಾವಕಾಶ ಸದುಪಯೋಗ ಪಡೆದುಕೊಂಡು ರೈತರ ಬೆನ್ನೆಲು ಗಟ್ಟಿಗೊಳಿಸಿ, ಶಾಶ್ವತ ಪರಿಹಾರ ಕಂಡುಕೊಂಡರೆ ದುಡಿಯುವ ಕೈಗಳು ಬೀದಿಗಿಳಿಯುವುದು ತಪ್ಪುತ್ತದೆ.

***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ ಕೃಷಿ

ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ

ರಾಷ್ಟ್ರಮಟ್ಟದಲ್ಲಿ ಇದೇ ಮೊದಲ ಬಾರಿಗೆ "ಲಾಭ ಹಂಚಿಕೊಳ್ಳುವ(Profit Sharing)" ಸೂತ್ರ ಜಾರಿಗೊಳಿಸಲಾಗುತ್ತಿದೆ ಎಂದು ಬೆಳಗಾವಿ ಜಿಲ್ಲಾ ಆಡಳಿತ  ಇಂದು ಪ್ರಕಟಣೆ ಹೊರಡಿಸಿದೆ

Admin